ಮನೆ ಚಿಂತೆ ಬಿಟ್ಟು ಖುಷಿಯಾಗಿ ಅಭ್ಯಾಸ ಮಾಡಿ: ವಸತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸಲಹೆ

ಗ್ರಾಮೀಣ ಮಕ್ಕಳ ಅಭ್ಯುದಯಕ್ಕಾಗಿಯೆ ಸರ್ಕಾರ ಬದ್ಧತೆ ಪ್ರದರ್ಶಿಸಿ ಓದುವ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳೆ ಮನೆ ಚಿಂತೆ ಬಿಟ್ಟು ಖುಷಿಯಾಗಿ ಅಭ್ಯಾಸ ಮಾಡಿ, ಶೈಕ್ಷಣಿಕ ಉನ್ನತಿ ಸಾಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಸಲಹೆ ಮಾಡಿದರು.

Focus on studies  Education Minister Sudhakars advice to residential school students at chitradurga rav

ಹಿರಿಯೂರು (ಜೂ.11) : ಗ್ರಾಮೀಣ ಮಕ್ಕಳ ಅಭ್ಯುದಯಕ್ಕಾಗಿಯೆ ಸರ್ಕಾರ ಬದ್ಧತೆ ಪ್ರದರ್ಶಿಸಿ ಓದುವ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳೆ ಮನೆ ಚಿಂತೆ ಬಿಟ್ಟು ಖುಷಿಯಾಗಿ ಅಭ್ಯಾಸ ಮಾಡಿ, ಶೈಕ್ಷಣಿಕ ಉನ್ನತಿ ಸಾಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಸಲಹೆ ಮಾಡಿದರು.

ಶನಿವಾರ ತಾಲೂಕಿನ ಯಲ್ಲದಕೆರೆ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಸರ್ಕಾರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿಯೇ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳಿಂದ ಸರ್ಕಾರ ಮತ್ತು ಪೋಷಕರು ಉತ್ತಮ ಫಲಿತಾಂಶದ ನಿರೀಕ್ಷೆ ಮಾಡುತ್ತಾರೆ. ಹುಸಿ ಮಾಡದಂತೆ ನಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

 

ಉನ್ನತ ಶಿಕ್ಷಣಕ್ಕೆ ಹೊಸ ರೂಪ, ಉದ್ಯೋಗಾಧಾರಿತ ಪಠ್ಯಕ್ರಮ ಅಳವಡಿಕೆ: ಸಚಿವ ಸುಧಾಕರ್‌

ಎಸ್‌ಎಸ್‌ಎಲ…ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಈ ಬಾರಿ ರಾಜ್ಯದಲ್ಲಿಯೇ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಬಾರಿಯೂ ಕೂಡ ಉತ್ತಮ ಅಂಕಗಳಿಗೆಯೊಂದಿಗೆ ಮೊದಲ ಸ್ಥಾನ ಕಾಯ್ದುಕೊಳ್ಳಲು ಯತ್ನಿಸಬೇಕು. ಉತ್ತಮ ಅಂಕ ಗಳಿಕೆಯತ್ತ ದೃಷ್ಟಿಯಿಟ್ಟು ಅಭ್ಯಾಸ ಮಾಡಬೇಕು. ಶಿಕ್ಷಣ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿರುವುದರಿಂದ ನಾವು ಆದಷ್ಟುವಿದ್ಯೆಗೆ ಉತ್ತೇಜನ ನೀಡಬೇಕು ಎಂದು ಸುಧಾಕರ್‌ ಹೇಳಿದರು.

ಹೆಚ್ಚು ಮಕ್ಕಳು ವಿದ್ಯಾವಂತರಾಗುವುದೇ ದೇಶದ ಪ್ರಗತಿಯ ಸಂಕೇತವಾಗಿದೆ. ವಿದ್ಯೆ ಮಾತ್ರ ಯಾವುದೇ ಕುಟುಂಬ ಮತ್ತು ಸಮಾಜವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲದು. ಮೊರಾರ್ಜಿ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಶುದ್ಧ ಕುಡಿವ ನೀರಿನ ಘಟಕ, ಗ್ರಂಥಾಲಯ ಕೊಠಡಿ, ಕಾಂಪೌಂಡ್‌ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು. ಸತತವಾಗಿ ಅಭ್ಯಾಸ ಮಾಡಿ ಒಳ್ಳೆ ಫಲಿತಾಂಶ ತರಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರಮಿಸಿ ಎಂದರು.

 

ರಾಯಚೂರು: ವಿರೋ​ಧದ ನಡು​ವೆಯೂ ಇಂದು ನಗ​ರಕ್ಕೆ ಉಸ್ತುವಾರಿ ಸಚಿವ ಪಾಟೀಲರು!

ಶಾಲೆಯ ಮುಖ್ಯ ಶಿಕ್ಷಕ ರಘುನಾಥ್‌, ಮುಖಂಡರಾದ ದಿಂಡಾವರ ಶಿವಣ್ಣ, ಯಲ್ಲದಕೆರೆ ಮಂಜುನಾಥ್‌, ಮಾರುತಪ್ಪ, ಚಿಗಳಿಕಟ್ಟೆಕಾಂತರಾಜ…, ಕಂದಿಕೆರೆ ಜಗದೀಶ್‌, ಪಿಟ್ಲಾಲಿ ರವಿ, ಕಣುಮಯ್ಯ, ಚಂದ್ರಪ್ಪ, ಕುಮಾರಸ್ವಾಮಿ ಮುಂತಾದವರು ಹಾಜರಿದ್ದರು

Latest Videos
Follow Us:
Download App:
  • android
  • ios