ಉಡುಪಿ: ಕೊನೆಗೂ ಕಣ್ತೆರೆದ ಇಲಾಖೆ: ಶಿಕ್ಷಕರಿಲ್ಲದ ಶಾಲೆಗೆ ಖಾಯಂ ಶಿಕ್ಷಕರ ನೇಮಕ
ಬಹುಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು, ಖಾಯಂ ಶಿಕ್ಷಕರಿಲ್ಲದೇ ಬೀಗ ಜಡಿಯುವ ಹಂತಕ್ಕೆ ತಲುಪಿದ್ದ ಗುಲ್ವಾಡಿ ಅನುದಾನಿತ ಶಾಲೆಗೆ ಕೊನೆಗೂ ಶಿಕ್ಷಕರ ನೇಮಕಾತಿ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಉಡುಪಿ (ಜೂ.9) : ಬಹುಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು, ಖಾಯಂ ಶಿಕ್ಷಕರಿಲ್ಲದೇ ಬೀಗ ಜಡಿಯುವ ಹಂತಕ್ಕೆ ತಲುಪಿದ್ದ ಗುಲ್ವಾಡಿ ಅನುದಾನಿತ ಶಾಲೆಗೆ ಕೊನೆಗೂ ಶಿಕ್ಷಕರ ನೇಮಕಾತಿ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೂಡುಮುಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಿನೇಶ್ ಶೆಟ್ಟಿಯವರನ್ನು ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಳಿಸಿದೆ.
ಬುಧವಾರ "78 ಮಕ್ಕಳಿದ್ದರೂ ಒಬ್ಬರೂ ಖಾಯಂ ಶಿಕ್ಷಕರಿಲ್ಲ" ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡಪ್ರಭ ಪತ್ರಿಕೆ ವರದಿ ಮಾಡಿತ್ತು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೈಂದೂರು ವಲಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಮೂಡುಮುಂದ ಅನುದಾನಿತ ಶಾಲೆಯ ಓರ್ವ ಶಿಕ್ಷಕರನ್ನು ಗುಲ್ವಾಡಿ ಅನುದಾನಿತ ಶಾಲೆಗೆ ವರ್ಗಾವಣೆಗೊಳಿಸಲಾಗಿದೆ.
ಶಿಕ್ಷಕರು, ಉಪನ್ಯಾಸಕರ ನೇಮಕಾತಿ ವಯೋಮಿತಿ 2 ವರ್ಷ ಸಡಿಲ, ಯಾರಿಗೆಲ್ಲ ಅನ್ವಯ?
ಹಳೆ ವಿದ್ಯಾರ್ಥಿ ಸಂಘ ಮತ್ತು ಸ್ಥಳೀಯರು ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಇಲಾಖೆಯ ಹಂತದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವು ಪ್ರಕ್ರಿಯೆಗಳು ನಡೆದ ಬಳಿಕ ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಗುಲ್ವಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದ ಬಗ್ಗೆ ವಿಶೇಷ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದ ಕನ್ನಡಪ್ರಭ ಪತ್ರಿಕೆಗೆ ಶಾಲಾಭಿವೃದ್ದಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘ, ಪೋಷಕರು ಧನ್ಯವಾದ ತಿಳಿಸಿದ್ದಾರೆ.
ಸದ್ಯ ಒಬ್ಬ ಶಿಕ್ಷರನ್ನು ನೇಮಿಸಿದ್ದಾರೆ. 78 ವಿದ್ಯಾರ್ಥಿಗಳಿರುವ ಶಾಲೆಗೆ ಕನಿಷ್ಠ ಇಬ್ಬರನ್ನಾದರೂ ನೇಮಿಸಬೇಕು. ಒಬ್ಬರೇ ಖಾಯಂ ಶಿಕ್ಷಕರಿದ್ದರೆ ಶೈಕ್ಷಣಿಕ ಪ್ರಕ್ರಿಯೆಗಳನ್ನು ನಡೆಸುವುದು ಕಷ್ಟಸಾಧ್ಯ. ಇಲಾಖೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತು ನಮ್ಮ ಹೋರಾಟ ನಿರಂತರ ಎಂದು
ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘಸುದೀಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಶಿಕ್ಷಣ ಮಂತ್ರಿಗಳೇ ಇಲ್ನೋಡಿ.! 116 ವರ್ಷದ ಅ.ಹಿ.ಪ್ರಾ. ಶಾಲೆಗೆ ಶಿಕ್ಷಕರೇ ಇಲ್ಲ