95 ಹಿರಿಯ ಪ್ರಾಥಮಿಕ ಶಾಲೆಗಳು ಇನ್ನು ಹೈಸ್ಕೂಲ್, ಸರ್ಕಾರ ಮಹತ್ವದ ಆದೇಶ
95 ಹಿರಿಯ ಪ್ರಾಥಮಿಕ ಶಾಲೆಗಳು ಇನ್ನು ಹೈಸ್ಕೂಲ್ ಉನ್ನತೀಕರಣಕ್ಕೆ ಮಂಜೂರಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಬೆಂಗಳೂರು (ಜು.31): ರಾಜ್ಯದ ವಿವಿಧ ಜಿಲ್ಲೆಗಳ 95 ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯದ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಲು ಕೋರಿ ಸರ್ಕಾರಕ್ಕೆ ಏಕ ಕಡತದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಪರಿಶೀಲಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆರ್ಥಿಕ ಇಲಾಖೆಯ ಅನುಮತಿ ಪಡೆದು ಈಗಾಗಲೇ ಐದು ಶಾಲೆಗಳ ಉನ್ನತೀಕರಣಕ್ಕೆ ಆದೇಶಿಸಿತ್ತು. ಇದೀಗ ಉಳಿದ 95 ಶಾಲೆಗಳ ಉನ್ನತೀಕರಣಕ್ಕೆ ಮಂಜೂರಾತಿ ನೀಡಿದೆ. ಆದೇಶದ ಪ್ರಕಾರ ಯಾದಗಿರಿ, ಹಾವೇರಿ ಜಿಲ್ಲೆಗಳ ತಲಾ 16 ಶಾಲೆಗಳು, ಚಿಕ್ಕೋಡಿ, ಬಳ್ಳಾರಿ ಶೈಕ್ಷಣಿಕ ಜಿಲ್ಲೆಗಳ ತಲಾ 11 ಶಾಲೆಗಳು, ಕೊಪ್ಪಳ, ರಾಯಚೂರು, ಬೆಳಗಾವಿ ಜಿಲ್ಲೆಗಳ ತಲಾ 6, ವಿಜಯಪುರ 5, ಕಲಬುರಗಿಯ 4, ಗದಗ, ಬಾಗಲಕೋಟೆ ಜಿಲ್ಲೆಯ ಎರಡು ಶಾಲೆ, ಧಾರವಾಡದ ಮೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಶಿರಸಿ ಶೈಕ್ಷಣಿಕ ಜಿಲ್ಲೆಗಳ ತಲಾ ಒಂದು ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಉನ್ನತೀಕರಿಸಲು ಆದೇಶಿಸಲಾಗಿದೆ.
ಅಗರ ಸರ್ಕಾರಿ ಶಾಲೆಯಲ್ಲಿ ರೋಬೋಗಳಿಂದ ಪಾಠ: ಬೊಮ್ಮನಹಳ್ಳಿ: ದೇಶವನ್ನು ಪ್ರೀತಿಸುವ, ಗುರು ಹಿರಿಯರನ್ನು ಗೌರಸುವ ವ್ಯಕ್ತಿತ್ವವನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಪಿಸಿಕೊಳ್ಳಬೇಕು ಎಂದು ಮುಖ್ಯ ಸಚೇತಕ ಹಾಗೂ ಶಾಸಕ ಎಂ.ಸತೀಶ್ ರೆಡ್ಡಿ ನುಡಿದರು.ಬೆಂಗಳೂರು ದಕ್ಷಿಣ ವಲಯದ ಹೊಂಗಸಂದ್ರ ಕ್ಲಸ್ಟರ್ ಮಟ್ಟದ ವಾರ್ಷಿಕ ಕ್ರೀಡಾ ಕೂಟವನ್ನು ರೂಪೇನ ಅಗ್ರಹಾರದ ರೆಡ್ಡಿ ಜನಸಂಘ ಪ್ರೌಢಶಾಲೆಯಲ್ಲಿ ಶಾಸಕರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶಾಸಕರು,
ಅಗರ ಸರ್ಕಾರಿ ಶಾಲೆಯಲ್ಲಿ ದೇಶದಲ್ಲೇ ಮೊಟ್ಟಮೊದಲ ಭಾರಿ ರೋಬೋಗಳಿಂದ ಪಾಠ ಪ್ರವಚನಗಳನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತದೆ. ಈ ನೂತನ ಪ್ರಯೋಗಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಅಗತ್ಯರುವ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಆಶ್ರಿತ್ ಗ್ರೂಪ್ ಮಾಲಿಕ ಶ್ರೀನಿವಾಸ ರೆಡ್ಡಿ, ಬಿಜೆಪಿ ಮುಖಂಡರಾದ ನರೇಂದ್ರ ಬಾಬು ಅವರು ಶಾಲೆಯ ಅಡಳಿತ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳ ಬಂದ್‌ಗೆ ವಿರೋಧ, ಎಸ್‌ಎಫ್‌ಐ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭನೆ
ಹಾವೇರಿ: ಕರ್ನಾಟಕ ರಾಜ್ಯ ಸರ್ಕಾರವು 13,800 ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿರುವ ನಂ.2 ಸರ್ಕಾರಿ ಶಾಲೆ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ 13,800 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಹೆಸರಿನಲ್ಲಿ ಮುಚ್ಚುವ ನಿರ್ಧಾರ ಮಾಡಿರುವುದು ಬಡವರ, ಕಾರ್ಮಿಕರ, ಕೂಲಿಕಾರರ, ದಲಿತರ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿಸುತ್ತದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ಮುಚ್ಚಿಸುವ ನಿರ್ಧಾರವನ್ನು ಮುಂದುವರೆಸಬಾರದು. ತಕ್ಷಣವೇ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಸರ್ಕಾರದ ಅಧಿಕಾರಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಬಳ್ಳಾರಿ: ಎಂಎಲ್‌ಸಿ ವೈ.ಎಂ. ಸತೀಶ ಸ್ಪಂದನೆ: ನೀಗಿದ ಶಾಲೆ ಸಮಸ್ಯೆ
ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳೇ ನೇರ ಹೊಣೆಗಾರರಾಗಿವೆ. ನಮ್ಮ ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿದ ಪರಿಣಾಮವಾಗಿ 1100ಕ್ಕಿಂತ ಅಧಿಕ ಸರ್ಕಾರಿ ಶಾಲೆಗಳು ಹಾಗೂ ಆಟದ ಮೈದಾನ ಹಾಳಾಗಿದ್ದು, ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಈ ಶಾಲೆಗಳಿಗೆ ವಿಶೇಷವಾಗಿ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕು. ಇದನ್ನು ಬಿಟ್ಟು ವಿಲೀನದ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಮುಂದುವರೆಸಬಾರದು ಎಂದು ಒತ್ತಾಯಿಸಿದರು.
ಕನ್ನಡ ಶಾಲೆ ಮುಚ್ಚಿದರೆ ಮಾತೃಭಾಷೆಗೆ ಕುತ್ತು: ಡಾ.ಮಹೇಶ್ ಜೋಷಿ
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ರೇಣುಕಾ ಕಹಾರ, ಎಸ್‌ಎಫ್‌ಐ ತಾಲೂಕು ಸಹಕಾರ್ಯದರ್ಶಿ ಅರುಣ್ ಕಡಕೋಳ, ಮುಖಂಡರಾದ ಮನೋಜ್ ಅಣ್ಣಗೇರಿ, ಮುಬಾರಕ್ ಎಸ್, ಮನೋಜ್ ಮುದುಕಣ್ಣನವರ, ನಾಗರಾಜ ಎನ್.ಕೆ, ಅಸ್ಲಾಂ, ಮಾಲತೇಶ ಎಸ್.ಡಿ, ಪ್ರಜ್ವಲ್ ಎಚ್.ಕೆ, ಸುಲೇಮಾನ, ಮುತ್ತುರಾಜ, ಬಸವರಾಜ, ವಿಜಯ, ಖಾಜಾ, ಕಿರಣ, ವಿನಾಯಕ, ಹೋನದ, ಭಾಗ್ಯ, ಹರ್ಷಿತಾ, ಗಿರಿಜಾ, ಐಶ್ವರ್ಯ ವೈ, ಚೈತನ್ಯ ಆರ್.ಡಿ, ಭವ್ಯ, ಪವಿತ್ರಾ, ಸುಮಿತ್ರಾ, ಕಸ್ತೂರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.