Multiple Universities Admission Tips: ವಿಶ್ವವಿದ್ಯಾಲಯ ಪ್ರವೇಶ ಹೇಗೆ? ಗೊಂದಲಗಳಿವೆಯೇ? ಇಲ್ಲಿವೆ ಟಿಪ್ಸ್
*ಯಾವುದೇ ವಿಶ್ವವಿದ್ಯಾಲಯ ಪ್ರವೇಶ ಆಯ್ಕೆ ಮಾಡಿಕೊಳ್ಳುವಾಗ ಗೊಂದಲ ಸಹಜ
*ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ವಿವಿ ಪ್ರವೇಶ ಅವಕಾಶವಿದ್ದಾಗ, ಸೂಕ್ತ ವಿವಿ ಆಯ್ಕೆ ಮಾಡಿಕೊಳ್ಳುವುದು ಹೇಗೆ?
*ನಿಮ್ಮ ಓದು, ಅಗತ್ಯಗಳು, ಹಣಕಾಸು ಪರಿಸ್ಥಿತಿಯನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದು
ಬೆಂಗಳೂರು(ಜ.12): ಪ್ರತಿಷ್ಠಿತ ಕಾಲೇಜುಗಳು, ವಿಶ್ವವಿದ್ಯಾಲಯಗಳು ಅಥವಾ ಶೈಕ್ಷಣಿಕ ಸಂಸ್ಥೆಗಳ ಕಣ್ಣು ಟಾಪರ್ ಗಳ ಮೇಲೆಯೇ ನೆಟ್ಟಿರುತ್ತದೆ. ಅತ್ಯುತ್ತಮ ಟಾಪರ್/ಬುದ್ದಿವಂತ ವಿದ್ಯಾರ್ಥಿ ತಮ್ಮ ಕಾಲೇಜಿಗೆ ಸೇರಿಕೊಂಡರೆ ಮತ್ತಷ್ಟು ಹೆಸರು, ಕೀರ್ತಿ ಸಿಗುತ್ತದೆ ಅನ್ನೋದು ಅವರ ಬಯಕೆ. ಹೀಗಾಗಿ ಮೆರಿಟ್ ವಿದ್ಯಾರ್ಥಿಗಳನ್ನು ಸೆಳೆಯಲು ನಾನಾ ರೀತಿಯಲ್ಲಿ ಮಣೆ ಹಾಕುತ್ತವೆ. ಪ್ರತೀ ವರ್ಷ ಕೆಲವು ಆಯ್ದ ವಿದ್ಯಾರ್ಥಿಗಳಿಗೆ ಬಹು ವಿಶ್ವವಿದ್ಯಾಲಯಗಳು ಪ್ರವೇಶ ನೀಡಲು ಹಾತೊರೆಯುತ್ತಿರುತ್ತವೆ. ಭಾರತ ಒಂದೇ ಅಲ್ಲ, ಅಮೆರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಲ್ಲಿನ ಉನ್ನತ ಕಾಲೇಜುಗಳು ಹೀಗೆ ಅವಕಾಶ ಕಲ್ಪಿಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೇಲೆ ಹೆಚ್ಚು ಗಮನಹರಿಸಿವೆ. ಇದರಿಂದಾಗಿ ಉತ್ತಮ ವಿದ್ಯಾರ್ಥಿ ಗಳ ಸಂಖ್ಯೆಯು ಹೆಚ್ಚಾಗತೊಡಗಿದೆ.
ಕಾಲೇಜು ಹೇಗೆ ಸೆಳೆಯಲು ಯತ್ನಿಸಿದ್ರು, ವಿದ್ಯಾರ್ಥಿಯು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಹಳ ಯೋಚಿಸಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳ ಈ ಪ್ರಯಾಸಕರ ಪ್ರಕ್ರಿಯೆಯನ್ನು ಸರಳೀಕರಿಸುವ ಕೆಲವು ವಿಧಾನಗಳನ್ನು ನಾವು ತಿಳಿಸಿಕೊಡುತ್ತೇವೆ. ಪಠ್ಯಕ್ರಮ ಮತ್ತು ವೃತ್ತಿ ಅವಕಾಶಗಳ ಕುರಿತು ಆಳವಾದ ಸಂಶೋಧನೆಯು ವಿದ್ಯಾರ್ಥಿಯು ತಮ್ಮ ಶೈಕ್ಷಣಿಕ ವೃತ್ತಿಜೀವನದಲ್ಲಿ ಕಾಲೇಜು ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಅರ್ಥ ಮಾಡಿಸುತ್ತದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಜೀವನದ ಅವಶ್ಯಕತೆಗಳನ್ನು ಪೂರೈಸಲು ಯಾವ ಕಾಲೇಜು ಉತ್ತಮ ಸ್ಥಾನದಲ್ಲಿದೆ ಅನ್ನೋದನ್ನು ತಿಳಿಯಬೇಕು. ಕೆಲವು ಕಾಲೇಜುಗಳು ನಿರ್ದಿಷ್ಟ ಕೋರ್ಸ್‌ಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ಕಾಲೇಜು ಹೇಗೆ ಸಾಧನೆ ಮಾಡಿದೆ ಎಂಬುದರ ಕುರಿತು ತಿಳಿಯಲು ಕಾಲೇಜಿನ ವೆಬ್‌ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಜೊತೆಗೆ ವಿಶ್ವವಿದ್ಯಾಲಯದ ಪದವೀಧರರೊಂದಿಗೆ ಸಂಪರ್ಕಿಸಲು ಪ್ರಯತ್ನಿಸಬೇಕು.
IGNOU PhD: ಪಿಎಚ್‌ಡಿ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ ವಿಸ್ತರಿಸಿದ ಇಗ್ನೋ
ಉದಾಹರಣೆಗೆ, ಅನೇಕ ಕಾಲೇಜುಗಳು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ತಮ್ಮ ಹಳೆಯ ವಿದ್ಯಾರ್ಥಿಗಳ ಸಂಬಳ ಮತ್ತು ಹುದ್ದೆಯ ಮಾಹಿತಿ ನೀಡಿರುತ್ತವೆ. ಉದ್ಯೋಗಾವಕಾಶದ ಸಮಯದಲ್ಲಿ ಯಾವ ರೀತಿಯ ಕಂಪನಿಗಳನ್ನು ನಿರೀಕ್ಷಿಸಬಹುದು ಎಂಬುದರ ಸೂಚನೆಯನ್ನೂ ನೀಡುತ್ತದೆ. ಅಂತಹ ಪದವೀಧರರನ್ನು ಹುಡುಕಲು ಮತ್ತು ಸಂಪರ್ಕಿಸಲು ಲಿಂಕ್ಡ್‌ಇನ್‌ನಂತಹ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಳ್ಳಬಹುದು. ಜಗತ್ತಿನಾದ್ಯಂತ ಯಾವುದೇ ಉನ್ನತ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಅಗ್ಗವಲ್ಲ. ವಿದ್ಯಾರ್ಥಿಗಳು ತಮ್ಮ ಕೋರ್ಸ್‌ನಲ್ಲಿ ಎಷ್ಟು ಖರ್ಚು ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಬುದ್ಧಿವಂತರಾಗಿರಬೇಕು. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ, ಈ ಅಂಶವು ಇನ್ನಷ್ಟು ಮುಖ್ಯವಾಗುತ್ತದೆ. ಏಕೆಂದರೆ ಎಲ್ಲರೂ ಬೋಧನಾ ಶುಲ್ಕ, ವಸತಿ ಮತ್ತು ಹೆಚ್ಚುವರಿ ವೆಚ್ಚಗಳನ್ನು ಸಂಪೂರ್ಣವಾಗಿ ಪಾವತಿಸುವ ಸ್ಥಿತಿಯಲ್ಲಿ ಇರಲ್ಲ. ವಿದ್ಯಾರ್ಥಿಗಳು ಹಣಕಾಸಿನ ಅವಶ್ಯಕತೆಗಳ ಆಧಾರದ ಮೇಲೆ ಕಾಲೇಜುಗಳನ್ನು ಪಟ್ಟಿ ಮಾಡಬೇಕು. ಕಾಲೇಜುಗಳು ನೀಡುವ ಯಾವುದೇ ವಿದ್ಯಾರ್ಥಿವೇತನ ಇದೆಯೇ ಅಂತ ಕಂಡುಕೊಳ್ಳಬೇಕು.
ವಿದ್ಯಾರ್ಥಿವೇತನ (Scholorship)ಗಳು, ವಿದ್ಯಾರ್ಥಿಗಳಿಗೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯವಾಗುತ್ತವೆ. ಅನೇಕ ಅಂತರಾಷ್ಟ್ರೀಯ ಕಾಲೇಜುಗಳು ತಮ್ಮ ಭಾಗಶಃ ಅಥವಾ ಪೂರ್ಣ ಬೋಧನಾ ಶುಲ್ಕವನ್ನು ಒಳಗೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮೀಸಲಾದ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಅನೇಕ ವಿದ್ಯಾರ್ಥಿಗಳು ತಮ್ಮ ಆರಂಭಿಕ ವೆಚ್ಚಗಳನ್ನು ಸರಿದೂಗಿಸಲು ವಿದ್ಯಾರ್ಥಿ ಸಾಲ(Education Loan)ಗಳನ್ನು ಆರಿಸಿಕೊಳ್ಳುತ್ತಾರೆ. ಒಂದು ವೇಳೆ, ವಿದ್ಯಾರ್ಥಿಯು ಯಾವುದೇ ವಿದ್ಯಾರ್ಥಿವೇತನಕ್ಕೆ ಅನರ್ಹರಾಗಿದ್ದರೆ, ಹಣಕಾಸಿನ ನೆರವು ನೀಡುವ ಕಾಲೇಜನ್ನು ಹುಡುಕಿಕೊಳ್ಳುವುದು ಉತ್ತಮ.
CAT Topper Chirag Gupta: ಕೋಚಿಂಗ್ ಇಲ್ಲದೇ, ಯುಟ್ಯೂಬ್ ನೋಡಿಯೇ CAT ರ‍್ಯಾಂಕ್ ಗಳಿಸಿದ
ಹಣಕಾಸಿನ ನೆರವುಗಳು ಒಟ್ಟಾರೆ ಕೋರ್ಸ್ ಶುಲ್ಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಥವಾ ಕಡಿಮೆ ವೆಚ್ಚದಲ್ಲಿ ಕೆಲವು ಸೌಕರ್ಯಗಳನ್ನು ಪಡೆಯಲು ನೆರವಾಗುತ್ತವೆ. ಈ ಹಣಕಾಸಿನ ನೆರವು ಮತ್ತು ವಿದ್ಯಾರ್ಥಿವೇತನಗಳು ಸಾಮಾನ್ಯ ಮತ್ತು ಇಲಾಖೆ ನಿರ್ದಿಷ್ಟವಾಗಿರಬಹುದು. ಕೆಲವು ರೀತಿಯ ಹಣಕಾಸಿನ ಬೆಂಬಲವನ್ನು ನೀಡುವ ಕಾಲೇಜನ್ನು ಆರಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣವಾಗಿರಬೇಕು. ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳು, ಕೋರ್ಸ್‌ಗಳು ಮತ್ತು ವೆಚ್ಚಗಳ ಕುರಿತು ಸಂಶೋಧನೆ ನಡೆಸುವುದು ಮುಖ್ಯ. ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸಲು ತಮ್ಮ ಕೊಡುಗೆಗಳನ್ನು ಪ್ರದರ್ಶಿಸುವ ಮೂಲಕ ಎಲ್ಲಾ ಮಾಹಿತಿಯನ್ನು ನೀಡುತ್ತವೆ. ಆದ್ರೆ ಇದು ವಿದ್ಯಾರ್ಥಿಗಳನ್ನು ಕೊಂಚ ಗೊಂದಲಕ್ಕೀಡು ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.