ಹಾವೇರಿ ಗ್ಯಾಂಗ್‌ರೇಪ್ ಸಂತ್ರಸ್ತೆಗೆ ಜೀವ ಭಯವಿದ್ದರೂ, ಒಂಟಿಯಾಗಿ ಮನೆಗೆ ಬಿಟ್ಟು ಹೋದ ಪೊಲೀಸರು
ಹಾವೇರಿ ಜಿಲ್ಲೆ ಹಾನಗಲ್ ಯುವಕರಿಂದ ಗ್ಯಾಂಗ್ ರೇಪ್‌ಗೆ ಒಳಗಾದ ಸಂತ್ರಸ್ತೆಗೆ ಜೀವ ಭಯವಿದ್ದರೂ ಪೊಲೀಸರು ಆಕೆಯನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.
ಉತ್ತರ ಕನ್ನಡ (ಜ.14): ಹಾವೇರಿಯ ಹಾನಗಲ್ ಪುಂಡ ಯುವಕರಿಂದ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಮಹಿಳೆಯನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ 6 ಜರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಸ್ವತಃ ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಆಪರಾಧಿಗಳು ಸಾಕ್ಷ್ಯ ನಾಶಕ್ಕಾಗಿ ಸಂತ್ರಸ್ತೆಯ ಜೀವಕ್ಕೆ ಅಪಾಯ ಮಾಡುವ ಸಾಧ್ಯತೆಯಿದ್ದರೂ ಪೊಲೀಸರು, ಸಂತ್ರಸ್ತೆಯನ್ನು ಸ್ಥಳ ಮಹಜರಿಗೆ ಹೋಗೋಣ ಎಮದು ಕರೆತಂದು ಒಬ್ಬಂಟಿಯಾಗಿ ಮನೆಗೆ ಬಿಟ್ಟು ಹೋಗಿದ್ದಾರೆ. ಇದ್ಯಾವ ನ್ಯಾಯವೆಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಶಿರಸಿಯ ಮಹಿಳೆ ಸ್ವತಃ ತನ್ನ ಮೇಲೆ 6 ಜನ ಮುಸ್ಲಿಂ ಯುವಕರು ಕಾರಿನಲ್ಲಿ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿಕೊಂಡರೂ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪೊಲೀಸ್ ತನಿಖೆಗೂ ಮುನ್ನವೇ ಬಿಜೆಪಿ ನಾಯಕರು ಕಥೆಯನ್ನು ಕಟ್ಟಿ ಆರೋಪಿಗಳೆಂದು ಹೇಳುವುದನ್ನು ನಾವು ನಂಬುವುದಿಲ್ಲ. ಪೊಲೀಸ್ ತನಿಖೆ ಮತ್ತು ಸಂಸತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ಮಾಹಿತಿ ಆಧರಿಸಿ ವರದಿ ಬಂದ ನಂತರ ಈ ಪ್ರಕರಣದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.
ಹಾವೇರಿಯಲ್ಲಿ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಸಾಮೂಹಿಕ ಅತ್ಯಾಚಾರ; ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್?
ಇನ್ನು ಹಾನಗಲ್‌ನ ಯುವಕರು ಕಾರು, ಬೈಕ್ ಬಳಸಿ ಮಹಿಳೆಯನ್ನು ಗ್ಯಾಂಗ್ ರೇಪ್ ಮಾಡಿದ ಬಳಿಕ ಸಂತ್ರಸ್ತ ಮಹಿಳೆ ಮನೆಯ ಕುಟುಂಬ ಸದಸ್ಯರೊಂದಿಗೆ ಹೇಳಿಕೊಂಡಾಗಲೇ ಪ್ರಕರಣ ಬಯಲಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಿಸಿದರೂ ಪೊಲೀಸರು ಮಹಿಳೆಯ ಹೇಳಿಕೆಯನ್ನು ಪಡೆದು ಕೇವಲ ನೈತಿಕ ಪೊಲೀಸ್‌ಗಿರಿಯ ಬಗ್ಗೆ ದೂರು ದಾಖಲಿಸಿಕೊಂಡಿದ್ದರು. ಆದರೆ, ನ್ಯಾಯಾಲಯದ ಮುಂದೆ ಸಂತ್ರಸ್ತೆ ಹೇಳಿಕೆಯನ್ನು ಆಧರಿಸಿ ಗ್ಯಾಂಗ್ ರೇಪ್ ಪ್ರಕರಣದ ದೂರು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ಯಾಂಗ್ ರೇಪ್ ಆರೋಪಿಗಳು ಸಾಕ್ಷ್ಯ ನಾಶಕ್ಕಾಗಿ ಸಂತ್ರಸ್ತ ಮಹಿಳೆಗೆ ಅಪಾಯವನ್ನುಂಟು ಮಾಡುವಸಾಧ್ಯತೆಯೂ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಮಹಿಳೆಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಆದರೆ, ಹಾವೇರಿ ಜಿಲ್ಲಾ ಪೊಲೀಸರು ಈಗ ಮಹಿಳೆಯನ್ನು ಅತ್ಯಾಚಾರ ನಡೆದ ಸ್ಥಳ ಮಹಜರು ಮಾಡುವುದಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಅಲ್ಲಿಂದ ಸೀದಾ ಶಿರಸಿಯಲ್ಲಿ ಸಂತ್ರಸ್ತ ಮಹಿಳೆಯ ಮನೆಗೆ ತಂದು ಬಿಟ್ಟು ಹೋಗಿದ್ದಾರೆ. ಈಗ ಸಂತ್ರಸ್ತ ಮಹಿಳೆ ಜೀವ ಭಯದಲ್ಲಿಯೇ ಬದುಕಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಶಿರಸಿ ತಲುಪಿದ ಬಳಿಕ ನೋವು ತೋಡಿಕೊಂಡ ಸಂತ್ರಸ್ತೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಲೈಂಗಿಕ ದೌರ್ಜನ್ಯ ಕೂಡಾ ಎಸಗಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊಂದಿರುವವರಲ್ಲಿ ಇಬ್ಬರು ಈ ಪ್ರಕರಣದಲ್ಲೇ ಇಲ್ಲ. ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಇಬ್ಬರ ಫೋಟೋ ತೋರಿಸಿದ್ರು, ಆ ಇಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲ. ಒಟ್ಟು 6 ಮಂದಿ ಬಂಧಿಸಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ವಿಡಿಯೋದಲ್ಲಿ ಇದ್ದವರು ರೇಪ್ ಮಾಡಿದ ಆರೋಪಿಗಳಲ್ಲ ಎಂದು ಹೇಳಿದ್ದಾರೆ.
ಗೃಹ ಸಚಿವರು ಸಮುದಾಯ ನೋಡಿ ಕೇಸು ಹಾಕಲು ಸೂಚನೆ ಕೊಟ್ಟಿದ್ದಾರೆ; ಮಾಜಿ ಸಿಎಂ ಬೊಮ್ಮಾಯಿ ಆರೋಪ
ಪೊಲೀಸರು ಸ್ಥಳ ಪರಿಶೀಲನೆ ಎಂದು ಹೇಳಿ ಸಾಂತ್ವನ ಕೇಂದ್ರದಿಂದ ತಂದು ಇದೀಗ ಮನೆಗೆ ತಂದು ಬಿಟ್ಟಿದ್ದಾರೆ. ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೆ ಮನೆಗೆ ಬಿಟ್ಟು ಹೋಗಿದ್ದಾರೆ. ಜೀವ ಭಯವಿದ್ದರೂ ಪೊಲೀಸರನ್ನು ಮನೆ ಬಳಿ ನಿಯೋಜಿಸಿಲ್ಲ. ಬಿಜೆಪಿ ನಿಯೋಗ ಹಾನಗಲ್ ನಲ್ಲಿ ಸಂತ್ರಸ್ತೆಯನ್ನು ಭೇಟಿ ಮಡಲು ಮುಂದಾಗಿತ್ತು. ಬಿಜೆಪಿ ನಿಯೋಗ ಭೇಟಿ ಮಾಡುವುದಕ್ಕೂ ಮುನ್ನವೇ ಏಕಾಏಕಿ ಸಂತ್ರಸ್ತೆಯನ್ನು ಪೊಲೀಸರು ಆಕೆಯ ಶಿರಸಿ ಮನೆಗೆ ಶಿಫ್ಟ್ ಮಾಡಿದ್ದಾರೆ.