IISc Bengaluru: ಐಐಎಸ್‌ಸಿಗೆ 425 ಕೋಟಿ ದೇಣಿಗೆ ಸಿಕ್ತು.. 800 ಹಾಸಿಗೆಗಳ ಆಸ್ಪತ್ರೆ ಸಿದ್ಧವಾಗುತ್ತದೆ
* IIScಗೆ ಭಾರೀ ಮೊತ್ತದ ದೇಣಿಕೆ
* 425 ಕೋಟಿ ರೂ. ದೇಣಿಗೆ ಸ್ವೀಕಾರ
* 800 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ಬೆಂಗಳೂರು(ಫೇ. 14) ಬೆಂಗಳೂರಿನಲ್ಲಿರುವ (Bengaluru) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಅತಿ ದೊಡ್ಡ ಮೊತ್ತದ ಡೋನೇಶನ್ (donation) ಒಂದನ್ನು ಪಡೆದುಕೊಂಡಿದೆ. 425 ಕೋಟಿ ರೂ. ದೇಣಿಗೆ ಸ್ವೀಕಾರ ಮಾಡಿದೆ. ಸುಸ್ಮಿತಾ ಮತ್ತು ಸುಬ್ರೋತೊ ಬಾಗ್ಚಿ, ಮತ್ತು ಎನ್ ಎಸ್ ಪಾರ್ಥಸಾರಥಿ ಜತೆಯಾಗಿ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ IISc ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್, ಸಂಸ್ಥೆ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಮಲ್ಟಿ-ಸ್ಪೆಷಾಲಿಟಿ 800 ಹಾಸಿಗೆಗಳ ಆಸ್ಪತ್ರೆಯ ಜೊತೆಗೆ ಸ್ನಾತಕೋತ್ತರ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಈ ಹಣ ಬಳಕೆ ಮಾಡಲಿದೆ ಎಂದು ತಿಳಿಸಿದರು.
ನಿರ್ಮಾಣವಾಗುವ ಸಂಸ್ಥೆಗೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ಹೆಸರು ಇಡುವ ತೀರ್ಮಾನ ಮಾಡಲಾಗಿದೆ. ಒಂದೇ ಸಂಸ್ಥೆಯ ಅಡಿಯಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯದ ಸಂಯೋಜನೆ ಸಿಗಲಿದೆ.
IISC Recruitment 2022: ಬೆಂಗಳೂರಿನ ಐಐಎಸ್‌ಸಿಯಲ್ಲಿ ಇಂಜಿನಿಯರಿಂಗ್, MBA ಮಾಡಿದವರಿಗೆ ಉದ್ಯೋಗವಕಾಶ
ಎಂಡಿ ಮತ್ತು ಪಿಚ್‌ಡಿ ಎರಡು ಪದವಿಗಳನ್ನು ಏಕಕಾಲಕ್ಕೆ ನೀಡುವ ಗುರಿ ಹೊಂದಲಾಗಿದೆ. ಕ್ಲಿನಿಕಲ್ ಸಂಶೋಶನೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
800 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ಅಹಮದಾಬಾದ್ ಮೂಲದ ಕಂಪನಿ ಆರ್ಕಿ ಮೆಡಿಸ್ ಕನ್ಸಲ್ಟೆಂಟ್ಸ್ ಕಂಪನಿ ನೋಡಿಕೊಳ್ಳಲಿದೆ. ಜೂನ್ 2022 ರಲ್ಲಿ ಯೋಜನೆ ಕೆಲಸ ಪ್ರಾರಂಭವಾಗಲಿದೆ ಮತ್ತು ಆಸ್ಪತ್ರೆಯು 2024 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ.
ಆಸ್ಪತ್ರೆಯು ರೋಗನಿರ್ಣಯ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ. ಕ್ಲಿನಿಕಲ್ ಮತ್ತು ಸರ್ಜಿಕಲ್ ವಿಭಾಗಗಳು ಆಂಕೊಲಾಜಿ, ಕಾರ್ಡಿಯಾಲಜಿ, ನ್ಯೂರಾಲಜಿ, ಎಂಡೋಕ್ರೈನಾಲಜಿ, ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ, ಮೂತ್ರಶಾಸ್ತ್ರ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೋಬೋಟಿಕ್ ಸರ್ಜರಿ, ನೇತ್ರಶಾಸ್ತ್ರ ಸೇರಿದಂತೆ ಹಲವಾರು ವಿಶೇಷತೆಗಳಲ್ಲಿ ಸಮಗ್ರ ಚಿಕಿತ್ಸೆ ಮತ್ತು ಆರೋಗ್ಯ ವಿತರಣೆಯನ್ನು ಸುಗಮಗೊಳಿಸುತ್ತವೆ ಎಂದು ರಂಗರಾಜನ್ ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡಗಳ ಪ್ರಕಾರ, ನಿರ್ದಿಷ್ಟ MD/MS ಮತ್ತು DM/MCh ಕಾರ್ಯಕ್ರಮಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ತರಬೇತಿಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಆಸ್ಪತ್ರೆಯು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಅಳವಡಿಸುತ್ತದೆ.
ಬಾಗ್ಚಿಗಳ ಪರವಾಗಿ ಮಾತನಾಡಿದ ಸುಸ್ಮಿತಾ ಬಾಗ್ಚಿ, IISc ನೊಂದಿಗೆ ಪಾಲುದಾರರಾಗುವ ಅವಕಾಶಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ದೇಶದಲ್ಲಿ ವೈದ್ಯಕೀಯ ಸಂಶೋಧನೆ ಮತ್ತು ವಿತರಣೆಯನ್ನು ಕೇವಲ ಸರ್ಕಾರ ಅಥವಾ ಕಾರ್ಪೊರೇಟ್ ವಲಯಕ್ಕೆ ಬಿಡಲು ಸಾಧ್ಯವಿಲ್ಲ. ಈ ಯೋಜನೆಯ ಮೂಲ ಅತ್ಯುತ್ತಮ ಫಲಿತಾಂಶ ಕಾಣಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜ್ಞಾನ, ಇಂಜಿನಿಯರಿಂಗ್ ಮತ್ತು ವೈದ್ಯಕೀಯವನ್ನು ಒಂದೇ ಕ್ಯಾಂಪಸ್‌ನಲ್ಲಿ ಸಂಯೋಜಿಸುವುದು ಹೊಸ ಕಲ್ಪನೆ. ಇದರಿಂದ ಸಂಶೋಧನೆಗೆ ಮತ್ತಷ್ಟು ನೆರವು ಸಿಗಲಿದೆ ಎಂದು ರಾಧಾ ಪಾರ್ಥಸಾರಥಿ ಅಭಿಪ್ರಾಯಪಟ್ಟರು.
ಸೂಪರ್ ಕಂಪ್ಯೂಟರ್: ಭಾರತೀಯ ವಿಜ್ಞಾನ ಮಂದಿರ (IISc Bengaluru)ದಲ್ಲಿ ‘ಪರಮ್ ಪ್ರವೇಗ’ (Param Pravega) ಎಂಬ ಸೂಪರ್ ಕಂಪ್ಯೂಟರ್ ಕಾರ್ಯಾಚರಣೆ ಆರಂಭಿಸಿತ್ತು. ಇದು ದೇಶದಲ್ಲಿ ಈಗಾಗಲೇ ಇರುವ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್‌ಗಳಲ್ಲಿ ಒಂದಾಗಿದೆ. 3.3 ಪೆಟಾಫ್ಲಾಫ್ಸ್ ವೇಗದಲ್ಲಿ ಲೆಕ್ಕ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. 1 ಪೆಟಾಫ್ಲಾಫ್ಸ್ ಎಬುದು ಒಂದು ಕ್ವಾಡ್ರಿಲಿಯನ್‌ಗೆ ಸಮ. ಅಂದರೆ ಒಂದೇ ಸೆಕೆಂಡ್‌ನಲ್ಲಿ 1015 ಕಾರ್ಯಚಟುವಟಿಕೆ ಮಾಡಬಲ್ಲದು.
ಐಐಎಸ್ಸಿಯಲ್ಲಿರುವ ಈ ಸೂಪರ್ ಕಂಪ್ಯೂಟರ್ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವುದು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸಂಸ್ಥೆ. ಇದರಲ್ಲಿ ಬಳಕೆಯಾಗಿರುವ ಬಹುತೇಕ ಬಿಡಿಭಾಗಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸಾಫ್ಟ್‌ವೇರ್ ಅನ್ನೂ ಸಹ. ಸಂಶೋಧನೆ ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ಈ ಕಂಪ್ಯೂಟರ್ ಬಳಕೆಯಾಗಲಿದೆ.