ಚಿಕ್ಕಬಾಣಾವರ ಪುರಸಭಾ ವ್ಯಾಪ್ತಿಯ ಆಚಾರ್ಯ ಕಾಲೇಜು ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಗಣಪತಿನಗರ ರಸ್ತೆ ಗುಂಡಿಮಯವಾಗಿದೆ. ಈ ಮೊದಲು ಹಾಕಿದ್ದ ಕಾಂಕ್ರೀಟ್‌ ರಸ್ತೆ ದುಸ್ಥಿತಿ ತಲುಪಿದ್ದು, ಸಿಮೆಂಟ್‌ ಕಿತ್ತು ಹೋಗಿದೆ. ಕಿತ್ತು ಹೋಗಿದೆ. ಶಾಲೆಗಳಿಗೆ ತಿರುಗಾಡುವ ಮಕ್ಕಳ ಸ್ಥಿತಿ ಹೇಳತೀರದು. ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೀಣ್ಯ ದಾಸರಹಳ್ಳಿ (ಸೆ.9) : ಚಿಕ್ಕಬಾಣಾವರ ಪುರಸಭಾ ವ್ಯಾಪ್ತಿಯ ಆಚಾರ್ಯ ಕಾಲೇಜು ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಗಣಪತಿನಗರ ರಸ್ತೆ ಗುಂಡಿಮಯವಾಗಿದೆ. ಈ ಮೊದಲು ಹಾಕಿದ್ದ ಕಾಂಕ್ರೀಟ್‌ ರಸ್ತೆ ದುಸ್ಥಿತಿ ತಲುಪಿದ್ದು, ಸಿಮೆಂಟ್‌ ಕಿತ್ತು ಹೋಗಿದೆ. ಕಂಬಿಗಳು ನರಬಲಿಗಾಗಿ ಬಾಯ್ತೆರೆದು ನಿಂತಿವೆ. ಎಲ್ಲ ಗುಂಡಿಗಳು ತುಂಬಿ ರಸ್ತೆ ಕಾಣದೆ ಹತ್ತಾರು ಜನ ಬಿದ್ದು ಎದ್ದು ಹೋಗುವ ಸನ್ನಿವೇಶಗಳು ಸಾಮಾನ್ಯ. ಆದರೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ನೆರೆ ಕಷ್ಟ ಆಲಿಸಲು ಕುಂದುಕೊರತೆ ಘಟಕ ಆರಂಭಿಸಿ: ಹೈಕೋರ್ಟ್‌

ಆಚಾರ್ಯ ಕಾಲೇಜಿನಿಂದ ಎಡಿಫೈ ಸ್ಕೂಲ್‌ವರೆಗೆ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಶಾಲೆಗಳಿಗೆ ತಿರುಗಾಡುವ ಮಕ್ಕಳ ಸ್ಥಿತಿ ಹೇಳತೀರದು. ಈ ಹದಗೆಟ್ಟರಸ್ತೆಯಲ್ಲಿ ನೀರು ತುಂಬಿಕೊಂಡು ಗುಂಡಿ ಕಾಣದೆ ಮಲ್ಲಿಕಾರ್ಜುನ ಎಂಬ ವ್ಯಕ್ತಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.

ಗಣಪತಿ ನಗರದಿಂದ ತಮ್ಮೇನಹಳ್ಳಿ, ಇತರೆ ಹಳ್ಳಿಗಳಿಗೆ ಹೋಗುವ ಮುಖ್ಯ ರಸ್ತೆ ಹಾಳಾಗಿದ್ದು, ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಈ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಬಿದ್ದು ಎದ್ದು ಹೋಗುವ ಸನ್ನಿವೇಶ ಸೃಷ್ಟಿಯಾಗಿದೆ. ಈಗಲಾದರೂ ಅಧಿಕಾರಿಗಳು, ರಾಜಕಾರಣಿಗಳು ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆ ದುಸ್ತರವಾಗುತ್ತದೆ.

-ಮಂಜುನಾಥ್‌, ಸ್ಥಳೀಯ ನಿವಾಸಿ.

ರಸ್ತೆ ತುಂಬಾ ದಿನಗಳಿಂದ ಹಾಳಾಗಿದ್ದು, ರಾಜಕಾರಣಿಗಳ ಗಮನಕ್ಕೂ ತಂದಿದ್ದೇವೆ. ಆದರೂ ಯಾರು ಗಮನ ಹರಿಸುತ್ತಿಲ್ಲ, ನಿನ್ನೆ ಸುರಿದ ಮಳೆಯಿಂದಾಗಿ ವಾಹನ ಸವಾರರೊಬ್ಬರು ಬಿದ್ದು ಕಾಲು ಮುರಿದು ಆಸ್ಪತ್ರೆಗೆ ಸೇರಿದ್ದಾರೆ. ಈ ರಸ್ತೆ ಸರಿಪಡಿಸದೆ ಹೋಗದರೆ ತುಂಬಾ ತೊಂದರೆ ಆಗುತ್ತಿದೆ.

-ನೇತ್ರಾ, ಸ್ಥಳೀಯ ನಿವಾಸಿ.

ಇಳಿದ ನೆರೆ: ಕೆಸರು, ದುರ್ವಾಸನೆಗೆ ಜನ ಹೈರಾಣ;

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಹೆಚ್ಚಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಾಸನೆ ಹಾಗೂ ರೋಗ-ರುಜಿನಗಳು ಹರಡು ಭೀತಿಯಲ್ಲಿ ಜನರು ಜೀವಿಸುವಂತಾಗಿದೆ. ಸರ್ಜಾಪುರ ರಸ್ತೆಯಲ್ಲಿನ ರೈನ್‌ಬೋ ಲೇಔಟ್‌ನಲ್ಲಂತೂ ಕಳೆದ ಕೆಲ ದಿನಗಳಿಂದಲೂ ಸುರಿದ ಸತತ ಮಳೆಯಿಂದಾಗಿ ಇಡೀ ಲೇಔಟ್‌ ನಿವಾಸಿಗಳು ಅತೀ ಹೆಚ್ಚು ಬಾಧಿತರಾಗಿದ್ದರು, ಸುಮಾರು 250ಕ್ಕೂ ಹೆಚ್ಚು ವಿಲ್ಲಾಗಳಿರುವ ಲೇಔಟ್‌ನಿಂದ ಜನ ಹೊರಗಡೆ ಬರಲಾಗದೇ ಪರದಾಡಿದರು. ಇನ್ನು ಲೇಔಟ್‌ ದ್ವಾರ ಬಾಗಿಲಿನಲ್ಲೇ ಇದ್ದ ಕೆನರಾ ಬ್ಯಾಂಕ್‌ ಹಾಗೂ ಅಂಗಡಿ ಮಳಿಗೆಗಳಲ್ಲಿನ ಎಲ್ಲ ವಸ್ತುಗಳು ನಾಶವಾಗಿದ್ದವು. ಇದೀಗ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಸ್ವಚ್ಛತಾ ಕಾರ್ಯ ಆರಂಭವಾಗಿದೆ.

Bengaluru Flood: ಬೆಂಗಳೂರಿನ ನೆರೆಪೀಡಿತ ಪ್ರದೇಶಗಳಲ್ಲಿ ಸಿದ್ದು ಸಂಚಾರ, ಸಮೀಕ್ಷೆ

ಒಂದೆಡೆ ನೆರೆಯ ಪ್ರಮಾಣ ಕಡಿಮೆಯಾದರೆ ನೀರಿನ ಸಂಪ್‌, ಟ್ಯಾಂಕ್‌ ಹಾಗೂ ಮನೆಯಂಗಳ ರಸ್ತೆಗಳಲ್ಲಿ ಕೆಸರು ತುಂಬಿಕೊಂಡು ದುರ್ವಾಸನೆ ಜೊತೆಗೆ ರೋಗ-ರುಜಿನಗಳು ಹರಡುವ ಭಯ ಇಲ್ಲಿನ ನಿವಾಸಿಗಳಲ್ಲಿ ಆರಂಭವಾಗಿದೆ. ಸರ್ಜಾಪುರ ರಸ್ತೆಯ ರೈನ್‌ ಬೋ ಡ್ರೈವ್‌ ಹಾಗೂ ಸನ್ನಿ ಬ್ರೂಕ್‌ ವಿಲ್ಲಾಗಳ ಸುತ್ತಲು ಹಾಲನಾಯಕನಹಳ್ಳಿ, ಚೂಡಸಂದ್ರ ಹಾಗೂ ಸಿದ್ದಾಪುರ ಕೆರೆಗಳು ಇವೆ. ಇದರಿಂದ ಪ್ರತಿಭಾರಿ ಮಳೆ ಬಂದಾಗಲು ರೈನ್‌ ಬೋ ಡ್ರೈವ್‌ ವಿಲ್ಲಾ ಮುಖ್ಯದ್ವಾರದಿಂದಲೇ ನೀರು ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ.