Asianet Suvarna News Asianet Suvarna News

ಕರ್ನಾಟಕಕ್ಕೆ ಎಫ್‌ಎಸ್‌ಎಲ್‌ ವಿವಿ ಮಂಜೂರು: ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಜಾಗ ಗುರುತಿಸಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ 

FSL University Sanctioned to Karnataka Says Home Minister Araga Jnanendra grg
Author
First Published Oct 11, 2022, 2:33 PM IST

ಶಿವಮೊಗ್ಗ(ಅ.11):  ರಾಜ್ಯಕ್ಕೆ ಎಫ್‌ಎಸ್‌ಎಲ್‌ ವಿಶ್ವ ವಿದ್ಯಾನಿಲಯ ಮಂಜೂರಾಗಿದ್ದು, ಕೇಂದ್ರದ ಸೂಚನೆಯಂತೆ ಇದರ ಸ್ಥಾಪನೆ ಸಂಬಂಧ ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಜಾಗ ಗುರುತಿಸಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಬಾರಿ ರಾಜ್ಯಕ್ಕೆ ಗೃಹ ಸಚಿವ ಅಮಿತ್‌ ಶಾ ಆಗಮಿಸಿದ ವೇಳೆಯಲ್ಲಿ ರಾಜ್ಯಕ್ಕೆ ಎಫ್‌ಎಸ್‌ಎಲ್‌ ವಿವಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಇದೀಗ ಇದಕ್ಕೆ ಪೂರಕವಾಗಿ ಸ್ಪಂದಿಸಿ ಪತ್ರ ಬರೆದು ಜಾಗ ಗುರುತಿಸಿವಂತೆ ಸೂಚನೆ ನೀಡಿದ್ದಾರೆ. ಆದರೆ ವಿವಿ ಸ್ಥಾಪನೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರಬೇಕೆನ್ನುತ್ತಾರೆ. ನಮ್ಮ ಜಿಲ್ಲೆಯಲ್ಲಿ ಏರ್‌ಪೋರ್ಟ್‌ ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂಬುದನ್ನು ಈ ಪ್ರಸ್ತಾವನೆಯನ್ನು ಹೇಳಲಾಗಿದೆ ಎಂದರು.

ಎಲ್ಲಿ ಸ್ಥಾಪನೆಯಾಗುತ್ತದೆಯೋ ಗೊತ್ತಿಲ್ಲ. ಒಟ್ಟಾರೆ ರಾಜ್ಯಕ್ಕೆ ಬರುತ್ತದೆ ಎನ್ನುವುದು ಖುಷಿಯ ವಿಚಾರ. ಶಿವಮೊಗ್ಗ ಎಫ್‌ಎಸ್‌ಎಲ್‌ ಲ್ಯಾಬ್‌ ಅನ್ನು ಶೀಘ್ರದಲ್ಲಿ ಆರಂಭಿಸುತ್ತಿದ್ದೇವೆ. ಸದ್ಯ ಹುಬ್ಳಳ್ಳಿ ಮತ್ತು ಬಳ್ಳಾರಿಯಲ್ಲಿ ಮಾಡಿದ್ದೇವೆ ಎಂದು ಹೇಳಿದರು.

Bangalore University: ಜ್ಞಾನಭಾರತಿ ಜಾಗ ರಕ್ಷಣೆಗೆ ವಿವಿ ನಿರ್ಧಾರ!

ಭೂತಾನ್‌ ಅಡಕೆ ಆಮದು ಸೂಕ್ಷ್ಮ ವಿಚಾರ: ಚೀನಾ ಪಕ್ಕದಲ್ಲಿರುವ ಭೂತಾನ್‌ ಒಂದು ಸೂಕ್ಷ್ಮಪ್ರದೇಶದಲ್ಲಿದೆ. ಭದ್ರತೆ ದೃಷ್ಟಿಯಿಂದ ನಮಗೆ ಭೂತಾನ್‌ ಬೇಕಾಗಿದೆ. ಇದರೊಡನೆ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, ಸರ್ಕಾರ ಬದಲಾವಣೆ ಆದಾಗ ಈ ಒಪ್ಪಂದಗಳನ್ನು ಮುರಿಯಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕೆಲವರು ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರ ಹಿಂದಿನ ವಿಚಾರ ಮತ್ತು ವಾಸ್ತವಿಕ ವಿಚಾರ ಅರ್ಥ ಮಾಡಿಕೊಳ್ಳಬೇಕೆಂದರು.

ಭೂತಾನ್‌ನಿಂದ ಬರುವುದು ಒಣ ಅಡಕೆಯಲ್ಲ. 17 ಸಾವಿರ ಟನ್‌ ಹಸಿ ಅಡಕೆ ಆಮದಾಗುತ್ತಿದೆ. ವಾಸ್ತವವಾಗಿ ಪ್ರತಿ ಟನ್‌ ಹಸಿ ಅಡಕೆಯಿಂದ ಸರಿ ಸುಮಾರು 130 ಕೆಜಿ ಒಣ ಅಡಕೆ ದೊರೆಯುತ್ತದೆ. ಹೀಗಿರುವಾಗ 17 ಸಾವಿರ ಟನ್‌ ಹಸಿ ಅಡಕೆಯಿಂದ ಎಷ್ಟುಒಣ ಅಡಕೆ ಆಗುತ್ತದೆ ಎಂದು ಲೆಕ್ಕ ಹಾಕಬೇಕು. ಮತ್ತು ಇದರಿಂದ ಸ್ಥಳೀಯ ಅಡಕೆ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೊತೆಗೆ ಭೂತಾನ್‌ನಿಂದ ಅಡಕೆಯು ಸಮುದ್ರ ಮಾರ್ಗದಲ್ಲಿಯೇ ಬರುತ್ತದೆ. ಹೀಗೆ ಬರಲು ಕನಿಷ್ಟ15 ದಿನವಾದರೂ ಬೇಕು. ಈ ಅವಧಿಯಲ್ಲಿ ಅಡಕೆ ಗುಣಮಟ್ಟವಾಗಿ ಉಳಿಯಲು ಸಾಧ್ಯವೂ ಇಲ್ಲ ಎಂದರು.

ಇದಲ್ಲದೆ, ನಮ್ಮ ದೇಶದಿಂದ ದೊಡ್ಡ ಪ್ರಮಾಣದಲ್ಲಿ ಭೂತಾನ್‌ ದೇಶಕ್ಕೆ ಒಣ ಅಡಕೆ, ಗುಟ್ಕಾ ಇತ್ಯಾದಿ ರಫ್ತಾಗುತ್ತಿದೆ. ಇದನ್ನು ಗಮನಿಸಬೇಕೆಂದರು. ಹೀಗಾಗಿ ಈ ವಿಷಯದಲ್ಲಿ ಯಾರೂ ಗೊಂದಲ ಸೃಷ್ಟಿಸುವುದು ಬೇಡ, ಸೂಕ್ಷ್ಮ ವಿಚಾರವನ್ನು ಚರ್ಚೆಗೆ ಇಡುವುದು ಬೇಡ. ವಾಸ್ತವ ಅರ್ಥ ಮಾಡಿಕೊಳ್ಳಬೇಕೆಂದರಲ್ಲದೆ, ತೀರ್ಥಹಳ್ಳಿಯ ನಾಯಕರೊಬ್ಬರು ನನ್ನ ರಾಜೀನಾಮೆ ಕೇಳಿದ್ದಾರೆ. ಇವರಿಗೆ ಅಡಕೆ ಬೆಳೆಗಾರರ ಹಿತ ಮುಖ್ಯವಲ್ಲ, ಕೇವಲ ರಾಜಕಾರಣಕ್ಕಾಗಿ ಇಂತಹ ಮಾತಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಟೀಕಿಸಿದರು.

ಭಾರತ್‌ ಜೋಡೊ ಯಾತ್ರೆಯಿಂದ ನಮಗೆ ಯಾವ ನಷ್ಟವೂ ಇಲ್ಲ. ಈಗ ನಡೆಯುತ್ತಿರುವುದು ಆ ಪಕ್ಷ ಅಧಿಕಾರಕ್ಕೆ ಬರಲಿ ಎಂದಲ್ಲ, ಬದಲಾಗಿ ಲೀಡರ್‌ ಹುಟ್ಟು ಹಾಕಲು. ಆದರೆ ಕಾಂಗ್ರೆಸ್‌ ನಾಯಕರು ತಲೆ ಕೆಳಗು ಮಾಡಿದರೂ ಏನೂ ಆಗೊಲ್ಲ ಎಂದು ಛೇಡಿಸಿದರು.

ಭೂ ಒತ್ತುವರಿ ನಿಷೇಧ ಕಾಯ್ದೆ ತಿದ್ದುಪಡಿ ಪೂರ್ವಾನ್ವಯವಾಗಲಿದೆ: ರೈತರ ಮೇಲಿನ ಕೇಸ್‌ ವಾಪಸ್ಸು

ಭೂ ಒತ್ತುವರಿ ನಿಷೇಧ ಕಾಯ್ದೆಯ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶವನ್ನು ಕೈ ಬಿಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಇದು ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಹಾಲಿ 192 ಎ ಅನ್ವಯ ಭೂ ಒತ್ತುವರಿ ಮಾಡಿದ ಸಾವಿರಾರು ಜನ ಮೇಲೆ ಕೇಸು ದಾಖಲಿಸಿದ್ದು, ಈ ಎಲ್ಲ ಕೇಸುಗಳನ್ನು ವಾಪಸ್ಸು ಪಡೆಯಲಾಗುತ್ತದೆ ಎಂದರು.

ವಿಟಿಯು ನೂತನ ಕುಲಪತಿಯಾಗಿ ಡಾ.ವಿದ್ಯಾಶಂಕರ್‌ ನೇಮಕ!

ಬಗರ್‌ ಹುಕುಂ ಕಾರ್ಯಮಾತಿಯಂತೆ ಗೋಮಾಳದಲ್ಲಿ ಜಾಗ ನೀಡಬಹುದು. ಗೋಪಾಳದಲ್ಲಿ 30 ಎಕರೆ ಜಾಗ ಬಿಟ್ಟು ಉಳಿದದ್ದನ್ನು ಹಂಚಬಹುದು. ಅರಣ್ಯಇಲಾಖೆಗೆ ಸೇರದ ಕಂದಾಯ ಇಲಾಖೆಯಲ್ಲಿ ಭೂಮಿಯಲ್ಲಿ ಉಳುಮೆ ಮಾಡಿದ ಭೂಮಿಯನ್ನು ಕೊಡಲು ಕೂಡ ಸಮಸ್ಯೆ ಇತ್ತು. ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದ್ದು, ನಾಳೆ ಕಂದಾಯ ಸಚಿವ ಆರ್‌. ಅಶೋಕ್‌ ನೇತೃತ್ವದ ಕ್ಯಾಬಿನೆಟ್‌ ಉಪ ಸಮಿತಿ ಸಭೆ ನಡೆಯಲಿದೆ. ಇಲ್ಲಿ ಸಮಸ್ಯೆಗೊಂದು ಪರಿಹಾರ ಸಿಗಬಹುದೆಂದರು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂಸಿಂಗ್‌ ಯಾದವ್‌ ನಿಧನ ದುಃಖಕರ ಸಂಗತಿ. ಹಿಂದುಳಿದ ವರ್ಗದಿಂದ ಬಂದವರು. ಅಂತವರ ಸಾವು ಸಹಜವಾಗಿಯೇ ಆ ರಾಜ್ಯಕ್ಕೆ ನಷ್ಟ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇದ್ದರೂ ಅವರ ಸಾವು ರಾಜಕೀಯಕ್ಕೆ, ಆ ಸಮುದಾಯಕ್ಕೆ ಮತ್ತು ಉತ್ತರ ಪ್ರದೇಶಕ್ಕೆ ನಷ್ಟ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.  
 

Follow Us:
Download App:
  • android
  • ios