2023ರ ಹೊತ್ತಿಗೆ ರಾಜ್ಯದಲ್ಲಿ 6,500 ಸ್ಮಾರ್ಟ್ ಕ್ಲಾಸ್ ಗಳ ಸ್ಥಾಪನೆ

2022-23ರ ವೇಳೆಗೆ ರಾಜ್ಯದಲ್ಲಿ 6,500 ಸ್ಮಾರ್ಟ್ ಕ್ಲಾಸ್ ಗಳು ಸ್ಥಾಪನೆಯಾಗಲಿದೆ ಎಂದು ಕರ್ನಾಟಕ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹೇಳಿದೆ. 
 

6500 smart classrooms have been set up in Karnataka colleges  by 2023 gow

ಬೆಂಗಳೂರು(ಏ.20): ಸರ್ಕಾರಿ ಕಾಲೇಜುಗಳಲ್ಲಿ ಕಳೆದ ವರ್ಷ 2,500 ಸ್ಮಾರ್ಟ್ ಕ್ಲಾಸ್ ರೂಂಗಳನ್ನು (smart classrooms ) ಸ್ಥಾಪಿಸಲಾಗಿದ್ದು, 2022-23ರ ವೇಳೆಗೆ ರಾಜ್ಯದಲ್ಲಿ 6,500 ಸ್ಮಾರ್ಟ್ ಕ್ಲಾಸ್ ಗಳು ಸ್ಥಾಪನೆಯಾಗಲಿವೆ. ಕರ್ನಾಟಕ ಕಲಿಕಾ ನಿರ್ವಹಣಾ ವ್ಯವಸ್ಥೆ (Karnataka Learning Management System-ಎಲ್‌ಎಂಎಸ್‌) ಒಂದು ವರ್ಷದ ಹಿಂದೆಯೇ ಜಾರಿಗೆ ಬಂದಿದ್ದರೂ ಅದರ ಕೆಲವು ಅಂಶಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಕರ್ನಾಟಕ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ (Department of Collegiate and Technical Education commissioner Pradeep P) ಹೇಳಿದ್ದಾರೆ. 

ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮ ಮತ್ತು ಪಾಠಗಳಿಗೆ LMS ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರವೇಶವನ್ನು ಹೊಂದಿರುತ್ತಾರೆ ಎಂದು ಹೇಳಿದರು.

ಕಳೆದ ವರ್ಷ 2,500 ತರಗತಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗಿದೆ. ಹಾಜರಾತಿ, ಪಠ್ಯಕ್ರಮ, ತರಗತಿಗಳು, ಕಾರ್ಯಯೋಜನೆಗಳು (ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ), ಲೈಬ್ರರಿಗಳು ಮತ್ತು ಡೌಟ್ ಫೋರಂ ಗಳು ಎಲ್‌ಎಂಎಸ್ ವೆಬ್ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತವೆ ಎಂದು ಅವರು ಹೇಳಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC NAGESH

ಡಿಜಿಟಲೀಕರಣವು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಯುಜಿಸಿ ಹಾಜರಾತಿ ಅಗತ್ಯತೆಗಳನ್ನು ಕೈಬಿಡಬಹುದು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದ್ದಾರೆ.

ಇದು NEP ಅಡಿಯಲ್ಲಿ ಏಕಕಾಲಿಕ ಪದವಿಗಳ ಅನುಷ್ಠಾನದೊಂದಿಗೆ ವಿಶ್ವವಿದ್ಯಾಲಯಗಳು ತಮ್ಮದೇ ಆದ ಹಾಜರಾತಿ ನೀತಿಗಳನ್ನು ಹೊಂದಿಸಲು ಹಿಂದಿನ UGC ಪ್ರಕಟಣೆಗೆ ಅನುಗುಣವಾಗಿದೆ. ಇದು ದೇಶದಲ್ಲಿಯೇ ಮೊದಲನೆಯದು. ನಾವು ಪೋರ್ಟಲ್ ಮೂಲಕ ಉನ್ನತ ಮಟ್ಟದ ಶಿಕ್ಷಕರಿಂದ ವಸ್ತುಗಳನ್ನು ಸಂಗ್ರಹಿಸುತ್ತಿದ್ದೇವೆ. ಕಾಲಕ್ರಮೇಣ ಅದು ಉತ್ತಮಗೊಳ್ಳುತ್ತದೆ ಎಂದು ಹೇಳಿದರು. ಅಂಕ ಕಾರ್ಡ್‌ಗಳು ಮತ್ತು ಪದವಿ ಪ್ರಮಾಣಪತ್ರಗಳ ನಕಲು ಪ್ರತಿಗಳನ್ನು ನೀಡುವುದನ್ನು ಶೀಘ್ರದಲ್ಲೇ ನಿಲ್ಲಿಸಲಾಗುವುದು ಎಂದು ಆಯುಕ್ತ ಪ್ರದೀಪ್ ಹೇಳಿದರು.

ದಾವಣಗೆರೆ ಬಿಜೆಪಿ ವಿಭಾಗೀಯ ಸಮಾವೇಶದಲ್ಲಿ ಕೈ ವಿರುದ್ಧ ಯಡಿಯೂರಪ್ಪ ಗುಡುಗು 

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ: 

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು (Moral science ) ಸೇರಿಸಲಾಗುವುದು. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಎಲ್ಲಾ ಧರ್ಮಗಳ ನೈತಿಕ ಮೌಲ್ಯಗಳನ್ನು (moral studies) ಕಲಿಸುವ ಪಠ್ಯಗಳನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಹೇಳಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚತಂತ್ರ (Panchatantra), ರಾಮಾಯಣ (Ramayana), ಮಹಾಭಾರತ (Mahabharata), ಭಗವದ್ಗೀತೆ (Bhagavat Gita), ಕುರಾನ್ (Quran) ಮತ್ತು ಇತರ ನೈತಿಕ ಶಿಕ್ಷಣಗಳನ್ನು ಕೂಡ ಸೇರಿಸಲಾಗುವುದು. ಸಮಿತಿಯೊಂದು ಪಠ್ಯಕ್ರಮವನ್ನು ನಿರ್ಧರಿಸಲಿದ್ದು ಈ ನೈತಿಕ ಶಿಕ್ಷಣದ ಪಠ್ಯಕ್ಕೆ ಪರೀಕ್ಷೆಯಿರುವುದಿಲ್ಲ ಎಂದು ವಿವರಿಸಿದರು.

ಮದ್ರಸಗಳಿಂದ (madrasas ) ಅಥವಾ ಅಲ್ಪಸಂಖ್ಯಾತ ಸಮುದಾಯ (minority community) ಮುಖಂಡರಿಂದ ನಮಗೆ ಬೇಡಿಕೆ ಬರದಿದ್ದರೂ ಕೂಡ ನಿಗದಿತ ಶಿಕ್ಷಣ ಮಕ್ಕಳಿಗೆ ಕೊಡಿಸಿ ಎಂದು ಪೋಷಕರಿಂದ ಬೇಡಿಕೆ ಬಂದಿದೆ. ಈ ಮೂಲಕ ಅಲ್ಪಸಂಖ್ಯಾತ ಸಮುದಾಯ ಮಕ್ಕಳು ಕೂಡ ಬೇರೆ ಮಕ್ಕಳಂತೆ ಶಾಲೆಗಳಲ್ಲಿ ಪಡೆಯುವ ನಿಗದಿತ ಶಿಕ್ಷಣವನ್ನು ಗಳಿಸಿ ಪೈಪೋಟಿ ಒಡ್ಡಲು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೃತ್ತಿಪರ ಕೋರ್ಸ್ ಗಳಿಸಲು ಸಹಾಯವಾಗುತ್ತದೆ ಎಂದರು.

Latest Videos
Follow Us:
Download App:
  • android
  • ios