ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಪರ್ಕ ತರಗತಿ ರದ್ದು
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಸಾಲಿನ ಸಂಪರ್ಕ ತರಗತಿ ರದ್ದು| ಗೃಹಲೇಖನ/ಸಂಪ್ರಬಂಧ ಪಡೆಯಲು ನಿರ್ಣಯ| ಅವಧಿ ಮೀರಿ ಬಂದ ಅರ್ಜಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ|
ಹೊಸಪೇಟೆ(ಅ.30): ಹಂಪಿ ಕನ್ನಡ ವಿವಿಯ ದೂರಶಿಕ್ಷಣ ನಿರ್ದೇಶನಾಲಯವು ನಡೆಸುವ ಎಂ.ಎ. ಅಂತಿಮ ವರ್ಷದ ಕೋರ್ಸ್ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ದೇಶವ್ಯಾಪಿ ಕೋವಿಡ್-19 ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ಸಾಲಿನ ಸಂಪರ್ಕ ತರಗತಿಗಳನ್ನು ರದ್ದುಪಡಿಸಿ, ಗೃಹಲೇಖನ/ಸಂಪ್ರಬಂಧಗಳನ್ನು ಪಡೆಯಲು ನಿರ್ಣಯಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಂ.ಎ. ಅಂತಿಮ ವರ್ಷ ಮತ್ತು ಡಿಪ್ಲೊಮಾ ಕೋರ್ಸ್ಗಳ ರಿಪೀಟರ್ ವಿದ್ಯಾರ್ಥಿಗಳು ನವೆಂಬರ್ 1ರಿಂದ 30ರ ವರೆಗೆ ಯಾವುದೇ ದಂಡ ಶುಲ್ಕವಿಲ್ಲದೆ ಗೃಹಲೇಖನ/ಸಂಪ್ರಬಂಧ ಹಾಗೂ ಪರೀಕ್ಷಾ ಅರ್ಜಿಯನ್ನು ಸಲ್ಲಿಸಬಹುದು.
ರಾಜ್ಯದಲ್ಲಿ ಸೋಂಕು ಇಳಿಕೆ : ಶಾಲೆ ಆರಂಭಿಸಲು ಮುಹೂರ್ತ ಫಿಕ್ಸ್ ..?
ಡಿ. 1ರಿಂದ 31ರ ವರೆಗೆ ರು. 200 ದಂಡ ಸಹಿತ ಗೃಹಲೇಖನ/ಸಂಪ್ರಬಂಧ ಹಾಗೂ ರು. 300.00 ದಂಡ ಸಹಿತ ಪರೀಕ್ಷಾ ಅರ್ಜಿಯನ್ನು ಸಲ್ಲಿಸಬಹುದು. ಅವಧಿ ಮೀರಿ ಬಂದ ಅರ್ಜಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಕನ್ನಡ ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.