ಒಳಉಡುಪು ತೆಗೆದರೆ ಮಾತ್ರ ಪರೀಕ್ಷೆಗೆ ಅನುಮತಿ, ಭಾರಿ ವಿವಾದ ಸೃಷ್ಟಿಸಿದ NEET Exam!
ಮೆಡಿಕಲ್ ಪ್ರವೇಶ ಪರೀಕ್ಷೆ NEET ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯರು ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಬ್ರಾ ಹಾಗೂ ಒಳಉಡುಪುಗಳನ್ನು ತೆಗೆಯಲು ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿತ್ತು. ಈ ನಡೆ ವಿರುದ್ಧ ದೂರು ದಾಖಲಾಗಿದೆ.
ಕೊಲ್ಲಂ(ಜು.18): ಮೆಡಿಕಲ್ ಪ್ರವೇಶ ಪರೀಕ್ಷೆ NEET ಬರೆಯಲು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ಆದರೆ ಈ ನಿಯಮ ವಿದ್ಯಾರ್ಥಿನಿಯರಿಗೆ ಮಾನಸಿಕ ಹಿಂಸೆ ಅನುಭವಿಸಿದೆ ಘಟನೆ ವರದಿಯಾಗಿದೆ. ನೀಟ್ ಪರೀಕ್ಷೆ ಕೊಠಡಿ ಪ್ರವೇಶಿಸಲು ಕೊನೆಗೆ ವಿದ್ಯಾರ್ಥಿನಿಯರು ತಮ್ಮ ಬ್ರಾ ಹಾಗೂ ಒಳಉಡುಪುಗಳನ್ನು ಬಿಚ್ಚಿಟ್ಟು ಬರಬೇಕಾದವ ಪರಿಸ್ಥಿತಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಒಳಉಪುಡು ಬಿಚ್ಚಿ ನೀಟ್ ಪರೀಕ್ಷೆ ಬರೆದಿದ್ದಾರೆ. ಸಿಬ್ಬಂದಿಗಳ ನಡೆ ವಿರುದ್ಧ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೋಷಕರು ದೂರು ದಾಖಲಿಸಿದ್ದಾರೆ. ಇತ್ತ ಕೇರಳ ಸರ್ಕಾರ ಘಟನೆ ಕುರಿತು ಪ್ರತಿಕ್ರಿಯೆ ನೀಡಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಮೆಟಲ್ ಸಂಬಂಧಿತ ವಸ್ತುಗಳನ್ನು ಕೊಠಡಿಗೆ ಕೊಂಡೊಯ್ಯುವಂತಿಲ್ಲ. ಇದು ನೀಟ್ ಪರೀಕ್ಷಾ ನಿಯಮ ಉಲ್ಲಂಘನೆಯಾಗಿದೆ. ಆದರೆ ಈ ನಿಯಮದಲ್ಲಿ ಧರಿಸುವ ಬೆಲ್ಟ್, ಹೆಣ್ಣುಮಕ್ಕಳ ಬ್ರಾ ಹಾಗೂ ಇತರ ಒಳಉಡುಪಿನಲ್ಲಿರುವ ಮೆಟಲ್ ವಸ್ತುಗಳ ಕುರಿತು ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಇದನ್ನೇ ತಪ್ಪಾಗಿ ಅರ್ಥೈಸಿದ ತಪಾಸಣಾ ಸಿಬ್ಬಂದಿಗಳು, ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸುವಾಗ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅನಿವಾರ್ಯವಾಗಿ ತಮ್ಮ ಒಳಉಡುಪುಗಳನ್ನು ಬಿಚ್ಚಿಬೇಕಾದ ಪರಿಸ್ಥಿತಿ ಬಂದಿದೆ.
ಜೆಇಇ ಪರೀಕ್ಷೆಯಲ್ಲಿ 300/300 ಅಂಕ ಪಡೆದರೂ ಮತ್ತೆ ಪರೀಕ್ಷೆ ಬರೆಯುತ್ತೇನೆಂದ ಟಾಪರ್ ನವ್ಯಾ!
ಒಳ ಉಡುಪಿನಲ್ಲಿರುವ ಬಟನ್, ಹುಕ್ಸ್ ಸೇರಿದಂತೆ ಇತರ ಮೆಟಲ್ ವಸ್ತುಗಳಿರುವುದರಿಂದ ಮೆಟಲ್ ಡಿಟೆಕ್ಟರ್‌ನಲ್ಲಿ ಶಬ್ದ ಮಾಡಿದೆ. ಇದರಿಂದ ಸಿಬ್ಬಂದಿಗಳು ಸುತಾರಾಂ ವಿದ್ಯಾರ್ಥಿನಿಯರನ್ನು ಪರೀಕ್ಷೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ. ಇದರಿಂದ ಮಜುಗರ ಅನುಭವಿಸಿದ ವಿದ್ಯಾರ್ಥಿನಿಯರು ಕೊನೆಯ ಒಳ ಉಡುಪುಗಳನ್ನು ತೆಗೆದು ಪರೀಕ್ಷೆ ಬರೆದಿದ್ದಾರೆ.
ಅಭ್ಯರ್ಥಿಗಳು ಕಳಚಿದ ಬ್ರಾ ಹಾಗೂ ಇತರ ಒಳಉಡುಪುಗಳನ್ನ ರಾಶಿ ಹಾಕಲಾಗಿತ್ತು. ಪರೀಕ್ಷೆ ಬರೆದ ಬಳಿಕ ತಮ್ಮ ತಮ್ಮ ಒಳ ಉಡುಪ ಪಡೆಯುವುದು ದೊಡ್ಡ ಸಾಹಸವಾಗಿತ್ತು. ಹೀಗಾಗಿ ಬಹುತೇಕ ವಿದ್ಯಾರ್ಥಿನಿಯರು ಒಳಉಡುಪು ಪರೀಕ್ಷಾ ಕೇಂದ್ರದ ಹೊರಭಾಗದಲ್ಲೇ ಬಿಟ್ಟು ಹೋಗಿದ್ದಾರೆ.
ಕೇರಳದ ಮಾರ್ಥೋಮಾ ಶಿಕ್ಷಣ ಸಂಸ್ಥಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪೋಷಕರು ಕೊಟ್ಟಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಕುರಿತು ಪ್ರತಿಕ್ರಿಯಿಸಿದ ಮಾರ್ಥೋಮಾ ಶಿಕ್ಷಣ ಸಂಸ್ಥೆ, ನೀಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ತಪಾಸಣೆಯನ್ನು ಖಾಸಗಿ ಎಜೆನ್ಸಿ ಸಿಬ್ಬಂದಿಗಳು ಮಾಡಿದ್ದಾರೆ. ಇದರಲ್ಲಿ ಶಿಕ್ಷಣ ಸಂಸ್ಥೆಯ ಪಾತ್ರವಿಲ್ಲ. ಇನ್ನು ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ(NTA)ಆಯೋಜಿಸುತ್ತದೆ. ಸಿಬ್ಬಂದಿಗಳು ನಿಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಶಿಕ್ಷಣ ಸಂಸ್ಥೆ ಹೇಳಿದೆ.
ಅಮ್ಮನ ಶವ ಮನೆಯಲ್ಲಿದ್ದರೂ ಪರೀಕ್ಷೆ ಬರೆದ ಯುವತಿ
ಘಟನೆ ಕುರಿತು ಕೇರಳ ಶಿಕ್ಷಣ ಸಚಿವ ಸಿ ರವೀಂದ್ರನಾಥ್ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು NTA ಉತ್ತರ ಕೇಳಿದ್ದೇವೆ. ಸರ್ಕಾರ ತನಿಖೆ ನಡೆಸಿ ನ್ಯಾಯ ಒದಗಿಸಲಿದೆ ಎಂದು ಸಚಿವರು ಹೇಳಿದ್ದಾರೆ. ನೀಟ್ ಪರೀಕ್ಷೆ ವೇಳೆ ಹಲವು ನಿಯಮಗಳನ್ನು ಪಾಲಿಸಲಾಗುತ್ತದೆ. ಇದರಲ್ಲಿ ಮೆಟಲ್ ಕೂಡ ಒಂದು. ಇನ್ನು ಉದ್ದ ತೋಳಿನ ಡ್ರೆಸ್ ಹಾಕುವಂತಿಲ್ಲ. ಶೂ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಸ್ಲಿಪ್ಪರ್, ಸ್ಯಾಂಡಲ್ಸ್ ಹಾಗೂ ಲೋ ಹೀಲ್ಸ್ ಧರಿಸಲು ಅವಕಾಶವಿದೆ.
ಜೂನ್ 17 ರಂದು ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿದೆ. 18,72,329 ವಿದ್ಯಾರ್ಥಿಗಳು ಈ ಬಾರಿ ನೀಟ್ ಪರೀಕ್ಷೆ ಬರೆದಿದ್ದಾರೆ.