Asianet Suvarna News Asianet Suvarna News

IGNOU PhD: ಪಿಎಚ್‌ಡಿ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ ವಿಸ್ತರಿಸಿದ ಇಗ್ನೋ

•    ಇಗ್ನೋ ಪಿಎಚ್‌ಡಿ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆಗೆ ಈ ಮೊದಲು ಜ.8 ಕೊನೆಯ ದಿನವಾಗಿತ್ತು
•    ಕೋವಿಡ್-19 ಸಾಂಕ್ರಾಮಿಕ  ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದಿನಾಂಕ ವಿಸ್ತರಣೆ
•    ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಈ ಕ್ರಮ ಕೈಗೊಂಡ NTA

IGNOU extended its PhD entrance exam application form submission date gow
Author
Bengaluru, First Published Jan 10, 2022, 2:37 PM IST

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (Indira Gandhi National Open University-IGNOU) ದಲ್ಲಿ ನೀವು ಪಿಎಚ್‌ಡಿ ಮಾಡಲು ಯೋಜಿಸಿದ್ದೀರಾ?, ಹಾಗಿದ್ದರೆ ಈ ಸುದ್ದಿ ನಿಮಗೆ ಮುಖ್ಯ. ಯಾಕೆಂದರೆ, ಇಗ್ನೋ (IGNOU) ಪಿಎಚ್‌ಡಿ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆಯನ್ನು ಮಾಡಿದೆ. ಹಾಗಾಗಿ, ಈ ಮೊದಲಿನ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಿದ್ದರೆ ಈಗ ಮತ್ತೊಂದು ಅವಕಾಶವನ್ನು ಇಗ್ನೋ ಒದಗಿಸಿ ಕೊಡುತ್ತಿದೆ. ಈ ಮೊದಲು ಪಿಎಚ್‌ಡಿ (Phd) ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆಗೆ ಇಗ್ನೋ ವಿಶ್ವವಿದ್ಯಾಲಯವು ಜನವರಿ 8 ಅಂತಿಮ ದಿನಾಂಕವೆಂದು ಹೇಳಿತ್ತು. ಇದೀಗ ಆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಅಭ್ಯರ್ಥಿಗಳು ಜನವರಿ 14ರೊಳಗೆ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ, ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಜನವರಿ 15ರೊಳಗೇ ತಮ್ಮ ಶುಲ್ಕವನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಕೋವಿಡ್- 19 ಹಿನ್ನೆಲೆಯಲ್ಲಿ ಈ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (National Testing Agency-NTA) ಈಗ ಎರಡನೇ ಬಾರಿಗೆ ಈ ದಿನಾಂಕವನ್ನು ವಿಸ್ತರಣೆ ಮಾಡಿದೆ. ಕೋವಿಡ್‌ನಿಂದಾಗಿ ಸಾಕಷ್ಟು ತೊಂದರೆಯಾಗಿದ್ದು, ಈ ಹಿನ್ನಲೆಯಲ್ಲಿ ವಿಸ್ತರಣೆ ಕೈಗೊಳ್ಳಲಾಗಿದೆ.

"ಕೋವಿಡ್‌ನಿಂದ ಅಭ್ಯರ್ಥಿಗಳಿಗೆ ಉಂಟಾದ ತೊಂದರೆಗಳನ್ನು ನಿವಾರಿಸಲು ಮತ್ತು ಅಭ್ಯರ್ಥಿಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ" ಎಂದು ಅಧಿಕೃತ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ICAI ISA AT Exam 2022: ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ

ಆನ್‌ಲೈನ್ ಅರ್ಜಿ ನಮೂನೆಗಳಲ್ಲಿನ ವಿವರಗಳಲ್ಲಿನ ತಿದ್ದುಪಡಿಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಹೆಚ್ಚುವರಿ ಶುಲ್ಕವನ್ನು (ಫಾರ್ಮ್‌ನಲ್ಲಿ ಮಾಡಿದ ಬದಲಾವಣೆಗಳನ್ನು ಅವಲಂಬಿಸಿ) 18 ಜನವರಿ 2022 ರಂದು ರಾತ್ರಿ 11:50 ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು NTA ಹೇಳಿಕೆ ತಿಳಿಸಿದೆ.

UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕ ಮುಂದೂಡಿಕೆ:  ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology -IIT), ಬಾಂಬೆಯು  UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಜನವರಿ 8 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದ ಪ್ರವೇಶ ಕಾರ್ಡ್‌ಗಾಗಿ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈಗ ಜನವರಿ 12, 2022 ಕ್ಕೆ ಮುಂದೂಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು UCEED IITB ಯ ಅಧಿಕೃತ ವೆಬ್‌ಸೈಟ್ ಮೂಲಕ http://www.uceed.iitb.ac.in/2022/ ನಲ್ಲಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಸಾಮಾನ್ಯ ಪ್ರವೇಶ ಪರೀಕ್ಷೆಯು ಜನವರಿ 23, 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. UCEED (Undergraduate Common Entrance Examination for Design) ಪರೀಕ್ಷೆಯು ಎರಡು ಭಾಗಗಳನ್ನು ಹೊಂದಿದೆ. ಭಾಗ-A ಕಂಪ್ಯೂಟರ್ ಆಧಾರಿತವಾಗಿದೆ ಮತ್ತು ಭಾಗ-B ಒದಗಿಸಿದ ಹಾಳೆಯಲ್ಲಿ ಪ್ರಯತ್ನಿಸಬೇಕಾದ ಸ್ಕೆಚಿಂಗ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿದೆ. ನಿಗದಿತ ಸಮಯದಲ್ಲಿ ಅಭ್ಯರ್ಥಿಗಳು ಎರಡೂ ಭಾಗಗಳನ್ನು ಪ್ರಯತ್ನಿಸುವುದು ಕಡ್ಡಾಯವಾಗಿದೆ. UCEED 2022 ಅನ್ನು ಭಾರತದ 24 ನಗರಗಳಲ್ಲಿ ನಡೆಸಲಾಗುತ್ತದೆ. 

CAT Topper Chirag Gupta: ಕೋಚಿಂಗ್ ಇಲ್ಲದೇ, ಯುಟ್ಯೂಬ್ ನೋಡಿಯೇ CAT ರ‍್ಯಾಂಕ್ ಗಳಿಸಿದ !

http://www.uceed.iitb.ac.in/2022/ನಲ್ಲಿ ಅಧಿಕೃತ ಸೈಟ್‌ಗೆ ಭೇಟಿ ನೀಡಿ. ಮುಖಪುಟದಲ್ಲಿ ಲಭ್ಯವಿರುವ UCEED ಅಡ್ಮಿಟ್ ಕಾರ್ಡ್ 2022 ಲಿಂಕ್ ಅನ್ನು ಕ್ಲಿಕ್ ಮಾಡಿ. ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಅಪ್ಲೈ ಕ್ಲಿಕ್ ಮಾಡಿ. ಪ್ರವೇಶ ಪತ್ರವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.ಪ್ರವೇಶ ಪತ್ರವನ್ನು ಪರಿಶೀಲಿಸಿ ಮತ್ತು ಅದನ್ನು ಡೌನ್‌ಲೋಡ್ ಮಾಡಿ.  ಮುಂದಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ

Follow Us:
Download App:
  • android
  • ios