ಪುಕ್ಕಟೆ ಗ್ಯಾರಂಟಿ ಕೊಡ್ತೀವಂತ, ಕಾರ್ಮಿಕರ ಮಕ್ಕಳ ಸ್ಕಾಲರ್‌ಶಿಪ್‌ಗೆ ಕನ್ನ ಹಾಕಿತೇ ಸರ್ಕಾರ?

ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಡ್ತೀವಂತಾ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೊಡುತ್ತಿದ್ದ ವಿದ್ಯಾರ್ಥಿ ವೇತನಕ್ಕೆ ಕನ್ನ ಹಾಕಿದೆ.

Karnataka congress govt stopped labour department student scholarship scheme sat

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.14):
ಕಟ್ಟಡ‌ ಕಾರ್ಮಿಕರು ಹಾಗು ಕೂಲಿ ಕಾರ್ಮಿಕರ‌ ಮಕ್ಕಳು‌ ಶಿಕ್ಷಣದಿಂದ ವಂಚಿತರಾಗದಿರಲಿ ಅಂತ ವಿದ್ಯಾರ್ಥಿಗಳಿಗೆ ಸರ್ಕಾರ ಸ್ಕಾಲರ್ ಷಿಪ್ ಕೊಡ್ತಿತ್ತು. ಆದ್ರೆ ಗ್ಯಾರಂಟಿ ಭಾಗ್ಯ ಕೊಡುವ ಭರಾಟೆಯಲ್ಲಿ  ಆ ಯೋಜನೆಯನ್ನೇ  ಸರ್ಕಾರ ನಿಲ್ಲಿಸಿದೆ ಎಂಬ ಆರೋಪ‌ ಕೇಳಿ ಬಂದಿದೆ. ಹೀಗಾಗಿ ಬಡ ಕಾರ್ಮಿಕರ ಮಕ್ಕಳು ಕಂಗಾಲಾಗಿದ್ದಾರೆ.

ಸರ್ಕಾರ ಯಾವುದೇ ಯೋಜನೆ ತಂದರು ಕಟ್ಟಡ ಕಾರ್ಮಿಕರು ಹಾಗು ಬೀದಿಬದಿ ವ್ಯಾಪಾರಿಗಳು ಹಾಗು ಕೂಲಿ ಕಾರ್ಮಿಕರ ಮಕ್ಕಳ‌ ವಿಧ್ಯಾಭ್ಯಾಸ SSLC ದಾಟುತ್ತಿರಲಿಲ್ಲ. ಹೀಗಾಗಿ ಅವರ ಮಕ್ಕಳ‌ ಭವಿಷ್ಯ ಹಾಗು ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ 1ನೇ ತರಗತಿಯಿಂದ ಪಿಯುಸಿವರೆಗೆ ಓದುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ  ಸ್ಕಾಲರ್ಶಿಪ್ ಕೊಡುವ ಯೋಜನೆಯನ್ನು ಸರ್ಕಾರ  ಆರಂಭಿಸಿತ್ತು. ಹೀಗಾಗಿ‌ ವಿದ್ಯಾರ್ಥಿಗಳು‌ ಸಹ ನಾ  ಮುಂದು, ತಾ ಮುಂದು ಅಂತ ಈ ಯೋಜನೆಯ ಲಾಭ ಪಡೆಯಲು ಆನ್ ಲೈನಲ್ಲಿ‌ ಅರ್ಜಿ ಹಾಕಿದ್ದರು. ಕೆಲ‌ ವಿದ್ಯಾರ್ಥಿಗಳು ಪ್ರತಿವರ್ಷ 12000 ಪ್ರೋತ್ಸಾಹಧನ ಸಹ ಪಡೆದು ಉನ್ನತ ವ್ಯಾಸಂಗಕ್ಕೆ ಸಹ ತೆರಳಿದ್ದಾರೆ.

ಹಾವೇರಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಜೀವ ಭಯವಿದ್ದರೂ, ಒಂಟಿಯಾಗಿ ಮನೆಗೆ ಬಿಟ್ಟು ಹೋದ ಪೊಲೀಸರು

ಆದ್ರೆ 2022 -2023 ನೇ ಸಾಲಿನ ಹಣ ಮಾತ್ರ‌ಈವರೆಗೆ ಕಾರ್ಮಿಕ‌ ಇಲಾಖೆಯಿಂದ ವಿದ್ಯಾರ್ಥಿಗಳ ಖಾತೆಗೆ ಜಮಾವಾಗಿಲ್ಲ. ಕಳೆದ ಒಂದು ವರ್ಷದಿಂದ ಈ ಯೋಜನೆಗೆ‌ ಬ್ರೇಕ್ ಬಿದ್ದಿದೆ. ಹೀಗಾಗಿ ಆಕ್ರೋಶಗೊಂಡಿರೊ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರು, ಕಾಂಗ್ರೆಸ್ ಸರ್ಕಾರದ‌ ವಿರುದ್ಧ ಕಿಡಿಕಾರಿದ್ದಾರೆ. ಪುಕ್ಕಟೆ (ಗ್ಯಾರಂಟಿ) ಭಾಗ್ಯ ನೀಡುವ ಭರಾಟೆಯಲ್ಲಿರುವ ಈ ಸರ್ಕಾರ ಕಾರ್ಮಿಕ ಇಲಾಖೆಯಿಂದ‌ ನೀಡ್ತಿದ್ದ  ಪ್ರೋತ್ಸಾಹ ಧನವನ್ನು‌‌ ನಿಲ್ಲಿಸಿದೆ. ಹೀಗಾಗಿ ಬಡ ಕಾರ್ಮಿಕರ‌ಮಕ್ಕಳು ಪ್ರೋತ್ಸಾಹಧನ  ಸಿಗಲಾರದೇ ಕಂಗಾಲಾಗಿದ್ದಾರೆ.ಆದ್ದರಿಂದ,ಕೂಡಲೇ ಈ ಯೋಜನೆ ಮುಂದುವರೆಸಬೇಕು. ಇಲ್ಲವಾದ್ರೆ ಸರ್ಕಾರದ ವಿರುದ್ಧ ಉಗ್ರ ಹೋರಾ‌ಟ‌ ನಡೆಸುವುದಾಗಿ ಕಟ್ಟಡ‌ ಕಾರ್ಮಿಕರ ಪರ ಹೋರಾಟಗಾರರು‌ ಎಚ್ಚರಿಸಿದ್ದಾರೆ.

ಇನ್ನು ಈ ಬಗ್ಗೆ ಕಾರ್ಮಿಕ‌ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ, ಆನ್ ಲೈನ್ ನಲ್ಲಿ ಅರ್ಜಿ‌ಸಲ್ಲಿಸಿರುವ ವಿದ್ಯಾರ್ಥಿಗಳ‌ ಮಾಹಿತಿ ಜಿಲ್ಲಾ‌ಕಾರ್ಮಿಕ ಕಚೇರಿಗೆ ಮಾಹಿತಿ ಇಲ್ಲ. ಆದ್ರೆ ವಿದ್ಯಾರ್ಥಿಗಳು ಸಲ್ಲಿಸಿರುವ ದಾಖಲೆಗಳಲ್ಲಿ ದೋಷ‌ ಕಂಡುಬಂದಿದೆ. ಸ್ಯಾಟ್ ಗೆ ಅವರ ಧಾಖಲೆಗಳು ಮಿಸ್ ಮ್ಯಾಚ್ ಆಗಿರುವ ಹಿನ್ನಲೆಯಲ್ಲಿ   ರಾಜ್ಯದ 2,69,669 ಜನ ವಿದ್ಯಾರ್ಥಿಗಳ ಖಾತೆಗೆ‌ ಸರ್ಕಾರದಿಂದ ಮಂಜೂರಾಗುವ  ಪ್ರೋತ್ಸಾಹ ಧನ ಜಮಾ ಆಗಿಲ್ಲ.ಇನ್ನು 15 ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸ್ತಿವಿ ಅಂತ‌ ಹಾರಿಕೆ‌‌ ಉತ್ತರ‌ ನೀಡಿದ್ದಾರೆ. ಆದ್ರೆ ಕಳೆದ ಹತ್ತು ವರ್ಷಗಳಿಂದ  ಸಹಾಯಧನ ಪಡೆದಿದ್ದ ವಿದ್ಯಾರ್ಥಿಗಳಿಗೆ ದಿಡೀರ್ ಸ್ಕಾಲರ್ ಶಿಪ್ ನಿಂತಿರೋದ್ರಿಂದ ಸರ್ಕಾರದ ನಡೆ ಬಾರಿ ಅನುಮಾನ ಮೂಡಿಸಿದೆ‌.

ಇನ್ಫೋಸಿಸ್‌ ನಾರಾಯಣಮೂರ್ತಿ ಗುಟ್ಟು ರಟ್ಟು; ಬೆಳಗ್ಗೆ 6ಕ್ಕೆ ಆಫೀಸು, ರಾತ್ರಿ 9ಕ್ಕೆ ಮನೆಗೆ ವಾಪಸು!

ಒಟ್ಟಾರೆ ಕಾರ್ಮಿಕರ ಮಕ್ಕಳಿಗೆ ಸರ್ಕಾರ‌ ನೀಡ್ತಿದ್ದ‌ ಪ್ರೋತ್ಸಾಹ ಧನಕ್ಕೆ ಕಳೆದ ಒಂದು ವರ್ಷದಿಂದ ಬ್ರೇಕ್ ಬಿದ್ದಿದೆ.ಹೀಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಮಕ್ಕಳ ವಿದ್ಯಾಭ್ಯಾಸ ಮೊಟಕಾಗುವ ಆತಂಕ ಕಾರ್ಮಿಕರಲ್ಲಿ ಶುರುವಾಗಿದೆ. ಹೀಗಾಗಿ ಸರ್ಕಾರ ಈ ಯೋಜನೆ ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Latest Videos
Follow Us:
Download App:
  • android
  • ios