Campus Placement: ಅಮೆಜಾನ್‌ನಲ್ಲಿ 1.18 ಕೋಟಿ ರೂ. ಸಂಬಳದ ನೌಕರಿ ಪಡೆದ ಯುಪಿ ವಿದ್ಯಾರ್ಥಿ

*ಯುಪಿಯ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿ ಸಾಧನೆ
*₹1.18 ಕೋಟಿಯ ಸಂಬಳ ಪ್ಯಾಕೇಜ್ ಪಡೆದ ವಿದ್ಯಾರ್ಥಿ ಲೋಕೇಶ್ ರಾಜ್ ಸಿಂಘಿ
*ಅಮೆಜಾನ್ ಕಂಪನಿಯಲ್ಲಿ ಗ್ರಾಜುಯೇಟ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಕೆಲಸ 
 

A student from MNNIT got RS 1.18 crore annual package from Amazon company

ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಕಾಲೇಜು ಕ್ಯಾಂಪಸ್‌ನಲ್ಲಿಯೇ ಕೆಲಸ ಗಿಟ್ಟಿಸಿಕೊಳ್ಳಲು ಪರಿತಪಿಸುತ್ತಾರೆ. ಕಾಲೇಜುಗಳಿಗೆ ಬರುವ ಪ್ರತಿಷ್ಟಿತ ಕಂಪನಿಗಳಿಗೆ ಆಯ್ಕೆಯಾಗಲು ಬಯಸುತ್ತಾರೆ. ಒಂದು ವೇಳೆ ಕ್ಯಾಂಪಸ್ ಸೆಲೆಕ್ಷನ್ ಆಗದಿದ್ರೆ, ಕಂಪನಿಗಳಿಗೆ ಅಲೆಯೋದು ತಪ್ಪಿದ್ದಲ್ಲ. ಹೀಗಾಗಿಯೇ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ ಒಳಗೂ, ಹೊರಗೂ ಉದ್ಯೋಗ ಹುಡುತ್ತಾರೆ. ಹೀಗೆ ಸಕಲ ರೀತಿಯಲ್ಲೂ ಪ್ರಯತ್ನಿಸಿದ ಗುಜರಾತ್ (Gujarat)ನ ಅಹಮದಾಬಾದ್ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಅಮೆಜಾನ್ (Amazon) ಕಂಪನಿಯ ಆಫರ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಅಲಹಾಬಾದ್‌ನ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Motilal Nehru National Institute of Technology - MNNIT)ಯ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್) ಅಂತಿಮ ವರ್ಷದ ವಿದ್ಯಾರ್ಥಿ ಲೋಕೇಶ್ ರಾಜ್ ಸಿಂಘಿ (Lokesh Raj Singhi) ಭರ್ಜರಿ ಪ್ಯಾಕೇಜ್ ಪಡೆದುಕೊಂಡಿದ್ದಾರೆ. ಲೋಕೇಶ್ ರಾಜ್ ಅಮೆಜಾನ್ ಡಬ್ಲಿನ್‌ನೊಂದಿಗೆ ₹1.18 ಕೋಟಿಯ ವಾರ್ಷಿಕ ಪ್ಯಾಕೇಜ್‌ನಲ್ಲಿ 'ಗ್ರಾಜುಯೇಟ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್'  ಕೆಲಸವನ್ನು ಪಡೆದಿದ್ದಾರೆ.

ಗುಜರಾತ್‌ನ ಐದು ವಿಶ್ವವಿದ್ಯಾನಿಲಯಗಳಲ್ಲದೆ ಐಐಐಟಿ (IIT), ಹಲವು ಸರ್ಕಾರಿ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ನಗರದ ಯಾವುದೇ ವಿದ್ಯಾರ್ಥಿಯು ಇಲ್ಲಿಯವರೆಗೂ ಪಡೆದಿರುವ ಅತ್ಯಧಿಕ ಪ್ಯಾಕೇಜ್ ಇದಾಗಿದೆ ಅಂತಾರೆ ಎಂಎನ್‌ಎನ್‌ಐಟಿ ಅಧಿಕಾರಿಗಳು. ಲೋಕೇಶ್ ಸಿಂಘಿ ಸಾಧನೆಯು MNNIT ಯ ಅನೇಕ ಉದಯೋನ್ಮುಖ ಕೋಡರ್‌ಗಳಿಗೆ ದೊಡ್ಡ ಕನಸು ಕಾಣಲು ಪ್ರೇರೇಪಿಸುತ್ತದೆ" ಎಂದು ಎಂಎನ್‌ಎನ್‌ಐಟಿ ನಿರ್ದೇಶಕ ಪ್ರೊ.ಆರ್‌ಎಸ್ ವರ್ಮಾ ಹೇಳುತ್ತಾರೆ.

ಇದನ್ನೂ ಓದಿ: Delhi University Job Fair: ಉದ್ಯೋಗಕ್ಕಾಗಿ ವಿದ್ಯಾರ್ಥಿಗಳಿಂದ 30 ಸಾವಿರಕ್ಕೂ ಅಧಿಕ ನೋಂದಣಿ!

ಈ ಮೊದಲು ಲೋಕೇಶ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ಕಂಪನಿ ಸೇಲ್ಸ್‌ಫೋರ್ಸ್‌ನಿಂದ ಆನ್-ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಅನ್ನು ಸಹ ಸ್ವೀಕರಿಸಿದ್ದರು.  ಹೈದರಾಬಾದ್‌ (Hyderabad)ನಲ್ಲಿ ಅದರ ಕಚೇರಿ ಇತ್ತು. ಆದರೆ ಅಮೆರಿಕಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಅಮೆಜಾನ್ (Amazon) ಕಂಪನಿಯನ್ನು ಆಯ್ಕೆ ಮಾಡಿಕೊಂಡರು. ಮುಂಬರುವ ಆಗಸ್ಟ್ ನಲ್ಲಿ ಲೋಕೇಶ್ ರಾಜ್ ಸಂಸ್ಥೆಯನ್ನು ಸೇರಿಕೊಳ್ಳಲಿದ್ದಾರೆ.

ಆಫ್-ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಈ ಕೆಲಸವನ್ನು ಪಡೆದಿದ್ದಕ್ಕಾಗಿ ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಎಲ್ಲಾ ಶಿಕ್ಷಕರು ಮತ್ತು ನನ್ನ ಪೋಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಮೊದಲ ಸುತ್ತಿನ ರೆಸ್ಯೂಮ್ ಆಯ್ಕೆಯನ್ನು ಒಳಗೊಂಡಿರುವ ಕಠಿಣ ಆಯ್ಕೆ ಪ್ರಕ್ರಿಯೆಯಾಗಿದ್ದು, ನಂತರ ಎರಡು ಸುತ್ತಿನ ಆನ್‌ಲೈನ್ ಮೌಲ್ಯಮಾಪನಗಳು ಮತ್ತು ನಂತರ ಮೂರು ಸುತ್ತಿನ ಸಂದರ್ಶನಗಳನ್ನು ಒಳಗೊಂಡಿತ್ತು ಎಂದು ವಿವರಿಸುತ್ತಾರೆ 21 ವರ್ಷದ ಲೋಕೇಶ್.

ಲೋಕೇಶ್ ರಾಜ್ ಮೂಲತಃ ರಾಜಸ್ಥಾನದ ಚುರು ಜಿಲ್ಲೆಯವರಾಗಿದ್ದಾರೆ. ಆದರೆ ನೇಪಾಳದ  ಕಠ್ಮಂಡುನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದ್ದಾರೆ. ಲೋಕೇಶ್ ಅವರ ತಂದೆ ಲಲಿತ್ ರಾಜ್ ಸಿಂಘಿ ಕಠ್ಮಂಡುವಿನಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಉದ್ಯಮಿ. ಅವರ ತಾಯಿ ಅಂಜು ಸಿಂಘಿ ಗೃಹಿಣಿಯಾಗಿದ್ದು, ಹಿರಿಯ ಸಹೋದರ ಕೃತಿ ರಾಜ್ ಸಿಂಗ್ ಕೂಡ ಯುಕೆಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದಾರೆ. ಲೋಕೇಶ್ ಅತ್ಯಾಸಕ್ತಿಯ ಕೋಡರ್ ಆಗಿದ್ದು, ಇಂಜಿನಿಯರಿಂಗ್ ಅಧ್ಯಯನದ ಮೊದಲ ವರ್ಷದಿಂದಲೇ ಹ್ಯಾಕಥಾನ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಇದನ್ನೂ ಓದಿ: Fashion Designer: ಫ್ಯಾಶನ್ ಡಿಸೈನ್ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗವಕಾಶಗಳು

ಕೋವಿಡ್‌ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಳ್ಳುತ್ತಿವೆ. ಪರಿಣಾಮ ಅನೇಕ ಉದ್ಯೋಗ ಅವಕಾಶಗಳು ಸೃಷ್ಟಯಾಗುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಕಾಲ ಕ್ಯಾಂಪಸ್ ಸಂದರ್ಶನದಂಥ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದೀಗ ಆ ಎಲ್ಲ ಚಟುವಟಿಕೆಗಳು ಶುರುವಾಗಿದ್ದು, ಪ್ರತಿಭಾವಂತರು ಒಳ್ಳೆಯ ಸಂಬಳಕ್ಕೆ ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.

Latest Videos
Follow Us:
Download App:
  • android
  • ios