Asianet Suvarna News Asianet Suvarna News

Covid 19 Spike: 'ಶಾಲೆ ಆರಂಭಿಸದಿದ್ದರೆ ಪ್ರತಿ ಮಗುವಿಗೆ 5000 ನೀಡಿ’

*   ಆನ್‌ಲೈನ್‌ ತರಗತಿಗಳಲ್ಲಿ ಭಾಗಿಯಾಗದ ಮಕ್ಕಳೂ ಸಹ ಪಾಸ್‌
*   ಮಕ್ಕಳ ಮುಂದಿನ ಭವಿಷ್ಯಕ್ಕೂ ದೊಡ್ಡ ಸಮಸ್ಯೆ
*   ಎಲ್ಲ ವಲಯಗಳಲ್ಲಿ ಸೇವೆಗಳು ಮುಂದುವರೆಯುತ್ತಿದ್ದರೂ ಶಾಲೆ ಮಾತ್ರ ಸ್ಥಗಿತ

Government Should Give 5000 Per Child If School Does Not Start in Karnataka grg
Author
Bengaluru, First Published Jan 14, 2022, 7:30 AM IST

ಬೆಂಗಳೂರು(ಜ.14):  ಕೊರೋನಾದಿಂದ(Coronavirus) ಶಾಲೆಗಳನ್ನು(Schools) ಬಂದ್‌ ಮಾಡಿರುವುದರಿಂದ ಪ್ರತಿ ಮಗುವಿಗೆ ಮಾಸಿಕ ಐದು ಸಾವಿರ ರುಪಾಯಿಗಳನ್ನು ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ(State Child Rights Protection Committee) ಸರ್ಕಾರವನ್ನು(Government of Karnataka) ಆಗ್ರಹಿಸಿದೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಮಣ್ಣೆ ಮೋಹನ್‌, ಕೊರೋನಾ ಕಾಲದಲ್ಲಿ ಎಲ್ಲ ವಲಯಗಳಲ್ಲಿ ಸೇವೆಗಳು ಮುಂದುವರೆಯುತ್ತಿದ್ದರೂ ಶಾಲೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಮಕ್ಕಳಿಗೆ(Children) ಆನ್‌ಲೈನ್‌ ತರಗತಿಗಳಿಗೆ(Online Class) ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿಲ್ಲ. ಮಕ್ಕಳು ಮನೆಗಳಲ್ಲಿ ಇರುವುದರಿಂದ ಪೋಷಕರು ಕೂಲಿ ಕೆಲಸಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಶಾಲೆಗಳನ್ನು ಪುನರಾರಂಭಿಸಬೇಕು. ಇಲ್ಲವೇ ಪ್ರತಿ ಮಗುವಿಗೂ ಮಾಸಿಕ 5 ಸಾವಿರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

Raichur: ಶಿಕ್ಷಣ ಸಚಿವರೇ ಇತ್ತ ಒಮ್ಮೆ ತಿರುಗಿ ನೋಡಿ: 1053 ಮಕ್ಕಳಿಗೆ ಒಂದೇ ಶೌಚಾಲಯ..!

ಕೆಲ ಮನೆಗಳಲ್ಲಿ ಒಂದು ದಿನವೂ ಆನ್‌ಲೈನ್‌ ತರಗತಿಗಳಲ್ಲಿ ಭಾಗಿಯಾಗದ ಮಕ್ಕಳನ್ನು ಪಾಸ್‌ ಮಾಡಲಾಗುತ್ತಿದೆ. ಇದರಿಂದ ಅವರ ಮುಂದಿನ ಭವಿಷ್ಯಕ್ಕೂ ದೊಡ್ಡ ಸಮಸ್ಯೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಎರಡು ಪಾಳಿ ಅಥವಾ ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.

1-8ನೇ ಭೌತಿಕ ತರಗತಿ ಬಂದ್‌

ಧಾರವಾಡ: ಜಿಲ್ಲೆಯಾದ್ಯಂತ ಕೋವಿಡ್‌(Covid19) ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡ(Hubballi-Dharwad) ಮಹಾನಗರ, ಹುಬ್ಬಳ್ಳಿ ಮತ್ತು ಧಾರವಾಡ ಗ್ರಾಮೀಣ ತಾಲೂಕಿನಾದ್ಯಂತ ಭೌತಿಕ ತರಗತಿಗಳು9Offline Classes), ವಸತಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳನ್ನೊಳಗೊಂಡು ಎಲ್ಲ ಮಾಧ್ಯಮದ 1ರಿಂದ 8ನೇ ತರಗತಿ ವರೆಗಿನ ಶಾಲೆಗಳನ್ನು ಜ. 13ರಿಂದ ಮುಂದಿನ ಆದೇಶದ ವರೆಗೆ ತೆರೆಯದಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದರು.

ಜ. 11ರಂದು ಧಾರವಾಡ ತಾಲೂಕಿನ ಪಾಸಿಟಿವಿಟಿ ದರ(Positivity Rate) ಶೇ. 5.38 ಹಾಗೂ ಹುಬ್ಬಳ್ಳಿ ತಾಲೂಕಿನಲ್ಲಿ ಪಾಸಿಟಿವಿಟಿ ದರ ಶೇ. 11.76ರಷ್ಟು ಇದೆ. ಶಾಲೆಗಳಲ್ಲಿ ಕೋವಿಡ್‌-19 ಕ್ಲಸ್ಟರ್‌ ಪ್ರಕರಣಗಳು ಕಂಡು ಬಂದಿವೆ. ಈ ಕುರಿತು ಜ. 11ರಂದು ಜರುಗಿದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಿ ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಮಕ್ಕಳ(Children) ಆರೋಗ್ಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶಿಸಿದ್ದರು.

RTE Karnataka Admission 2022-23: RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ

ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳಿ:

ಜಿಲ್ಲಾಧಿಕಾರಿ ಆದೇಶದ ಅನ್ವಯ ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಅವರು ಎಲ್ಲ ಶಾಲೆಗಳಿಗೂ ಸೂಚನೆ ನೀಡಿದ್ದು, ಈ ಎಲ್ಲ ತಾಲೂಕುಗಳ ಶಿಕ್ಷಕರು(Teachers) ದಿನನಿತ್ಯದಂತೆ ಶಾಲೆಗೆ ತೆರಳಿ ಆನ್‌ಲೈನ್‌ ಮೂಲಕ ಮಕ್ಕಳಿಗೆ ಪಠ್ಯ ಬೋಧನೆ ಮಾಡಬೇಕು. 9 ಹಾಗೂ 10ನೇ ವರ್ಗದ ತರಗತಿಗಳನ್ನು ಕೋವಿಡ್‌ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ದಿನನಿತ್ಯದಂತೆ ಭೌತಿಕ ಕ್ಲಾಸ್‌ಗಳನ್ನು ನಡೆಸಬೇಕು ಎಂದಿದ್ದಾರೆ.

ಹಾಗೆಯೇ, ಜಿಲ್ಲೆಯಲ್ಲಿ ಜ. 12ರ ವರೆಗೆ ಒಟ್ಟು 50 ಮಕ್ಕಳಲ್ಲಿ ಹಾಗೂ ಮೂವರು ಶಿಕ್ಷಕರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ವಲಯದಲ್ಲಿ 9 ಬಾಲಕರಿಗೆ ಹಾಗೂ 3 ಬಾಲಕಿಯರಿಗೆ ಒಟ್ಟು 12 ಜನರಿಗೆ ಮತ್ತು ಧಾರವಾಡ ನಗರ ವಲಯದಲ್ಲಿ ಓರ್ವ ಬಾಲಕಿಗೆ ಹಾಗೂ ಹುಬ್ಬಳ್ಳಿ ನಗರ ವಲಯದಲ್ಲಿ 19 ಬಾಲಕರಿಗೆ 14 ಬಾಲಕಿಯರು ಸೇರಿ 33 ಜನರಲ್ಲಿ ಕೋವಿಡ್‌ ಸೋಂಕು ಕಂಡು ಬಂದಿದೆ. ಧಾರವಾಡ ಗ್ರಾಮೀಣ, ಧಾರವಾಡ ನಗರ ಮತ್ತು ಹುಬ್ಬಳ್ಳಿ ನಗರ ಸೇರಿ ಒಟ್ಟು 50 ವಿದ್ಯಾರ್ಥಿಗಳಲ್ಲಿ(Students) ಕೋವಿಡ್‌ ಸೋಂಕು ಪತ್ತೆಯಾಗಿದೆ. ಜತೆಗೆ ಓರ್ವ ಪುರುಷ ಹಾಗೂ ಇಬ್ಬರು ಮಹಿಳಾ ಶಿಕ್ಷಕಿಯರಲ್ಲಿಯೂ ಕೋವಿಡ್‌ ಸೋಂಕು ಪತ್ತೆಯಾಗಿದೆ. ಸೋಂಕು ಕಂಡು ಬಂದ ಶಾಲೆಗಳಲ್ಲಿ ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಸ್ವಚ್ಛಗೊಳಿಸಲಾಗಿದೆ. ಸೋಂಕಿತ ಮಕ್ಕಳು ಹಾಗೂ ಶಿಕ್ಷಕರು ಆರೋಗ್ಯವಾಗಿದ್ದು, ಹೋಂ ಕ್ವಾಂರಟೈನ್‌(Home Quarantine) ಆಗಿ ಚಿಕಿತ್ಸೆ ಪಡೆದಿದ್ದಾರೆ.
 

Follow Us:
Download App:
  • android
  • ios