10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಗೊಂದಲಕ್ಕೆ ಪರೀಕ್ಷಾ ಸಹಾಯವಾಣಿ ಆರಂಭ

ಇದೇ ಮಾ.31ರಿಂದ ಏಪ್ರಿಲ್‌ 15ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡುವ ಯಾವುದೇ ಸಂದೇಹ, ಆತಂಕ, ಗೊಂದಲಗಳನ್ನು ಪರಿಹರಿಸಲು  ಸಹಾಯವಾಣಿ 080- 23310075/76 ಆರಂಭಿಸಲಾಗಿದೆ.

Karnataka Education department start  SSLC Exam helpline gow

ಬೆಂಗಳೂರು (ಮಾ.17): ಇದೇ ಮಾ.31ರಿಂದ ಏಪ್ರಿಲ್‌ 15ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡುವ ಯಾವುದೇ ಸಂದೇಹ, ಆತಂಕ, ಗೊಂದಲಗಳನ್ನು ಪರಿಹರಿಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯನಿರ್ಣಯ ಮಂಡಳಿ ಸಹಾಯವಾಣಿ 080- 23310075 , 080- 23310076 ಆರಂಭಿಸಿದೆ.

Exam Date: 5, 8ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಪೂರ್ಣ ಮಾಹಿತಿ

ಈ ಸಹಾಯವಾಣಿಯು ಮಾ.20ರಿಂದ 28ರವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನ 3ರಿಂದ ಸಂಜೆ 7.30ರವರೆಗೆ ಮತ್ತು ಮಾ.26ರಂದು ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿದೆ. ಪರೀಕ್ಷೆ ನಡೆಯುವ ಮಾ.31ರಿಂದ ಏ.15ರ ವರೆಗಿನ ದಿನಗಳಲ್ಲಿ ಈ ಸಹಾಯವಾಣಿ ಕೇಂದ್ರ ನಿಯಂತ್ರಣ ಕೊಠಡಿಯಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.

ಖಾಸಗಿ ಶಾಲಾ ಮಕ್ಕಳ ಪಠ್ಯಪುಸ್ತಕ ಶೇ.25ರಷ್ಟು ದುಬಾರಿ: ಬೆಲೆ ಏರಿಕೆ, ಜಿಎಸ್‌ಟಿ ಕಾರಣ

10 ನೇ ತರಗತಿಯ ಅಂತಿಮ ವೇಳಾ ಪಟ್ಟಿ ಇಂತಿದೆ
ಮಾ.31ರಂದು - ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ.)
ಏ.4ರಂದು - ಗಣಿತ, ಸಮಾಜಶಾಸ್ತ್ರ
ಏ. 6ರಂದು - ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಏ. 8ರಂದು - ಕೋರ್ ವಿಷಯ, ಅರ್ಥಶಾಸ್ತ್ರ
ಏ. 10ರಂದು - ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ
ಏ. 12ರಂದು - ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ.)
ಏ. 15ರಂದು - ಸಮಾಜ ವಿಜ್ಞಾನ

Latest Videos
Follow Us:
Download App:
  • android
  • ios