KCET Hall Ticket 2022 ಬಿಡುಗಡೆ, ಡೌನ್ಲೋಡ್ ಮಾಡುವುದು ಹೇಗೆ?

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ   KCET 2022ರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.  ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

Karnataka Common Entrance Test 2022 Hall Ticket  out gow

ಬೆಂಗಳೂರು (ಜೂ.3): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examinations Authority - KEA) ವಿದ್ಯಾರ್ಥಿಗಳ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ) ಅಥವಾ KCET 2022ರ ಪರೀಕ್ಷೆಯ ಪ್ರವೇಶ ಪತ್ರ ಕಾರ್ಡ್ ಅಥವಾ ಹಾಲ್ ಟಿಕೆಟ್ ಅನ್ನು ಬಿಡುಗಡೆ ಮಾಡಲಾಗಿದೆ.  ಅಭ್ಯರ್ಥಿಗಳು  ಕೆಇಎ ಅಧಿಕೃತ ವೆಬ್‌ಸೈಟ್‌ kea.kar.nic.in ಅಥವಾ cetonline.karnataka.gov.in/kea ಗೆ ಭೇಟಿ ನೀಡಿ ಸಿಇಟಿ ಪರೀಕ್ಷೆಯ ಹಾಲ್ ಟಿಕೆಟ್  ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರವೇಶ ಪರೀಕ್ಷೆಯನ್ನು ಜೂನ್ 16, 17 ಮತ್ತು 18 ರಂದು ನಡೆಯಲಿದ್ದು, ಸರಕಾರ ಈಗಾಗಲೇ ಬೇಕಾದ ತಯಾರಿಯನ್ನು ನಡೆಸುತ್ತಿದೆ. ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು KCET ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. 

CHIKKAMAGALURU; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!

KCET 2022 ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

  • kea.kar.nic.in ಗೆ ಹೋಗಿ
  • admission 2022 section ವಿಭಾಗದಡಿಯಲ್ಲಿ, UG CET ಆಯ್ಕೆಮಾಡಿ
  •  admit card link ಮೇಲೆ ಕ್ಲಿಕ್ ಮಾಡಿ
  • ನೋಂದಣಿ ಸಂಖ್ಯೆ (registration number ) ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ

KCET ಪದವಿಪೂರ್ವ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಇತರ ಕೆಲವು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.  ಇನ್ನು ವೃತ್ತಿಶಿಕ್ಷಣಕ್ಕೆ (Vocational Education) ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (Common Entrance Test - CET) ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ. ಜೂನ್ 18 ರಂದು ಕನ್ನಡ ಪರೀಕ್ಷೆ  ನಡೆಯಲಿದೆ. 

ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

 ಜೂನ್ 16ರಂದು ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಹಾಗೂ 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ. 

ಈ ಹಿಂದೆ ಅರ್ಜಿ ಪ್ರಕ್ರಿಯೆಯನ್ನು ಮೇ 12, 2022 ರಂದು ಮುಕ್ತಾಯಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರ ಕೋರಿಕೆಯ ಮೇರೆಗೆ ಅಪ್ಲಿಕೇಶನ್ ವಿಂಡೋವನ್ನು ಪುನಃ ತೆರೆದು, ಮೇ 29 ಮತ್ತು 30 ರಂದು ಕೊನೆಯ ಅವಕಾಶ ನೀಡಲಾಗಿತ್ತು.  ಹೀಗಾಗಿ ಮೇ.30 ರಂದು ಬಿಡುಗಡೆ ಆಗಬೇಕಿತ್ತು ಅಡ್ಮಿಟ್ ಕಾರ್ಡ್ ಇಂದು ಬಿಡುಗಡೆಯಾಗಿದೆ.

Suvarna News Reality Check; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!

IIT Delhiಯ ಕೈಲಾಶ್ ಗುಪ್ತಾಗೆ ವಿಶ್ವದ ಅತ್ಯುತ್ತಮ ಕೋಡರ್ ಪ್ರಶಸ್ತಿ: ಐಐಟಿ ದೆಹಲಿಯಲ್ಲಿ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿರುವ ಕೈಲಾಶ್ ಗುಪ್ತಾ (Kailash Gupta)  ಅವರು  'ವಿಶ್ವದ ಅತ್ಯುತ್ತಮ ಕೋಡರ್' ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೋಡ್ ವೀಟಾದ ಹತ್ತನೇ ಸೀಸನ್‌ನಲ್ಲಿ ಭಾಗವಹಿಸಿದ 87 ದೇಶಗಳ 1 ಲಕ್ಷಕ್ಕೂ ಹೆಚ್ಚು ಕೋಡರ್‌ಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) ವಾರ್ಷಿಕವಾಗಿ ನಡೆಸುವ ಜಾಗತಿಕ ಪ್ರೋಗ್ರಾಮಿಂಗ್ ಸ್ಪರ್ಧೆಯಲ್ಲಿ ಟಾಪರ್‌ಗೆ  10,000 ಡಾಲರ್ ನಗದು ಬಹುಮಾನ ದೊರೆಯುತ್ತದೆ.

ಕೈಲಾಶ್ ಗುಪ್ತಾ   ಅವರು 2018 ರಲ್ಲಿ  ನಡೆದಿದ್ದ ಜೆಇಇ ಪರೀಕ್ಷೆಯಲ್ಲಿ ದೇಶಕ್ಕೆ    3 ನೇ ಟಾಪರ್ ಆಗಿ ಹೊರಹೊಮ್ಮಿದ್ದರು ಮಾತ್ರವಲ್ಲ  ದೆಹಲಿ ವಲಯದಲ್ಲಿ ಮೊದಲ ಸ್ಥಾನ ಪಡೆದಿದ್ದರು.

Latest Videos
Follow Us:
Download App:
  • android
  • ios