ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಆರಂಭಗೊಂಡು ಯಶಸ್ವಿಯಾಗಿ ನೂರು ದಿನ ಪೂರೈಸಿದೆ. 

ಬೆಂಗಳೂರು (ಸೆ.21): ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಆರಂಭಗೊಂಡು ಯಶಸ್ವಿಯಾಗಿ ನೂರು ದಿನ ಪೂರೈಸಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ರಾಜ್ಯದ ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಮೂಲಕ ಅವಕಾಶ ನೀಡಿದೆ. ಕಳೆದ ಜೂನ್‌ 11ಕ್ಕೆ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಇದೀಗ ಸೆ.19ಕ್ಕೆ ಯೋಜನೆ ಆರಂಭಗೊಂಡು 100 ದಿನ ಪೂರೈಸಿ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಉಚಿತ ಬಸ್‌ ಪ್ರಯಾಣ ಆರಂಭಗೊಂಡ ಮೇಲೆ ಈ ವರೆಗೆ 62.55 ಕೋಟಿ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. 1456 ಕೋಟಿ ರು. ಟಿಕೆಟ್‌ ಮೊತ್ತದ ಪ್ರಯಾಣ ಮಾಡಲಾಗಿದೆ.

ಓಲಾದಿಂದ ಬೈಕ್‌ ಟ್ಯಾಕ್ಸಿ ಆರಂಭ: ಆಟೋ ಚಾಲಕರಲ್ಲಿ ನಷ್ಟದ ಭೀತಿ

ಶಕ್ತಿ ಯೋಜನೆ: 100 ದಿನದ ಅಂಕಿಅಂಶ
ನಿಗಮ ಮಹಿಳಾ ಪ್ರಯಾಣಿಕರ ಸಂಖ್ಯೆ ಉಚಿತ ಟಿಕೆಟ್‌ ದರದ ಮೊತ್ತ
ಕೆಎಸ್ ಆರ್‌ಟಿಸಿ 18.5 ಕೋಟಿ 541 ಕೋಟಿ ರು.
ಬಿಎಂಟಿಸಿ 21 ಕೋಟಿ 264 ಕೋಟಿ ರು.
ಎನ್‌ ಡಬ್ಲ್ಯೂಕೆಆರ್ ಟಿಸಿ 14.5 ಕೋಟಿ 368 ಕೋಟಿ ರು.
ಕೆಕೆಆರ್‌ ಟಿಸಿ 8.5 ಕೋಟಿ 282 ಕೋಟಿ ರು.