ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ 2 ಬಾರಿ ಪೂರಕ ಪರೀಕ್ಷೆಗೆ ಅವಕಾಶ: ಇಲ್ಲಿದೆ ಪರೀಕ್ಷಾ ವೇಳಾಪಟ್ಟಿ

ರಾಜ್ಯದಲ್ಲಿ 2022-23 ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸರ್ಕಾರ 2ನೇ ಬಾರಿಗೆ ಪೂರಕ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ಅವಕಾಶ ನೀಡಿದೆ.

Good news for second PU students yearly two time supplementary exams written are allowed sat

ಬೆಂಗಳೂರು (ಜು.28): ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿಯನ್ನು ನೀಡಲಾಗಿದೆ. ಇನ್ನುಮುಂದೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣ ಆದಲ್ಲಿ ಅಥವಾ ಕಡಿಮೆ ಅಂಕಗಳು ಬಂದಲ್ಲಿ 2 ಬಾರಿ ಪೂರಕ ಪರೀಕ್ಷೆಯನ್ನು ಬರೆಯಲು ಸರ್ಕಾರ ಅನುಮತಿಯನ್ನು ನೀಡಲಾಗಿದೆ. ಈ ಬಗ್ಗೆ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಮಾಹಿತಿ ನೀಡಲಾಗಿದೆ.

ರಾಜ್ಯುದಲ್ಲಿ 2022-23 ನೇ ಸಾಲಿನ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ 2 ನೋಂದಣಿಗೆ ಅವಕಾಶ ನೀಡಲಾಗಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎರಡನೇ ಪೂರಕ ಪರೀಕ್ಷೆಗೆ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಕೂಡಲೇ ವಿದ್ಯಾರ್ಥಿಗಳು 2ನೇ ಪೂರಕ ಪರೀಕ್ಷೆಗೆ ನೋಂದಣಿ ಮಾಡಿಸಿಕೊಳ್ಳಬಹುದು.

ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಇನ್ಮುಂದೆ ಎಲ್ಲಾ ವಿಷಯಗಳಿಗೂ ಇಂಟರ್ನಲ್ ಮಾರ್ಕ್ಸ್..!

ಇದಕ್ಕಾಗಿ https://kseab.karnataka.gov.in ವೆಬ್‌ಸೈಟ್‌ ಮೂಲಕ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಜಾಲತಾಣದಲ್ಲಿ ಪ್ರಕಟ ಮಾಡಲಾಗಿದೆ. ಇಲ್ಲಿ ಮುಖ್ಯವಾಗಿ 2022-23 ಹಾಗೇ ಅದಕ್ಕಿಂತ ಹಿಂದಿನ ಸಾಲಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಆದರೆ, ಈ ವಾಧಿಯಲ್ಲಿ ಫಲಿತಾಂಶ ತಿರಸ್ಕರಿಸಲು ಮತ್ತೆ ಅವಕಾಶ ಇಲ್ಲ. ಆಗಸ್ಟ್ 21 ರಿಂದ ಸೆಪ್ಟೆಂಬರ್ 2 ರವರಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

  • ಪರೀಕ್ಷಾ ವೇಳಾಪಟ್ಟಿ 
  • 21/08/23 ಮಧ್ಯಾಹ್ನ 2.15 ರಿಂದ 5.30 ರವರಿಗೆ ಕನ್ನಡ , ಅರೇಬಿಕ್ 
  • 22/08/2023 ಮಧ್ಯಾಹ್ನ ಐಚ್ಚಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ 
  • 23/08/2023  ಮಧ್ಯಾಹ್ನ ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿತ ವಿಜ್ಞಾನ
  • 24/08/2023 ಮಧ್ಯಾಹ್ನ  ತರ್ಕ ಶಾಸ್ತ್ರ ಹಿಂದೂಸ್ಥಾನಿ ಸಂಗೀತ, ವ್ಯವಹಾರ ಅಧ್ಯಯನ, 
  • 25/08/2023 ಮಧ್ಯಾಹ್ನ ಇತಿಹಾಸ , ಸಂಖ್ಯಾಶಾಸ್ತ್ರ 
  • 26/08/2023 ಬೆಳಗ್ಗೆ 10.15 ರಿಂದ 12.30 ರವರೆಗೆ ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್ ಮತ್ತು ಮಧ್ಯಾಹ್ನ 2.15 ರಿಂದ 5.30 ರವರಿಗೆ ಇಂಗ್ಲೀಷ್‌
  • 27/08/2023 ಭಾನುವಾರ ರಜೆ 
  • 28/08/2023 ಮಧ್ಯಾಹ್ನ 2.15 ರಿಂದ 5.30ರ ವರೆಗೆ ಭೂಗೋಳ ಶಾಸ್ತ್ರ, ಮನಶಾಸ್ತ್ರ, ಭೌತ ಶಾಸ್ತ್ರ
  • 29/08/2023  ಮಧ್ಯಾಹ್ನ ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
  • 30/08/2023 ಮಧ್ಯಾಹ್ನ ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ 
  • 31/08/2023 ಮಧ್ಯಾಹ್ನ  ಹಿಂದಿ 
  • 1/09/2023  ಮಧ್ಯಾಹ್ನ ಅರ್ಥ ಶಾಸ್ತ್ರ , ಜೀವ ಶಾಸ್ತ್ರ 
  • 2/09/2023 ಮಧ್ಯಾಹ್ನ ತಮಿಳು, ತೆಲುಗು , ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ , ಫ್ರೆಂಚ್

 

Latest Videos
Follow Us:
Download App:
  • android
  • ios