Davanagere: ಮನೆ ಕಟ್ಟಿಸಬೇಕೆಂದಿದ್ದ ಹಣದಲ್ಲಿ ಶಾಲಾ ಕೊಠಡಿ ನಿರ್ಮಿಸಿದ ನೌಕರ

ದಾವಣಗೆರೆ ನಲ್ಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ  ಓದಿ ಕೃಷಿ  ಇಲಾಖೆಯಲ್ಲಿ ದೊಡ್ಡ ನೌಕರಿ ಸೇರಿದ ವ್ಯಕ್ತಿಯೊಬ್ಬರು  ಶೀಥಿಲಾವಸ್ಥೆಯಲ್ಲಿದ್ದ ನಾಲ್ಕು ಕೊಠಡಿಗಳನ್ನು ಕೆಡವಿ 56 ಲಕ್ಷ ಸ್ವಂತ ಹಣ ಖರ್ಚು ಮಾಡಿ 4 ಸ್ಮಾರ್ಟ್ ಕೊಠಡಿ ಕಟ್ಟಿಸಿದ್ದಾರೆ.

Government employee from Davangere spend saved money to build classroom gow

ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜೂನ್ 11):  ಹಳ್ಳಿಯಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಓದಿ ಸರ್ಕಾರಿ ನೌಕರಿ ಸೇರಿ ಹಳ್ಳಿಯಲ್ಲೊಂದು ಮನೆ ಕಟ್ಟಿಸಬೇಕೆಂದು ಅ ಅಧಿಕಾರಿ ಬಯಸಿದ್ದ. ಆದ್ರೆ ಆ ಊರಿನ ಸರ್ಕಾರಿ ಶಾಲೆ ಪರಿಸ್ಥಿತಿ ನೋಡಿ ತನ್ನ ಮನೆ ಕಟ್ಟಿಸುವುದಕ್ಕೆ ಕೂಡಿಸಿಟ್ಟಿ  ಹಣದಿಂದ ಸರ್ಕಾರಿ  ಶಾಲೆ ಕಟ್ಟಿಸಿದ್ದಾನೆ. ಶೀಥಿಲಾವಸ್ಥೆಯಲ್ಲಿ ನಾಲ್ಕು ಕೊಠಡಿಗಳನ್ನು ಕೆಡವಿ 56 ಲಕ್ಷ ಸ್ವಂತ ಹಣ ಖರ್ಚು ಮಾಡಿ 4 ಸ್ಮಾರ್ಟ್ ಕೊಠಡಿ ಕಟ್ಟಿಸಿದ್ದಾರೆ. ದಾವಣಗೆರೆ ತಾಲ್ಲೂಕ್ ನಲ್ಕುಂದ ಗ್ರಾಮದಲ್ಲಿ ಕಟ್ಟಿಸಿರುವ ಆ ದಾನಿಯ ಕುರಿತ ಒಂದು ವರದಿ ಇಲ್ಲಿದೆ. 

ಹಳ್ಳಿಯಲ್ಲಿ ಹುಟ್ಟಿ ಆ ಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿ ಎಷ್ಟೋ ಜನ ದೊಡ್ಡ ದೊಡ್ಡ ನೌಕರಿ ಸೇರಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಅಂತವರು ಅವರು  ಓದಿದ  ಶಾಲೆ ಹಳ್ಳಿಗೆ ಏನಾದ್ರು ಕೊಡುಗೆ ನೀಡಿದ್ರೆ ಇಡೀ ಗ್ರಾಮ ಅವರನ್ನು  ಗೌರವಿಸಿ ಸನ್ಮಾನಿಸುತ್ತದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.   ದಾವಣಗೆರೆ ತಾಲ್ಲೂಕ್ ನಲ್ಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ  ಓದಿ ಕೃಷಿ  ಇಲಾಖೆಯಲ್ಲಿ ದೊಡ್ಡ ನೌಕರಿ ಸೇರಿದ ಓ ಎಸ್ ದಯಾನಂದ ಅವರು ನಲ್ಕುಂದ ಗ್ರಾಮದಲ್ಲಿ ಮನೆ ಮಾತಾಗಿದ್ದಾರೆ.  

ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್‌

 ಓ ಎಸ್ ದಯಾನಂದ  ಓದಿದ್ದು ಸರ್ಕಾರಿ  ನಲ್ಕುಂದ  ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ.  ಸರ್ಕಾರಿ ಶಾಲೆಯಲ್ಲಿ  ಓದಿ ಪಿಯುಸಿ ಮುಗಿಸಿ ಬಿ ಎಸ್ಸಿ ಮಾಡಿ  ಎಂ ಎಸ್ಸಿ  ಅಗ್ರಿ ಓದಿದ  ಅವರು  ಬೆಂಗಳೂರಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿಯಾಗಿದ್ದಾರೆ.  ದಯಾನಂದ ಅವರ  ಪತ್ನಿ ಬಿ ಎಸ್ ಕವಿತಾ ಎಂ ಟೆಕ್ ಮಾಡಿ ಸಾಪ್ಟ್ ವೇರ್ ಉದ್ಯೋಗಿಯಾಗಿದ್ದಾರೆ. ದಯಾನಂದ ತಾಯಿ  ಸುನಂದಮ್ಮ  ಇನ್ನು ನಲ್ಕುಂದ ಗ್ರಾಮದಲ್ಲಿ ವಾಸವಾಗಿದ್ದು ಆ ಗ್ರಾಮದಲ್ಲಿ ದಯಾನಂದ ದಂಪತಿ ಗಳು ಒಂದು ಮನೆ ಕಟ್ಟಿಸಬೇಕೆಂದಿದ್ದರು. 

ಆ ದಂಪತಿ ಮನೆ ಕಟ್ಟಿಸಿಬೇಕೆಂದು ಹಳ್ಳಿಗೆ ಬಂದಿದ್ದಾಗ  ಅಲ್ಲಿನ  ಸ್ಕೂಲ್ ಟೀಚರ್ ಗಳು ಶಾಲೆಗೆ ಏನಾದ್ರು ದೇಣಿಗೆ ಕೊಡಿ ಎಂದು ಮನವಿ ಮಾಡಿದರು. ಆ ದಂಪತಿಗಳು ಸ್ಕೂಲ್ ಬಳಿ ಭೇಟಿ ನೀಡಿದಾಗ ಶೀಥಿಲಾವಸ್ಥೆಯಲ್ಲಿದ್ದ ಕಟ್ಟಡ ನೋಡಿ ಬೇಸರ ಆಯಿತು.   ಆ ಸ್ಕೂಲ್ ಗೆ  ತಟ್ಟೆ ಲೋಟ ಅಲ್ಮೇರಾ ಕೊಡುವುದಕ್ಕೆ ಬದಲಾಗಿ ಹಳೇ ಶೀಥಿಲಾವಸ್ಥೆ ಕಟ್ಟಡ ಕೆಡವಿದ್ರೆ   ಹೊಸ ಕಟ್ಟಡ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು. 

Udupi; 15ನೇ ಶತಮಾನದ ವಿಜಯನಗರ ಕಾಲದ ಶಾಸನ ಪತ್ತೆ

ಈ ಬಗ್ಗೆ ಸ್ಕೂಲ್ ಎಸ್ ಡಿ ಎಂ ಸಿ, ಟೀಚರ್ ಗಳು ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರು. ಒಂದು ವಾರದೊಳಗೆ ಶಿಕ್ಷಣ ಇಲಾಖೆಯಿಂದ ಅಪ್ರೂವಲ್ ಸಿಕ್ಕಿತು.  ದಯಾನಂದ ಅವರ  ಮನೆ ಕಟ್ಟಿಸುವುದನ್ನು ಮುಂದೂಡಿ  ನನ್ನ ಕನಸಿನ ತರ ಶಾಲಾ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಬುನಾದಿಯಿಂದ ಹಿಡಿದು ನಾಲ್ಕು  ಸ್ಕೂಲ್ ಕಟ್ಟಡ ಮುಕ್ತಾಯವಾಗುವ ವೇಳೆಗೆ  56 ಲಕ್ಷ ಖರ್ಚು ಮಾಡಿದ್ದಾರೆ. ಕೊರೊನೋ ವೇಳೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ  ಅಸಾಧ್ಯವಾಗಿದ್ದನ್ನು ದಯಾನಂದ ಮಾಡಿ ತೋರಿಸಿದ್ದಾರೆ. ಅವರು ಓದಿದ ಶಾಲೆಗೆ ಹೊಸ ರೂಪು ಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ಇಡೀ ಗ್ರಾಮ ಚಿರಋಣಿಯಾಗಿದೆ.  

ದಯಾನಂದ ಸ್ನೇಹಜೀವಿ  ಅವರು ಗ್ರಾಮಕ್ಕೆ ಬಂದ್ರೆ ಇಡೀ ಊರೇ ಅವರಿಗೆ ಸ್ನೇಹಿತರು. ಗ್ರಾಮಸ್ಥರು ಶಿಕ್ಷಣ ಇಲಾಖೆ  ಅವರು ಸಹಕಾರಿ ನೀಡಿದ್ದಕ್ಕೆ ಇಂತಹ ಸುಂದರವಾದ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಶತಮಾನದ ಶಾಲೆಗೆ ಕೊಠಡಿ ಕಟ್ಟಿಸಿಕೊಟ್ಟಿದ್ದಕ್ಕೆ ಇಡೀ ಗ್ರಾಮ ಧನ್ಯವಾದ ಹೇಳಿದ್ದಾರೆ.  ದಯಾನಂದ  ಕಾರ್ಯ ಹತ್ತು ಹಳ್ಳಿಗಳಲ್ಲೇ ಮನೆ ಮಾತಾಗಿದೆ. ಸರ್ಕಾರಿ ಶಾಲೆಯಲ್ಲಿ ಓದಿ ದೊಡ್ಡ ಹುದ್ದೆಯಲ್ಲಿರುವವರು ಇಂತಹದೊಂದು ಸಹಕಾರ ಕೊಟ್ಟರೇ ಸರ್ಕಾರಿ ಶಾಲೆಗಳು ಮತ್ತಷ್ಟು ಸುಧಾರಿಸುತ್ತವೆ. ಆ ಮೂಲಕ ಬಡಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. 

ನಲ್ಕುಂದ  ಹೊಸ ಶಾಲಾ ಕಟ್ಟಡ ಉದ್ಘಾಟನೆಗೆ  ಕೃಷಿ ಸಚಿವ ಬಿ ಸಿ ಪಾಟೀಲ್ ಆಗಮಿಸಿ ನಾಲ್ಕು ಕೊಠಡಿಗಳನ್ನು ಉದ್ಘಾಟಿಸಿ ದಯಾನಂದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕಾರ್ಯ ನಿಜಕ್ಕು ಅಭಿನಂದನೆಗೆ ಅರ್ಹ. ಅವರ ಸ್ವಂತ ಮನೆಯನ್ನು ಕಟ್ಟಿಸುವುದಕ್ಕೆ ಮುಂದೂಡಿ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿರುವುದು ಅವರಿಗೆ ಸರ್ಕಾರಿ ಶಾಲೆ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಹೀಗೆ ಹಳ್ಳಿಗಳಲ್ಲಿ ಓದಿದವರು ಸ್ಕೂಲ್ ಗೆ  ತಮ್ಮ ಕೊಡುಗೆಗಳನ್ನು ನೀಡಿದ್ರೆ ಸರ್ಕಾರಕ್ಕೆ ಹೊರೆ  ಕಡಿಮೆಯಾಗುತ್ತದೆ ಎಂದರು.

Latest Videos
Follow Us:
Download App:
  • android
  • ios