ಇನ್ಫೋಸಿಸ್‌ ನಾರಾಯಣಮೂರ್ತಿ ಗುಟ್ಟು ರಟ್ಟು; ಬೆಳಗ್ಗೆ 6ಕ್ಕೆ ಆಫೀಸು, ರಾತ್ರಿ 9ಕ್ಕೆ ಮನೆಗೆ ವಾಪಸು!

ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರು ಬೆಳಗ್ಗೆ 6 ಗಂಟೆಗೆ ಕಚೇರಿಗೆ ಹೋದರೆ ರಾತ್ರಿ 9.15ಕ್ಕೆ ಮನೆಗೆ ಬರುತ್ತಿದ್ದರು ಎಂದು ಹೇಳುವ ಮೂಲಕ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

Infosys Narayana Murthy success secret revealed he was working daily 15 hours duty on office sat

ಬೆಂಗಳೂರು (ಜ.14): ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇಂದಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ ಮಾತಿಗೆ ಪರ-ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ಅವರು ತಾವು ಬೆಳಗ್ಗೆ 6 ಗಂಟೆಗೆ ಕಚೇರಿಗೆ ಹೋದರೆ ರಾತ್ರಿ 9.15ಕ್ಕೆ ಮನೆಗೆ ಬರುತ್ತಿದ್ದರು ಎಂದು ಹೇಳುವ ಮೂಲಕ ತಮ್ಮ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಹೌದು, ಇನ್ಫೋಸಿಸ್‌ ನಾರಾಯಣಮೂರ್ತಿ ಎಂದರೆ ದೇಶದ ಯುವಕರಿಗೆ ಸ್ಪೂರ್ತಿ ದಾಯಕ ವ್ಯಕ್ತಿಯಾಗಿದ್ದಾರೆ. ಆದರೆ, ಅವರು ಒಂದು ಸಂಸ್ಥೆಯನ್ನು ಕಟ್ಟಲು ಪಟ್ಟ ಕಷ್ಟವನ್ನು ಇಂದಿನ ಯುವಜನರು ಸ್ವೀಕರಿಸಲು ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಇಂದಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಎನ್ ಆರ್ ನಾರಾಯಣಮೂರ್ತಿ ನೀಡಿದ ಹೇಳಿಕೆ ತುಂಬಾ ಚರ್ಚೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಲೈಫ್ ಮತ್ತು ವರ್ಕ್ ಬ್ಯಾಲನ್ಸ್ (Work and Life Balance) ಹೇಗೆ ಸಾಧ್ಯವಾಗುತ್ತದೆ ಅನೇಕರು ವಿರೋಧಿಸಿದ್ದರು. ಆದರೆ, ಇಂಡಿಯಾ ಟುಡೇ ವಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ ನಾರಾಯಣಮೂರ್ತಿ ಅವರು ಸ್ವತಃ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ತಾವು ಇನ್ಫೋಸಿಸ್​ನಲ್ಲಿದ್ದಾಗ ವಾರಕ್ಕೆ 80-90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

ಭಾರತದ ಶ್ರೀಮಂತರಲ್ಲಿ ಒಬ್ಬರಾಗಿರುವ ಈ ಮಹಿಳೆಯ ಮಗಳು ಅಮ್ಮನನ್ನೇ ಮೀರಿಸ್ತಾಳೆ!

ಕುಟುಂಬಕ್ಕೆ ಸಮಯ ಹೇಗೆ ಕೊಡುತ್ತಿದ್ದರು:
ಜೀವನದಲ್ಲಿ ಕೆಲಸದಷ್ಟೇ, ಕುಟುಂಬವೂ ಮುಖ್ಯ. ನಾನು ಕುಟುಂಬಕ್ಕೆ ಎಷ್ಟು ಸಮಯ ಕೊಡುತ್ತಿದ್ದೆ ಎನ್ನುವ ಸಂಖ್ಯೆಗಿಂತ ಕೊಟ್ಟ ಸಮಯವನ್ನು ಎಷ್ಟು ಗುಣಾತ್ಮಕವಾಗಿ ಕಳೆದಿದ್ದೇನೆ ಎನ್ನುವುದರ ಮೇಲೆ ಗಮನ ಹರಿಸುತ್ತಿದ್ದೆನು. ಹೀಗಾಗಿ, ಬೆಳಗ್ಗೆ 6 ಗಂಟೆಗೆ ಮನೆಯಿಂದ ಕಚೇರಿಗೆ ಹೊರಟರೆ ರಾತ್ರಿ 9:15ರ ಸುಮಾರಿಗೆ ಮನೆಗೆ ವಾಪಸ್ ಬರುತ್ತಿದ್ದೆನು. ಆಗ ನಾನು ಮನೆಗೆ ಬಂದೊಡನೆಯೇ ಸುಧಾ (ಪತ್ನಿ), ಮಕ್ಕಳು ಮತ್ತು ಮಾವ ಎಲ್ಲರೂ ಕಾರು ಹತ್ತುತ್ತಿದ್ದರು. ಅಲ್ಲಿಂದ ಹೋಟೆಲ್‌ಗೆ ಹೋಗಿ ಇಷ್ಟವೆನಿಸಿದ ಊಟ ಮಾಡಿ, ಕುಟುಂಬ ಸಮೇತ ಮೋಜು ಮಾಡುತ್ತಿದ್ದೆವು. ರಾತ್ರಿಯ ಒಂದೆರಡು ಗಂಟೆಗಳೇ ಮಕ್ಕಳಿಗೆ ಬಹಳ ಉಲ್ಲಾಸ ಎನಿಸುತ್ತಿತ್ತು ಎಂದು ನಾರಾಯಣಮೂರ್ತಿ ಅವರು ಕುಟುಂಬಕ್ಕೆ ಕೊಡುತ್ತಿದ್ದ ಸಮಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ; 2 ಕೋಟಿ ಮೌಲ್ಯದ ಸಾಮಗ್ರಿ ವಶ

ಗಾಂಧಿ, ಪಟೇಲರ ಉದಾಹರಣೆ ಕೊಟ್ಟ ಮೂರ್ತಿ: ನಮಗೆ ಕಠಿಣ ಪರಿಶ್ರಮ ಎಷ್ಟು ಮುಖ್ಯ ಎಂಬುದಕ್ಕೆ ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಗೋಪಾಲಕೃಷ್ಣ ಗೋಖಲೆ, ಮೌಲಾನ ಆಜಾದ್, ಸಿ. ರಾಜಗೋಪಾಲಚಾರಿ ಸೇರಿದಂತೆ ಅನೇಕ ನಾಯಕರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಕ್ಕೆ, ದೇಶವನ್ನು ಸುಸ್ಥಿತಿ ಆಡಳಿತದಲ್ಲಿ ನಡೆಸುವುದಕ್ಕಾಗಿ ಹೆಚ್ಚಿನ ಸಮಯ ನೀಡುತ್ತಿದ್ದರು. ಇವರೆಲ್ಲರೂ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಆಗುತ್ತಿರಲಿಲ್ಲ. ಈ ಮಹಾನ್ ನಾಯಕರು ಮಾಡಿದ ತ್ಯಾಗಕ್ಕೆ ಹೋಲಿಸಿದರೆ ನಮ್ಮದು ತೃಣಕ್ಕೆ ಸಮಾನವಾಗಿದೆ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios