ಶಿಕ್ಷಕರು, ಉಪನ್ಯಾಸಕರ ನೇಮಕಾತಿ ವಯೋಮಿತಿ 2 ವರ್ಷ ಸಡಿಲ, ಯಾರಿಗೆಲ್ಲ ಅನ್ವಯ?

ಕೊರೋನಾ ಸಮಯದಲ್ಲಿ ನೇಮಕಾತಿ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಸಿ ಸರ್ಕಾರ ಆದೇಶ ಹೊರಡಿಸಿದೆ.

two year relaxation in recruitment of all categories of  teaching posts  in Karnataka  kannada news gow

ಬೆಂಗಳೂರು (ಜೂ.8): ಕೊರೋನಾ ಸಮಯದಲ್ಲಿ ನೇಮಕಾತಿ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವ್ಯಾಪ್ತಿಗೆ ಬರುವ ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜು ಉಪನ್ಯಾಸಕ ಹುದ್ದೆಗಳಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಡೆಯುವ ನೇರ ನೇಮಕಾತಿಗಳಿಗೆ ಇದು ಅನ್ವಯವಾಗಲಿದೆ. ಕೊರೋನಾದಿಂದ ಎರಡು ವರ್ಷ ನೇಮಕಾತಿ ನಡೆಯದಿದ್ದರಿಂದ ವಯೋಮಿತಿ ಸಡಿಲಿಸಬೇಕು ಎಂದು ಅಭ್ಯರ್ಥಿಗಳು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಗೋಳ್ವಾಳ್ಕರ್‌, ಸಾವರ್ಕರ್‌ ಫೇಕ್‌ ದೇಶಭಕ್ತರು, ಅವರ ಪಾಠ ನಮಗ್ಯಾಕೆ: ಕುಂವೀ!

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ 778 ಉಪನ್ಯಾಸಕ ಹುದ್ದೆಗಳ ನೇಮಕ ಹಾಗೂ ಶಾಲಾ ಶಿಕ್ಷಕರ ನೇಮಕಾತಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸ್ಪಷ್ಟಪಡಿಸಿದೆ.

ಇಲಾಖೆಗಳ ನೇಮಕಾತಿಗೂ 2 ವರ್ಷ ವಯೋಮಿತಿ ಸಡಿಲಿಕೆಗೆ ಒತ್ತಾಯ
ಗದಗ: ರಾಜ್ಯದ 36 ಇಲಾಖೆಗಳಲ್ಲಿ ನೇಮಕವಾಗುವ ಎಸ್‌ಡಿಎ, ಎಫ್‌ಡಿಎ ಹಾಗೂ ಪಿಡಿಒ ಮುಂತಾದ ಹುದ್ದೆಗಳಿಗೂ ಕೂಡ ಎರಡು ವಷÜರ್‍ದ ವಯೋಮಿತಿ ಸಡಿಲಿಕೆ ಮಾಡಲು ವಿಪ ಸದಸ್ಯ ಎಸ್‌.ವಿ. ಸಂಕನೂರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

KARNATAKA TEXTBOOK REVISION: ಶಾಲಾ ಪಠ್ಯದಿಂದ ಬನ್ನಂಜೆ ಆಚಾರ್ಯರ ಕೃತಿಗೆ ಕೋಕ್, ಶಿಷ್ಯನ ಬೇಸರ

ಈ ಕುರಿತು ಪ್ರಕ​ಟಣೆ ನೀಡಿ​ರುವ ಅವ​ರು, ಸರ್ಕಾರ ಈಗಾಗಲೇ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಗಳಲ್ಲಿ ಪೊಲೀಸ್‌ ಸಿಬ್ಬಂದಿ ನೇಮಕ ಆಗುವಾಗ ಹಾಗೂ ಶಿಕ್ಷಕ ಪ್ರಾಧ್ಯಾಪಕರ ನೇಮಕ ಆಗುವಾಗ ಕೋರೋನಾದ ಹಿನ್ನೆಲೆಯಲ್ಲಿ ಎರಡು ವಷÜರ್‍ಗಳ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದುಂಟು. ಅದೇ ರೀತಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಉಪನ್ಯಾಸಕರ ನೇಮಕಾತಿಗೂ ಎರಡು ವರ್ಷ ವಯೋಮಿತಿ ಸಡಿಲಿಕೆ ಮಾಡಿರುವರು.

ಇದೇ ಮಾದರಿಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿಯ ಹುದ್ದೆಗಳಿಗೆ ಎರಡು ವಷÜರ್‍ದ ವಯೋಮಿತಿ ಸಡಿಲಿಕೆ ಮಾಡಬೇಕು. ಇದರಿಂದ ಸಾವಿರಾರು ವಯೋಮಿತಿ ಅಂಚಿನಲ್ಲಿರುವ ನಿರುದ್ಯೋಗಿ ಪದವೀಧರರಿಗೆ ಅನುಕೂಲವಾಗಲಿದೆ. ಸರ್ಕಾರ ಈ ಕುರಿತು ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ ತಾರತಮ್ಯನೀತಿ ಅನುಸರಿಸಿದಂತೆ ಆಗುತ್ತದೆ ಎಂದು ತಿಳಿ​ಸಿ​ದ್ದಾ​ರೆ.

Latest Videos
Follow Us:
Download App:
  • android
  • ios