ರಜೆ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ?
*ಬೇಸಿಗೆ ರಜೆ ಸಿಕ್ಕಿತೆಂದು ಸುಮ್ಮನೆ ಕಳೆಯಬೇಡಿ, ಅದು ಸದುಪಯೋಗವಾಗಲಿ
*ಹೊಸ ಹೊಸ ವಿಷಯಗಳ ಕಲಿಕೆಗೆ ಸಮಯವನ್ನು ಬಳಸಿಕೊಳ್ಳುವುದೇ ಜಾಣತನ
*ಸಾಕಷ್ಟು ಸಂಗತಿಗಳನ್ನು ಬೇಸಿಗೆ ರಜೆಯಲ್ಲಿ ಮಕ್ಕಳು ಕಲಿಯಬಹುದು
ವಿದ್ಯಾರ್ಥಿಗಳೇ... ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ (Examination) ಮುಗೀತು, ಆರಾಮಾಗಿ ರಜೆ ಎಂಜಾಯ್ ಮಾಡೋಣ ಅಂದುಕೊಂಡಿದ್ದೀರಾ? ಇಷ್ಟು ದಿನ ಓದಿ ಓದಿ ಸಾಕಾಗಿದೆ, ಇನ್ನೊಂದೆರಡು ತಿಂಗಳು ಮಜಾ ಮಾಡೋ ಪ್ಲಾನ್ ಇದ್ಯಾ? ಎಂಜಾಯ್ ಮಾಡಿ ತಪ್ಪೇನಿಲ್ಲ. ಅದರ ಜೊತೆಗೆ ರಿಲ್ಯಾಕ್ಸ್ ಟೈಮ್ ನಲ್ಲಿ ಒಂದಷ್ಟು ಪ್ರಯೋಜಕಾರಿ ಕೆಲಸಗಳನ್ನು ಮಾಡ್ಬಹುದು ನೋಡಿ. ಈ ಕೆಲಸಗಳು ನಿಮ್ಮ ಮುಂದಿನ ಅಧ್ಯಯನದ ಕೋರ್ಸ್‌ಗೆ ತಯಾರಿ ಮಾಡಲು ನೆರವಾಗಬಹುದು. ನೀವು ಉನ್ನತ ವ್ಯಾಸಂಗಕ್ಕೆ ಬಂದಾಗ ಸೂಕ್ತವಾಗಿ ಬರಬಹುದಾದ ಕೆಲವು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು. ರಜೆಯ ಅವಧಿಯನ್ನು ಅತ್ಯಂತ ಸಕಾರಾತ್ಮಕವಾಗಿ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳಬಹುದು. ರಜೆ ಎಂದರೆ ಸುಮ್ಮನೆ ಕಾಲ ಹರಣ ಮಾಡುವುದಲ್ಲ. ಬದಲಿಗೆ, ಹೊಸ ವಿಷಯಗಳನ್ನು ಕಲಿಯಲು ಸಿಕ್ಕಿರುವ ಅವಕಾಶ ಎಂದು ಭಾವಿಸಿಕೊಳ್ಳಬೇಕು. ಆಗ, ರಜೆಯನ್ನು ಸಂಪೂರ್ಣವಾಗಿ ಲಾಭಕಾರಿಯಾಗಿ ಬಳಸಿಕೊಳ್ಳಬಹುದು. ವೈಯಕ್ತಿಕ ಅಭಿವೃದ್ಧಿಯು ನಿಮ್ಮ ಸಾಮರ್ಥ್ಯಗಳನ್ನು ಸುಧಾರಿಸಲಿದೆ. ನೀವು ಸಾಧ್ಯವಾದಷ್ಟು ಬೇಗ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಬೇಕು. ಇದು ನಿಮ್ಮ ಉನ್ನತ ವ್ಯಾಸಂಗದಿಂದ ಹಿಡಿದು ಕೆಲಸ ಮಾಡುವ ವೃತ್ತಿಪರರಾಗಿ ನಿಮ್ಮ ಬೆಳವಣಿಗೆಯವರೆಗೆ ಪ್ರತಿಯೊಂದು ಹಂತದಲ್ಲೂ ಸಹಾಯ ಮಾಡುತ್ತದೆ. ಅದಕ್ಕಾಗಿ ನಿಮ್ಮ ಬೇಸಿಗೆಯ ರಜೆಯ ಸಂದರ್ಭದಲ್ಲಿ ನೀವು ಮಾಡಬೇಕಿರೋ ಕೆಲಸಗಳು ಏನು ಅಂತ ಹೇಳ್ತಿವಿ ನೋಡಿ.
Campus Placement: ಅಮೆಜಾನ್‌ನಲ್ಲಿ 1.18 ಕೋಟಿ ರೂ. ಸಂಬಳದ ನೌಕರಿ ಪಡೆದ ಯುಪಿ ವಿದ್ಯಾರ್ಥಿ
ಸಮಯ ನಿರ್ವಹಣೆ: ಸಮಯ ನಿರ್ವಹಣೆಯು ಪ್ರತಿ ವಿದ್ಯಾರ್ಥಿ(Student)ಯ ಜೀವನದಲ್ಲಿ ಒಂದು ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ. ಜೀವನ ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು ನೀವು ವಿರಾಮದ ಸಮಯದಲ್ಲಿ ನಿರ್ವಹಣೆಯಲ್ಲಿ ಉಚಿತ ಆನ್‌ಲೈನ್ ಕೋರ್ಸ್ (Online Course)ಗಳನ್ನು ಮಾಡಬಹುದು. ನಿಮ್ಮ ಸಮಯವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಇದು ಸಹಾಯ ಮಾಡುತ್ತದೆ.
ಸ್ಪೀಡ್ ರೀಡಿಂಗ್: ಸ್ಪೀಡ್ ರೀಡಿಂಗ್ ಎನ್ನುವುದು ಪುಟದಲ್ಲಿನ ನುಡಿಗಟ್ಟುಗಳು ಅಥವಾ ವಾಕ್ಯಗಳನ್ನು ತ್ವರಿತವಾಗಿ ಗುರುತಿಸುವ ಮತ್ತು ಹೀರಿಕೊಳ್ಳುವ ಪ್ರಕ್ರಿಯೆಯಾಗಿದೆ. ನಾವು ಸಾಮಾನ್ಯವಾಗಿ ನಿಮಿಷಕ್ಕೆ ಸುಮಾರು 250 ಪದಗಳನ್ನು ಓದುತ್ತೇವೆ. ನೀವು ಓದುವಿಕೆಯನ್ನು ವೇಗಗೊಳಿಸಿ ನೆನಪಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು.
ಕೋಡಿಂಗ್ ಕ್ಲಾಸ್ ಸೇರಿಕೊಳ್ಳಿ: ಕೋಡಿಂಗ್ (Coding), ಅಗತ್ಯ ಕೌಶಲ್ಯವಾಗಿ ವಿಕಸನಗೊಂಡಿದೆ. ಪ್ರತಿ ವಿದ್ಯಾರ್ಥಿಯು ತಮ್ಮ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸಲು ಕೋಡಿಂಗ್‌ನ ಮೂಲಭೂತ ಅಂಶಗಳನ್ನು ಕಲಿಯಬೇಕು. ಕೋಡಿಂಗ್ ಅನ್ನು ತಿಳಿದುಕೊಳ್ಳುವುದು ಉನ್ನತ ಅಧ್ಯಯನದ ಸಮಯದಲ್ಲಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಅಪ್ಲಿಕೇಶನ್ ವಿನ್ಯಾಸ ಕಲಿಯಿರಿ: ಅಪ್ಲಿಕೇಶನ್ (Application) ವಿನ್ಯಾಸವು ನಿಮ್ಮ ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ನಿಮ್ಮ ಅಪ್ಲಿಕೇಶನ್ ಟೆಕ್, ದೈತ್ಯರ ಕಣ್ಣಿಗೆ ಬಿದ್ದರೆ, ನೀವು ಟೆಕ್ ಮಾಂತ್ರಿಕನ ಸ್ಥಿತಿಗೆ ತಲುಪಬಹುದು.
ಸೃಜನಶೀಲ ಬರವಣಿಗೆ: ಸೃಜನಶೀಲ ಬರವಣಿಗೆ (Creative Writing) ಉತ್ತಮ ಅವಕಾಶವಾಗಿದೆ. ಪದಗಳ ಮೂಲಕ ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಆನ್‌ಲೈನ್ ಕೋರ್ಸ್‌ಗಳ ಮೂಲಕ ಸೃಜನಶೀಲ ಬರವಣಿಗೆಯನ್ನು ಕಲಿಯಬಹುದು ಅಥವಾ ವಿವಿಧ ಸ್ಥಳಗಳಲ್ಲಿ ತರಗತಿಯ ಬೋಧನೆಯನ್ನು ಆರಿಸಿಕೊಳ್ಳಬಹುದು.
Aditi Tiwari Facebook Job: ಫೇಸ್‌ಬುಕ್‌ನಿಂದ ಪಾಟ್ನಾ ವಿದ್ಯಾರ್ಥಿನಿಗೆ ₹1.6 ಕೋ ಆಫರ್
ವಿದೇಶಿ ಭಾಷೆ ಕಲಿಯಿರಿ: ವಿದೇಶಿ ಭಾಷೆ (Foreign Langauge) ಯನ್ನು ತಿಳಿದುಕೊಳ್ಳುವುದು ನಿಮಗೆ ವಿದೇಶದಲ್ಲಿ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಅನೇಕ ದೇಶಗಳು ತಮ್ಮ ಸ್ಥಳೀಯ ಭಾಷೆಯಲ್ಲಿ ಸಂವಹನ ಮಾಡುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತವೆ. ವಿದೇಶಿ ಭಾಷೆಯನ್ನು ಕಲಿಯುವುದು ಮತ್ತೊಂದು ದೇಶ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಮಾರ್ಗವಾಗಿದೆ.
ಇಂಟರ್ನ್ ಶಿಪ್ ಮಾಡಿ: 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ (Internship) ಅವಕಾಶಗಳನ್ನು ಅನ್ವೇಷಿಸಬಹುದು. ಇಂಟರ್ನ್ ಆಗಿ ಕೆಲಸ ಮಾಡುವುದು ನಿಮಗೆ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ವೃತ್ತಿಪರರ ಬಲವಾದ ನೆಟ್ವರ್ಕ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ.