ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮುಖ್ಯಸ್ಥರಾದ ರೋಹಿತ್ ಚಕ್ರತೀರ್ಥ ಅವರು 2016ರಲ್ಲಿ ಮಾಡಿದ್ದ ಟ್ವೀಟ್  ಅನ್ನು ಹಿಡಿದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚಕ್ರತೀರ್ಥ ವಿರುದ್ಧ ನಿನ್ನೆ ಹಲವರು ಹರಿಹಾಯ್ದಿದ್ದು ಕಂಡುಬಂತು. 

Rohith Chakrathirtha tweets from 2016 surface to haunt him gow

ಬೆಂಗಳೂರು (ಜೂ.3): ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ (textbook revision committee) ಮುಖ್ಯಸ್ಥರಾದ ರೋಹಿತ್ ಚಕ್ರತೀರ್ಥ (Rohith Chakrathirtha) ಅವರು 6 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಅನ್ನು ಹಿಡಿದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚಕ್ರತೀರ್ಥ ವಿರುದ್ಧ ನಿನ್ನೆ ಹಲವರು ಹರಿಹಾಯ್ದಿದ್ದು ಕಂಡುಬಂತು. ಅದು 2016ರಲ್ಲಿ ಮಾಡಿದ್ದ ಟ್ವೀಟ್ ಅಶ್ಲೀಲತೆ, ಮಹಿಳೆಯರು, ತರಗತಿ, ಶಿಕ್ಷಕರಿಗೆ ಸಂಬಂಧಪಟ್ಟದ್ದಾಗಿತ್ತು.

ಮಹಿಳೆಯರ (Women) ಬಗ್ಗೆ ಅವಹೇಳನಕಾರಿ ಅಭಿಪ್ರಾಯಗಳು ಮತ್ತು ನಿಂದನಕಾರಿ ಅಶ್ಲೀಲ ಟ್ವೀಟ್ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹುದ್ದೆಯಿಂದ ತೆಗೆದುಹಾಕಬೇಕೆಂದು ಒತ್ತಾಯ, ಬೇಡಿಕೆಗಳು ಸಾಕಷ್ಟು ಕೇಳಿಬರುತ್ತಿವೆ. ಬುದ್ಧಿಜೀವಿಗಳ ಬರಹಗಳನ್ನು ಹೊರಗಿಟ್ಟು, ಕುವೆಂಪು ಅವರ ಕೃತಿಗಳನ್ನು ಸಂಕ್ಷಿಪ್ತಗೊಳಿಸಿ, ನಾಡಗೀತೆಯ ತಿರುಚಿದ ಆವೃತ್ತಿಯನ್ನು ಪೋಸ್ಟ್ ಮಾಡಿದ್ದಕ್ಕಾಗಿ ರೋಹಿತ್ ಚಕ್ರತೀರ್ಥ ಕಳೆದ ಹಲವು ದಿನಗಳಿಂದ ಎಡಪಂಥೀಯರು ಬುದ್ಧಿಜೀವಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Suvarna News Reality Check; ಕೋಟಿ ಹಣ ಬಿಡುಗಡೆಯಾದ್ರೂ ಮಕ್ಕಳಿಗೆ ಕಳಪೆ ಬಿಸಿಯೂಟ!

ವಕೀಲೆ ಮೈತ್ರೇಯಿ ಕೃಷ್ಣನ್, ರೋಹಿತ್ ಚಕ್ರತೀರ್ಥ ಅವರ ಅವಹೇಳನಕಾರಿ ಪೋಸ್ಟ್‌ಗಳು ಬೆಳಕಿಗೆ ಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಕರ್ನಾಟಕದ ಜನತೆಗೆ ಮಾಡುತ್ತಿರುವ ಅಪಮಾನ. ಇದರರ್ಥ ಸರ್ಕಾರ ಅವರ ಅಭಿಪ್ರಾಯಗಳನ್ನು ಒಪ್ಪುತ್ತದೆಯೇ? ಈ ವ್ಯಕ್ತಿಗೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿರುವುದು ಮತ್ತು ಅವರ ನೇತೃತ್ವದಲ್ಲಿ ಪ್ರಕಟವಾದ ಪಠ್ಯಪುಸ್ತಕಗಳಿಗೆ ಅವಕಾಶ ನೀಡಿರುವುದು ನಮ್ಮ ಮಕ್ಕಳ ಭವಿಷ್ಯಕ್ಕೆ ದ್ರೋಹ ಬಗೆದಂತೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ರೋಹಿತ್ ಚಕ್ರತೀರ್ಥರನ್ನು ಆರಂಭದಿಂದಲೂ ಬಲವಾಗಿ ಖಂಡಿಸುತ್ತಾ ಬಂದಿದೆ. ಅವರು ಭಾರತೀಯ ಜನತಾ ಪಕ್ಷ ಸರ್ಕಾರದ ಮುಖ. ಅವರ ವರ್ತನೆಯನ್ನು ಬಿಜೆಪಿ ಒಪ್ಪಿಕೊಂಡಿದೆ. ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಯಾವ ರೀತಿಯ ಜನರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ರೋಹಿತ್ ಚಕ್ರತೀರ್ಥರ ಕೊಳಕು ಪೋಸ್ಟ್‌ಗಳು ತೋರಿಸುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. 

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ರೋಹಿತ್ ಚಕ್ರತೀರ್ಥ ಅವರಿಗೆ ತರಬೇತಿ ನೀಡಿದವರು ಸ್ಯಾಡಿಸ್ಟ್ ವರ್ಗದವರು, ಅವರ ಟ್ವೀಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅವರು ಮನೋವೃತ್ತಿಯನ್ನು ತೋರಿಸುತ್ತದೆ. ಅಂತಹವರನ್ನು ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇವರ ಪಠ್ಯಗಳನ್ನು ಕಲಿತ ಮಕ್ಕಳ ಭವಿಷ್ಯ ಯಾವ ರೀತಿ ಆಗಬಹುದು ಎಂದು ನೀವು ಊಹಿಸಬಹುದು ಎಂದಿದ್ದಾರೆ.

ಪರಿಶೀಲನೆಗಾಗಿ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿ: ಮುರುಘಾ ಶ್ರೀ

ಪಠ್ಯವಾಪ್ಸಿ ವೈಚಾರಿಕ ಭಯೋತ್ಪಾದನೆ ಎಂದ ಚಕ್ರತೀರ್ಥ: ಪಠ್ಯ ಪರಿಷ್ಕರಣೆಯಾಗಿ ಪುಸ್ತಕಗಳು ಮುದ್ರಣವಾಗಿ ಶಾಲೆಗಳಿಗೆ ತಲುಪುತ್ತಿರುವ ಹೊತ್ತಿನಲ್ಲಿ ವಿವಿಧ ಸಾಹಿತಿಗಳು ಪಠ್ಯ ವಾಪಸಿ ಚಳವಳಿ ನಡೆಸುತ್ತಿರುವುದು ವೈಚಾರಿಕ ಭಯೋತ್ಪಾದನೆ, ರಾಜಕೀಯ ಹಿತಾಸಕ್ತಿಗಾಗಿ ಬಳಸುತ್ತಿರುವ ಸಾಹಿತಿಗಳ ಟೂಲ್‌ಕಿಟ್‌ ಎಂದು ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಟೀಕಿಸಿದ್ದಾರೆ.

ಸಾಹಿತಿಗಳ ಪಠ್ಯ ವಾಪಸಿ ಚಳವಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ಪಠ್ಯ ವಾಪಸಿ ಚಳವಳಿ ನಡೆಸುತ್ತಿರುವವರು ತಮ್ಮನ್ನು ಸರ್ಕಾರ ಸಮಿತಿಯ ಅಧ್ಯಕ್ಷನ್ನಾಗಿ ನೇಮಿಸಿದಾಗಲೇ ಏಕೆ ಮಾಡಲಿಲ್ಲ. ಪಠ್ಯ ಪರಿಷ್ಕರಣೆಯಲ್ಲಿ ಕೇಸರೀಕರಣವಾಗಿದೆ, ಬ್ರಾಹ್ಮಣೀಕರಣವಾಗಿದೆ ಎಂದು ಆರೋಪಿಸುವವರು ಚರ್ಚೆಗೆ ಬನ್ನಿ, ದಾಖಲೆ ಕೊಡಿ ಎಂದರೆ ಮಾತ್ರ ಬರುತ್ತಿಲ್ಲ. ಪಠ್ಯದಲ್ಲಿ ತಮ್ಮ ಬರಹಗಳು ಇಲ್ಲದ ಕೆಲವರೂ ಪತ್ರಗಳನ್ನು ಬರೆದು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಇದು ರಾಜಕೀಯ ಹಿತಾಸಕ್ತಿಗಾಗಿ ನಡೆಯುತ್ತಿರುವ ಟೂಲ್‌ ಕಿಟ್‌ ಎಂಬುದು ತಿಳಿಯುತ್ತದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios