IISC Recruitment 2022: ಬೆಂಗಳೂರಿನ ಐಐಎಸ್‌ಸಿಯಲ್ಲಿ ಇಂಜಿನಿಯರಿಂಗ್, MBA ಮಾಡಿದವರಿಗೆ ಉದ್ಯೋಗವಕಾಶ

ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

 

IISc Recruitment 2022 Deputy Project Engineer and Principal Project Associate various posts gow

ಬೆಂಗಳೂರು(ಫೆ.14): ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಖಾಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 1 ಉಪ ಪ್ರಾಜೆಕ್ಟ್ ಇಂಜಿನಿಯರ್ (Deputy Project Engineer) ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ (HUMAN RESOURCES SECTION) ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 14ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ ​(Online) ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 7 ಕೊನೆಯ ದಿನವಾಗಿದೆ.  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ವೆಬ್​ಸೈಟ್​​ www.iisc.ac.in ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 14 ಹುದ್ದೆಗಳ ವಿವರ ಇಂತಿದೆ
ಉಪ ಪ್ರಾಜೆಕ್ಟ್ ಇಂಜಿನಿಯರ್ -1 ಹುದ್ದೆ ಖಾಲಿ ಇದ್ದು, ಕ್ಯಾಂಪಸ್ ಮ್ಯಾನೇಜ್‌ಮೆಂಟ್ ಮತ್ತು ಅಭಿವೃದ್ಧಿ ವಿಭಾಗದ ಹುದ್ದೆಯಾಗಿದೆ.
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಅಸೋಸಿಯೇಟ್ (ಸಿವಿಲ್) -1 ಹುದ್ದೆ
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಅಸೋಸಿಯೇಟ್ (ಎಲೆಕ್ಟ್ರಾನಿಕ್) -1 ಹುದ್ದೆ
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (ಸಿವಿಲ್) -2 ಹುದ್ದೆಗಳು
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (ಎಲೆಕ್ಟ್ರಾನಿಕ್) -2 ಹುದ್ದೆಗಳು
ಪ್ರಾಜೆಕ್ಟ್ ಅಸೋಸಿಯೇಟ್  (ಸಿವಿಲ್) -4 ಹುದ್ದೆಗಳು
ಪ್ರಾಜೆಕ್ಟ್ ಅಸೋಸಿಯೇಟ್  (ಎಲೆಕ್ಟ್ರಾನಿಕ್) -2 ಹುದ್ದೆಗಳು
ಪ್ರೋಗ್ರಾಮ್ ಅಸಿಸ್ಟೆಂಟ್ -1 ಹುದ್ದೆ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ  ಹುದ್ದೆಗನುಸಾರ ವಿದ್ಯಾರ್ಹತೆಯನ್ನು  ವಿದ್ಯಾರ್ಹತೆಯನ್ನು  ಪೂರ್ಣಗೊಳಿಸಿರಬೇಕು.

IISC Recruitment 2022: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಪ ಪ್ರಾಜೆಕ್ಟ್ ಇಂಜಿನಿಯರ್: ಸಿವಿಲ್ ಇಂಜಿನಿಯರಿಂಗ್ ನಲ್ಲಿ  55% ದೊಂದಿದೆ ME/MTech ಮಾಡಿರಬೇಕು.
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಅಸೋಸಿಯೇಟ್ (ಸಿವಿಲ್): ಸಿವಿಲ್ ಇಂಜಿನಿಯರಿಂಗ್ ನಲ್ಲಿ BE/BTech,ME/MTech ಮಾಡಿರಬೇಕು. 
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಅಸೋಸಿಯೇಟ್ (ಎಲೆಕ್ಟ್ರಾನಿಕ್): ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ BE/BTech /ME/MTech ಮಾಡಿರಬೇಕು.
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (ಸಿವಿಲ್): ಸಿವಿಲ್ ಇಂಜಿನಿಯರಿಂಗ್ ನಲ್ಲಿ BE/BTech,ME/MTech ಮಾಡಿರಬೇಕು. 
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (ಎಲೆಕ್ಟ್ರಾನಿಕ್): ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ BE/BTech /ME/MTech ಮಾಡಿರಬೇಕು.
ಪ್ರಾಜೆಕ್ಟ್ ಅಸೋಸಿಯೇಟ್  (ಸಿವಿಲ್): ಸಿವಿಲ್ ಇಂಜಿನಿಯರಿಂಗ್ ನಲ್ಲಿ BE/BTech,ME/MTech ಮಾಡಿರಬೇಕು. 
ಪ್ರಾಜೆಕ್ಟ್ ಅಸೋಸಿಯೇಟ್  (ಎಲೆಕ್ಟ್ರಾನಿಕ್): ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ BE/BTech /ME/MTech ಮಾಡಿರಬೇಕು.
ಪ್ರೋಗ್ರಾಮ್ ಅಸಿಸ್ಟೆಂಟ್: MBA ಪೂರ್ಣಗೊಳಿಸಿರಬೇಕು.

ವಯೋಮಿತಿ: ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಹುದ್ದೆಗೆ ಅನುಸಾರವಾಗಿ 35 ವರ್ಷದಿಂದ 50 ವರ್ಷದ ಒಳಗಿರಬೇಕು. ಓಬಿಸಿ  , ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ  ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.

ಕೆಲಸದ ಅನುಭವ: ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಆಯಾಯ ವಿಭಾಗದಲ್ಲಿ 2 ರಿಂದ 8 ವರ್ಷಗಳ ಅನುಭವ ಹೊಂದಿರಬೇಕು.

GOOGLE REVEALED MOST SEARCHED JOBS: ಲಾಕ್‌ಡೌನ್ ಬಳಿಕ ನಿರುದ್ಯೋಗಿಗಳಾಗಿ 2022 ರವರೆಗೆ ಅತೀ ಹೆಚ್ಚು ಹುಡುಕಿದ ಉದ್ಯೋಗಳಿವು

ವೇತನ ವಿವರ: ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ವಿವಿಧ  ಹುದ್ದೆಗಳಿಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವೇತನ ದೊರೆಯಲಿದೆ
 ಕ್ಯಾಂಪಸ್ ಮ್ಯಾನೇಜ್‌ಮೆಂಟ್ ಮತ್ತು ಅಭಿವೃದ್ಧಿ ವಿಭಾಗದ ಉಪ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಲೆವೆಲ್ 12, 7 ನೇ ವೇತನ ಆಯೋಗದ ಪ್ರಕಾರ ವೇತನ ನಿಗದಿಯಾಗಿದೆ.
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಅಸೋಸಿಯೇಟ್ (ಸಿವಿಲ್): 49,000 ರೂ. +ಹೆಚ್‌ಆರ್‌ಎ
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಅಸೋಸಿಯೇಟ್ (ಎಲೆಕ್ಟ್ರಾನಿಕ್): 49,000 ರೂ. +ಹೆಚ್‌ಆರ್‌ಎ
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (ಸಿವಿಲ್): 42,000 ರೂ. +ಹೆಚ್‌ಆರ್‌ಎ
ಸೀನಿಯರ್ ಪ್ರಾಜೆಕ್ಟ್ ಅಸೋಸಿಯೇಟ್ (ಎಲೆಕ್ಟ್ರಾನಿಕ್): 42,000 ರೂ. +ಹೆಚ್‌ಆರ್‌ಎ
ಪ್ರಾಜೆಕ್ಟ್ ಅಸೋಸಿಯೇಟ್  (ಸಿವಿಲ್): 28,000 ರೂ. +ಹೆಚ್‌ಆರ್‌ಎ
ಪ್ರಾಜೆಕ್ಟ್ ಅಸೋಸಿಯೇಟ್  (ಎಲೆಕ್ಟ್ರಾನಿಕ್): 28,000 ರೂ. +ಹೆಚ್‌ಆರ್‌ಎ
ಪ್ರೋಗ್ರಾಮ್ ಅಸಿಸ್ಟೆಂಟ್: 28,000 ರೂ. +ಹೆಚ್‌ಆರ್‌ಎ

ಅರ್ಜಿ ಶುಲ್ಕ : ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ತಾಂತ್ರಿಕ ಸಹಾಯಕ  ಹುದ್ದೆಗೆ  ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ, ಟ್ರಾನ್ಸ್‌ಜೆಂಡರ್ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ: ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ವೆಬ್‌ಸೈಟ್ https://iisc.ac.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ 
ಉಪ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://recruitment.iisc.ac.in/regular_position/
ಪ್ರಿನ್ಸಿಪಾಲ್ ಪ್ರಾಜೆಕ್ಟ್ ಸೇರಿ ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಈ ಲಿಂಕ್ ಕ್ಲಿಕ್ ಮಾಡಿ https://recruitment.iisc.ac.in/Temporary_Positions/

Latest Videos
Follow Us:
Download App:
  • android
  • ios