ಮೆಡಿಕಲ್ ಸೇರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ನೀಟ್ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳಿಗೂ ಕೌನ್ಸಲಿಂಗ್‌ಗೆ ಅವಕಾಶ!
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್–ಪಿ.ಜಿ) ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್ ಆಫ್ ಅಂಕವನ್ನು ಶೂನ್ಯಕ್ಕೆ ತಗ್ಗಿಸಿದೆ.
ಬೆಂಗಳೂರು (ಸೆ.21): ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್–ಪಿ.ಜಿ) ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್ ಆಫ್ ಅಂಕವನ್ನು ಶೂನ್ಯಕ್ಕೆ ತಗ್ಗಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷ ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳೆಲ್ಲರೂ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.
ನೀಟ್ ಎಲ್ಲಾ ವಿಭಾಗಗಳಿಗೂ ಇದು ಅನ್ವಯಿಸಲಿದೆ. ಕಟಾಫ್ ಹೆಚ್ಚಿಸಿದ್ದ ಕಾರಣ ದೇಶಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿಯಾಗಿಲ್ಲ. ಹೀಗಾಗಿ ದಾಖಲಾತಿಯಾಗದೇ ಮೆಡಿಕಲ್ ಸೀಟುಗಳು ಖಾಲಿ ಉಳಿದಿವೆ ಕಟಾಫ್ ಅಂಕವನ್ನ ಇಳಿಸಬೇಕೆಂದು ಸ್ಥಾನಿಕ ವೈದ್ಯರ ಸಂಘಟನೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಕಟಾಫ್ ಅಂಕ ಶೂನ್ಯಕ್ಕೆ ಇಳಿಸಿದೆ
ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ 100 ದಿನ: 62 ಕೋಟಿ ಪ್ರಯಾಣಿಕರು, ಟಿಕೆಟ್ ಮಾರಾಟವೆಷ್ಟು?
ನೀಟ್ ಅರ್ಜಿಯಲ್ಲಿ ಜಾತಿ ಬದಲಿಸಲು ಅವಕಾಶ ನೀಡಿದ ಕೋರ್ಟ್: ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ಮೂಲಕ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ (ಪಿ.ಜಿ.) ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಜಾತಿಯನ್ನು ತಪ್ಪಾಗಿ ನಮೂದಿಸಿದ ವಿದ್ಯಾರ್ಥಿನಿಗೆ ಜಾತಿಯ ಪ್ರವರ್ಗದ ಹೆಸರು ಬದಲಾಯಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.
ಕೋಲಾರದ ಜಯನಗರ ನಿವಾಸಿ ಡಾ.ಲಕ್ಷ್ಮೇ ಪಿ.ಗೌಡ ಎಂಬ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ಪೀಠ, ಅರ್ಜಿ ನಮೂನೆ ಕಾಲಂ-7 ರಲ್ಲಿನ ಸಾಮಾನ್ಯ ಎಂದು ನಮೂದಿಸಿದ್ದನ್ನು ಒಬಿಸಿ ಎಂದು ತಿದ್ದುಪಡಿ ಮಾಡಲು ವಿದ್ಯಾರ್ಥಿನಿಗೆ ಅವಕಾಶ ನೀಡುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಿದೆ.
ಓಲಾದಿಂದ ಬೈಕ್ ಟ್ಯಾಕ್ಸಿ ಆರಂಭ: ಆಟೋ ಚಾಲಕರಲ್ಲಿ ನಷ್ಟದ ಭೀತಿ
ಅಲ್ಲದೆ, ನ್ಯಾಯಾಲಯ ಅರ್ಜಿದಾರರ ಹೆಸರನ್ನು ಮೆರಿಟ್ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಒಬಿಸಿಯ ಜೇಷ್ಠತಾ ಪಟ್ಟಿಯಲ್ಲಿ ವಿದ್ಯಾರ್ಥಿನಿ ಹೆಸರು ಪರಿಗಣಿಸಬೇಕು ಎಂದು ಹೈಕೋರ್ಟ್ ಇದೇ ವೇಳೆ ಆದೇಶಿಸಿದ್ದು, ಇತರೆ ಯಾವುದೇ ಪ್ರಕರಣಕ್ಕೆ ಈ ಪ್ರಕರಣವನ್ನು ಪೂರ್ವ ನಿದರ್ಶನವಾಗಿ ಪರಿಗಣಿಸುವಂತಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.