ಖಾಸಗಿ ಶಾಲಾ ಮಕ್ಕಳ ಪಠ್ಯಪುಸ್ತಕ ಶೇ.25ರಷ್ಟು ದುಬಾರಿ: ಬೆಲೆ ಏರಿಕೆ, ಜಿಎಸ್‌ಟಿ ಕಾರಣ
ರಾಜ್ಯ ಪಠ್ಯಕ್ರಮ ಬೋಧಿಸುವ ಖಾಸಗಿ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿನ ಮಕ್ಕಳಿಗೆ ಸರ್ಕಾರವೇ ಪೂರೈಸುವ ಪಠ್ಯಪುಸ್ತಕಗಳ ಬೆಲೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.25ರಷ್ಟು ಏರಿಕೆಯಾಗಲಿದೆ.
ಬೆಂಗಳೂರು (ಮಾ.17): ರಾಜ್ಯ ಪಠ್ಯಕ್ರಮ ಬೋಧಿಸುವ ಖಾಸಗಿ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿನ ಮಕ್ಕಳಿಗೆ ಸರ್ಕಾರವೇ ಪೂರೈಸುವ ಪಠ್ಯಪುಸ್ತಕಗಳ ಬೆಲೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.25ರಷ್ಟು ಏರಿಕೆಯಾಗಲಿದೆ. ಇದರಿಂದ ಸುಮಾರು 19 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಖಾಸಗಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿನ ಸುಮಾರು 52 ಲಕ್ಷ ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗಲಿದೆ.
ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಪ್ರತಿ ವರ್ಷ ಅಗತ್ಯಕ್ಕನುಗುಣವಾಗಿ ಮುದ್ರಿಸಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಪೂರೈಸುತ್ತದೆ. ಆದರೆ, ಸರ್ಕಾರಿ ಮತ್ತು ಅನುದಾನಿತ ಶಾಲೆ, ಕಾಲೇಜುಗಳಿಗೆ ಉಚಿತವಾಗಿ ಪಠ್ಯಪುಸ್ತಕ ಪೂರೈಸಿದರೆ, ಖಾಸಗಿ ಶಾಲೆ, ಕಾಲೇಜುಗಳು 1ರಿಂದ 12ನೇ ತರಗತಿನ ತಮ್ಮ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಸರ್ಕಾರಕ್ಕೆ ಶೇ.10ರಷ್ಟು ಮುಂಗಡ ಹಣ ಪಾವತಿಸಿ ಇಂಡೆಟ್ (ಬೇಡಿಕೆ) ಸಲ್ಲಿಸಬೇಕು. ಇದರ ಆಧಾರದ ಮೇಲೆ ಶಿಕ್ಷಣ ಇಲಾಖೆಯು ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (ಕೆಟಿಬಿಎಸ್) ಮೂಲಕ ಬೇಡಿಕೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಪೂರೈಕೆ ಮಾಡಲಿದೆ.
ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ
2023-24ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿರುವ ಶಾಲೆಗಳ ಮುಖ್ಯಸ್ಥರು ಹೇಳುವ ಪ್ರಕಾರ, ಕಳೆದ ವರ್ಷಕ್ಕಿಂತ ಈ ವರ್ಷ ಪಠ್ಯಪುಸ್ತಕಗಳ ಬೆಲೆ ಶೇ.20ರಿಂದ 25ರಷ್ಟು ಹೆಚ್ಚಿಸಲಾಗಿದೆ. ಕಳೆದ ಸಾಲಿನಲ್ಲಿ 46 ರು. ಇದ್ದ ಗಣಿತ ಭಾಗ 2 ಪುಸ್ತಕದ ಮಾರಾಟ ಬೆಲೆ ಈಗ 60 ರು.ಗೆ, 45 ರು. ಇದ್ದ ಗಣಿತ ಭಾಗ 1 ಬೆಲೆ 58 ರು.ಗೆ, 34 ರು. ಇದ್ದ ವಿಜ್ಞಾನ ಭಾಗ 2 ಬೆಲೆ 44 ರು.ಗೆ ಏರಿಕೆಯಾಗಿದೆ. ಸಮಾಜ ವಿಜ್ಞಾನ ಭಾಗ 1 ಮತ್ತು ಇಂಗ್ಲಿಷ್ ಪುಸ್ತಕಗಳ ಬೆಲೆಯಲ್ಲಿ 11 ರು., ವಿಜ್ಞಾನ ಭಾಗ 2 ಬೆಲೆ 10 ರು. ಹೆಚ್ಚಾಗಿದೆ. ಹೀಗೆ ಬಹುತೇಕ ಎಲ್ಲ ಪುಸಕ್ತಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಇದರ ಹೊರೆ ಪೋಷಕರಿಗೆ ಬೇಳಲಿದೆ ಎನ್ನುತ್ತಾರೆ ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್.
ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್ ಕುಮಾರ್ ಕಟೀಲ್
ಬೆಲೆ ಏರಿಕೆ, ಜಿಎಸ್‌ಟಿ ಕಾರಣ: ಕೋವಿಡ್ ಹಾಗೂ ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಕಾಗದದ ಬೆಲೆ ಹೆಚ್ಚಳವಾಗಿರುವುದರಿಂದ ಪಠ್ಯಪುಸ್ತಕದ ಬೆಲೆಯನ್ನು ಹೆಚ್ಚಿಸಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು. ಕಾಗದದ ಬೆಲೆ, ಮುದ್ರಣದ ವೆಚ್ಚಗಳಿಗೆ ಅನುಗುಣವಾಗಿ ಪ್ರತಿ ವರ್ಷ ಪಠ್ಯಪುಸ್ತಕದ ಬೆಲೆ ಹೆಚ್ಚಳಕ್ಕೆ ಅವಕಾಶವಿದೆ. ಅದೇ ರೀತಿ ಈ ವರ್ಷವೂ ಮಾಡಲಾಗಿದೆ. ಇದು ಹೊಸದೇನಲ್ಲ. ಆದರೆ, ಹಿಂದಿನ ವರ್ಷಗಳಿಗಿಂತ ಈ ಬಾರಿ ಕಾಗದದ ಬೆಲೆ ಶೇ.65ರಷ್ಟುಏರಿಕೆಯಾಗಿದೆ. ಅಲ್ಲದೆ ಮೂರು ವರ್ಷಗಳ ಹಿಂದೆ ಶೇ.3ರಷ್ಟಿದ್ದ ಜಿಎಸ್‌ಟಿ ನಂತರ ಶೇ.12ಕ್ಕೆ ಈಗ ಶೇ.18ಕ್ಕೆ ಏರಿಕೆಯಾಗಿದೆ. ಕೆಲವು ಸಮಯದಲ್ಲಿ ಹಣ ಕೊಟ್ಟರೂ ಕಾಗದದ ಕೊರತೆ ಅನುಭವಿಸಿದ್ದೂ ಇದೆ. ಈ ಎಲ್ಲ ಕಾರಣಗಳಿಂದ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.