Bhagavad Gita: ಸತ್ಪ್ರಜೆಗಳ ನಿರ್ಮಾಣಕ್ಕಾಗಿ ಭಗವದ್ಗೀತೆ ಅಗತ್ಯ: ಕಟೀಲ್
* ಮನುಷ್ಯನ ನೈತಿಕ ಮೌಲ್ಯ ಗಟ್ಟಿಗೊಳಿಸಲು ವಿಚಾರಧಾರೆ ತಿಳಿಸಬೇಕು
* ಸ್ವಂತ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಕಲಿತ ವಿದ್ಯೆ ಬಳಕೆ ಆಗಬೇಕು
* ಇವತ್ತಿನ ಕ್ರೌರ್ಯ, ಹಿಂಸೆ, ಅಪರಾಧ ಪ್ರವೃತ್ತಿ ಹೆಚ್ಚಳದ ಈ ಕಾಲಘಟ್ಟದಲ್ಲಿ ಭಗವದ್ಗೀತೆಯ ಅಗತ್ಯ
ಬೆಂಗಳೂರು(ಮಾ.23): ಶಿಕ್ಷಣ(Education) ಎಂದರೆ ಅದು ಮನುಷ್ಯನ ಸುಪ್ತ ಸಾಮರ್ಥ್ಯ ಅಭಿವ್ಯಕ್ತಿಗೊಳಿಸುವ ಪ್ರಕ್ರಿಯೆ. ಆದ್ದರಿಂದ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ(Karnataka) ಶಾಲಾ ತರಗತಿಗಳಲ್ಲಿ ಭಗವದ್ಗೀತೆಯ ಶಿಕ್ಷಣ ನೀಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್(Nalin Kumar Kateel) ಪ್ರತಿಪಾದಿಸಿದ್ದಾರೆ.
ಇಂದಿನ ಶಿಕ್ಷಣದಲ್ಲಿ ಕೇವಲ ಮೆದುಳಿಗೆ ಮಾಹಿತಿ ಕೊಡಲಾಗುತ್ತಿದೆ. ಶಿಕ್ಷಣವು ಮನುಷ್ಯನೊಳಗಿನ ವ್ಯಕ್ತಿತ್ವಕ್ಕೆ ಹೊಳಪು ಮತ್ತು ಬೆಳಕು ಕೊಡುವ ಮಾದರಿಯಲ್ಲಿರಬೇಕು. ಅಂಥ ಬೆಳಕಿನಿಂದ ಸತ್ಪ್ರಜೆಯ ನಿರ್ಮಾಣ ಸಾಧ್ಯ. ಅಂಥ ವ್ಯಕ್ತಿ ರಾಷ್ಟ್ರಕ್ಕೆ ಆಸ್ತಿ ಆಗುತ್ತಾನೆ. ವಿದ್ಯಾರ್ಥಿಯ(Students) ಸರ್ವತೋಮುಖ ವಿಕಾಸದ ಬದಲಾಗಿ ಇಂದು ಆತನ ತಲೆಗೆ ಏನೇನೋ ತುರುಕುವ ಕೆಲಸ ನಡೆದಿದೆ. ಮನುಷ್ಯನ ನೈತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ನಮ್ಮ ಪ್ರಾಚೀನ ಚಿಂತನೆ, ವಿಚಾರಧಾರೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Schools Syllabus ಭಗವದ್ಗೀತೆಯನ್ನು ಪಾಠಮಾಡಿದರೆ ಮಕ್ಕಳ ಹೊಟ್ಟೆತುಂಬುತ್ತದೆಯೇ, ಬಿಜೆಪಿಗೆ ಹೆಚ್‌ಡಿಕೆ ಪ್ರಶ್ನೆ!
ವಿದ್ಯಾರ್ಜನೆ ನಹಿ ಜ್ಞಾನೇನ ಸದೃಶಂ ಎಂಬಂತೆ ದೇಶ ಮತ್ತು ಜಗತ್ತಿನ ಒಳಿತಿಗೆ ಬಳಕೆ ಆಗಬೇಕೆಂಬುದನ್ನು ಹೇಳಿಕೊಡಬೇಕು. ಸ್ವಂತ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ಕಲಿತ ವಿದ್ಯೆ ಬಳಕೆ ಆಗಬೇಕು. ಭಗವದ್ಗೀತೆಯು ಭಾರತ(India) ದೇಶದ ಅಂತಃಸತ್ವ. ಭಗವದ್ಗೀತೆಯನ್ನು(Bhagavad Gita) ವಿದೇಶಗಳಲ್ಲೂ ಇಷ್ಟಪಟ್ಟು ಕಲಿಸುತ್ತಿದ್ದಾರೆ. ಮನುಷ್ಯ ಮನುಷ್ಯತ್ವದೊಂದಿಗೆ ಬದುಕಬೇಕು ಎಂಬುದನ್ನು ತಿಳಿಸುವ ಕಾರ್ಯವನ್ನು ಭಗವದ್ಗೀತೆ ಮಾಡುತ್ತದೆ. ಇವತ್ತಿನ ಕ್ರೌರ್ಯ, ಹಿಂಸೆ, ಅಪರಾಧ ಪ್ರವೃತ್ತಿ ಹೆಚ್ಚಳದ ಈ ಕಾಲಘಟ್ಟದಲ್ಲಿ ಭಗವದ್ಗೀತೆಯ ಅಗತ್ಯ ಹೆಚ್ಚಾಗಿದೆ. ಭಗವದ್ಗೀತೆ ಓದುವವರು ದೇಶದ ಆಸ್ತಿಯಾಗುತ್ತಾರೆ. ಅವರು ದೇಶಕ್ಕೆಂದೂ ಹೊರೆ ಎನಿಸಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಲ್ಲಿ ತಪ್ಪೇನಿದೆ?: ಜೋಶಿ
ಹುಬ್ಬಳ್ಳಿ: ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ವಿಷಯ ಸೇರ್ಪಡೆ ಮಾಡುವುದರಲ್ಲಿ ತಪ್ಪೇನಿದೆ? ಈ ವಿಷಯದಲ್ಲಿ ಜಾತಿವಾದ ಮಾಡದೇ ಎಲ್ಲರೂ ಸ್ವಾಗತಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಲಾ ಹಂತದಲ್ಲೇ ಮಕ್ಕಳು(Children) ನೈತಿಕ ಶಿಕ್ಷಣ, ಧರ್ಮ, ಸಂಸ್ಕೃತಿ ಕಲಿಯಬೇಕು. ಈ ಹಿನ್ನೆಲೆಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ಶಾಲಾ ಮಕ್ಕಳಿಗೆ ಪುರಾಣೇತಿಹಾಸದಂತಹ ಸಾಕಷ್ಟು ವಿಷಯಗಳ ತಿಳಿವಳಿಕೆ ಮೂಡುತ್ತದೆ. ಹಾಗಾಗಿ ಭಗವದ್ಗೀತೆ ಸೇರ್ಪಡೆ ಅವಶ್ಯ ಎಂದು ಪ್ರತಿಪಾದಿಸಿದ್ದರು.
ಮದರಸಾಗಳಲ್ಲಿಯೂ ಹೊಸ ಶಿಕ್ಷಣ ಪದ್ಧತಿ: ಕರ್ನಾಟಕದ 20 ಸಾವಿರ ಶಾಲೆಗಳಲ್ಲಿ NEP ಜಾರಿ: ಸಚಿವ ನಾಗೇಶ್
ಭಗವದ್ಗೀತೆ ಸೇರ್ಪಡೆ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸ್ವಾಗತಿಸಿರುವುದು ಅವರ ಸದ್ಬುದ್ಧಿಯನ್ನೂ ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದರು. ಕಾಶ್ಮೀರದಲ್ಲಿ ನರಹತ್ಯೆ ಆಗಿರುವುದು ಮತ್ತು ದೇಶದ ಗೌರವಾನ್ವಿತ ನಾಗರಿಕರು ರಸ್ತೆ ಬದಿ ಬಂದು ಜೀವನ ಮಾಡಿದ್ದು, ಇತಿಹಾಸದಲ್ಲಿ ಎಂದೂ ಆಗಿಲ್ಲ. ಈ ನೈಜ ಘಟನೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ದಾಖಲಿಸಿದ್ದಾರೆ. ಇತಿಹಾಸದ ಕರಾಳತೆ ನಮಗೆ ಪಾಠವಾಗಬೇಕು. ಸಿನಿಮಾ ಚೆನ್ನಾಗಿದೆ. ಹಾಗಾಗಿ ಅದು ಪಾಪ್ಯುಲರ್ ಆಗಿದೆ ಎಂದ ಅವರು, ಕಾಶ್ಮೀರಿ ಫೈಲ್(The Kashmir Files) ಹಾಗೂ ಇತರ ನರಹತ್ಯೆ ಘಟನೆಗಳ ಹೋಲಿಕೆ ಬಗ್ಗೆ ವ್ಯಾಖ್ಯಾನಿಸುವುದಿಲ್ಲ. ಕಾಶ್ಮೀರಿ ಫೈಲ್ ಸಿನಿಮಾ ಚೆನ್ನಾಗಿದೆ ಎಂದಿದ್ದೇವೆ ಹೊರತು ಅದನ್ನು ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ದೇಶದಲ್ಲಿ ಇತರೆಡೆಗಳಲ್ಲಿಯೂ ನರಹತ್ಯೆ ಪ್ರಕರಣಗಳ ಸಿನಿಮಾಗಳು ಬರಲಿ. ಅವುಗಳನ್ನು ಬೆಂಬಲಿಸುವ ಬಗ್ಗೆ ಆಗಿನ ಸರ್ಕಾರಗಳು ಏನು ಮಾಡುತ್ತವೆಯೋ ನೋಡೋಣ ಎಂದು ತಿಳಿಸಿದ್ದರು.
ಭಗವದ್ಗೀತೆ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ: ಮುನೇನಕೊಪ್ಪ
ಹುಬ್ಬಳ್ಳಿ: ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa) ಹೇಳಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವಾಗಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಈಗಾಗಲೇ ಮಾತನಾಡಿದ್ದಾರೆ. ಅವರು ಮಾತನಾಡಿದ ಮೇಲೆ ನಾನು ಹೇಳುವುದು ಸರಿಯಲ್ಲ. ಆದರೆ ನಮ್ಮ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಒಪ್ಪಿಗೆ ಇದೆ ಎಂದು ಹೇಳಿದ್ದರು.