ಪ್ರಥಮ PUC ಫಲಿತಾಂಶ ಪ್ರಕಟ, ಆನ್‌ಲೈನ್‌ನಲ್ಲಿ ಫಲಿತಾಂಶ ಚೆಕ್‌ ಮಾಡಲು ಇಲ್ಲಿದೆ ವಿಧಾನ

* ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ 
* ರಿಸಲ್ಟ್ ಬಿಡುಗಡೆ ಮಾಡಿದ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ
* ಆನ್‌ಲೈನಲ್ಲಿ ನೋಡೋದು ಹೇಗೆ ಎನ್ನುವ ವಿಧಾನ ಈ ಕೆಳಗಿನಂತಿದೆ

Karnataka first puc 2022 result released here I how to check rbj

ಬೆಂಗಳೂರು,(ಏ.30):  ಪ್ರೀ-ಯೂನಿವರ್ಸಿಟಿ ಸರ್ಟಿಫಿಕೇಟ್ (PUC) ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.  ಇಂದು (ಏ.30)  ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಫಸ್ಟ್ ಪಿಯುಸಿ ಫಲಿತಾಂಶ (First PUC Result)) ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಆನ್‌ಲೈನ್‌ ನಲ್ಲೇ ಚೆಕ್ ಮಾಡಿಕೊಳ್ಳಬಹುದಾಗಿದೆ.ಇನ್ನು ಪಿಯು ಫಲಿತಾಂಶವನ್ನು ಆನ್‌ಲೈನಲ್ಲಿ ನೋಡೋದು ಹೇಗೆ ಎನ್ನುವ ವಿಧಾನ ಈ ಕೆಳಗಿನಂತಿದೆ ನೋಡಿ.

ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್- result.dkpucpa.com ಮೂಲಕ ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಪರಿಶೀಲಿಸಬಹುದು. 

ಹಿಜಾಬ್‌ ವಿವಾದದ ಮಧ್ಯೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತ್ಯ, ಮೇಗೆ ಫಲಿತಾಂಶ

ರಿಸಲ್ಟ್ ಚೆಕ್ ಮಾಡುವ ವಿಧಾನ ಇಂತಿದೆ
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- result.dkpucpa.com
ಹಂತ 2: PUC 1 ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
ಹಂತ 4: ಪಿಯುಸಿ 1 ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ
ಹಂತ 5: ಪಿಯುಸಿ 1 ಫಲಿತಾಂಶವನ್ನು ಡೌನ್‌ಲೋಡ್ ಮಾಡಿ, ದಾಖಲೆಗಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

ಮೇನಲ್ಲಿ SSLC ಫಲಿತಾಂಶ
 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ(SSLC Exam) ಮುಕ್ತಾಯಗೊಂಡಿದ್ದು, ಏ.21ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ(Result) ಪ್ರಕಟವಾಗುವ ಸಾಧ್ಯತೆ ಇದೆ.

 ಹಿಜಾಬ್‌ ವಿವಾದ(Hijab Controversy) ತೀವ್ರಗೊಂಡಿದ್ದ ನಡುವೆಯೇ ಮಾ.28ರಿಂದ ಆರಂಭವಾಗಿದ್ದ ಪರೀಕ್ಷೆಯು ನಿಗದಿಯಂತೆ ಏ.11ರ ಸೋಮವಾರ ಕೊನೆಗೊಂಡಿದೆ. ಬಹುತೇಕ ಎಲ್ಲ ವಿದ್ಯಾರ್ಥಿಗಳು(Students) ಸರ್ಕಾರದ ಆದೇಶದಂತೆ ಸಮವಸ್ತ್ರ ಧರಿಸಿ ಬಂದು ಪರೀಕ್ಷೆ ಬರೆದಿದ್ದಾರೆ. ಮೊದಲ ದಿನ ಚಿಕ್ಕೋಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಆರು ಜನ ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದು ಸಿಕ್ಕಿಬಿದ್ದಿದ್ದು ಹೊರತುಪಡಿಸಿದರೆ ಉಳಿದ ಪರೀಕ್ಷೆಗಳು ಅಕ್ರಮಗಳಿಲ್ಲದೆ ನಡೆದಿವೆ.

ಸರಾಗವಾಗಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ
ರಾಜ್ಯಾದ್ಯಂತ ಶುಕ್ರವಾರದಿಂದ (ಏ.22) ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು,   6.8 ಲಕ್ಷಕ್ಕೂ ಹೆಚ್ಚು (6,84,255) ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಎದುರಿಸುತ್ತಿದ್ದಾರೆ. 1076 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ.

ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಪ್ರತಿ ವರ್ಷದಂತೆ ಈ ಬಾರಿ ದ್ವಿತೀಯ PU ಫಲಿತಾಂಶ ತಡವಾಗುವುದಿಲ್ಲ. ದ್ವಿತೀಯ PU ಪರೀಕ್ಷೆ ಫಲಿತಾಂಶ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈವರೆಗೆ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಮಾಡಲಾಗ್ತಿತ್ತು. ಆದರೆ ಈ ಬಾರಿ ಒಂದೊಂದು ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios