ಜೆಇಇ ಪರೀಕ್ಷೆಯಲ್ಲಿ 300/300 ಅಂಕ ಪಡೆದರೂ ಮತ್ತೆ ಪರೀಕ್ಷೆ ಬರೆಯುತ್ತೇನೆಂದ ಟಾಪರ್ ನವ್ಯಾ!

ಜೆಇಇ ಪರೀಕ್ಷೆಯಲ್ಲಿ ಟಾಪರ್‌ ಆದರೂ ಮತ್ತೆ ಪರೀಕ್ಷೆ ಬರೆಯಲು ಸಜ್ಜಾದ ನವ್ಯಾ. ಇದರ ಹಿಂದಿನ ಕಾರಣವೂ ಅಷ್ಟೇ ಕುತೂಹಲಕಾರಿ

Despite scoring 300 JEE Main Topper Wants to Retake Exam, Says It Is Good Practice pod

ಜೈಪುರ(ಜು.16): ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಬಹಳ ಸಂತೋಷಗೊಳ್ಳುತ್ತಾರೆ. ಹೀಗಿರುವಾಗ ಜೆಇಇ ಟಾಪರ್‌ ಆದ ರಾಜಸ್ಥಾನದ ನವ್ಯಾ ಹಿಸಾರಿಯಾ ವಿಭಿನ್ನ ಯೋಜನೆಯನ್ನು ಹೊಂದಿದ್ದಾರೆ. ಜೆಇಇ ಮೇನ್ ಸೀಸನ್ 1ರಲ್ಲಿ 300  ರಲ್ಲಿ 300 ಅಂಕ ಗಳಿಸಿದ್ದ ಹಿಸಾರಿಯಾ ಮತ್ತೊಮ್ಮೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ.

ಹಿಸಾರಿಯಾ ಪ್ರಕಾರ, ಅವರು ಪರೀಕ್ಷೆಯಲ್ಲಿ ಒಟ್ಟು 300 ರಲ್ಲಿ 300 ಅಂಕಗಳನ್ನು ಪಡೆದಿದ್ದಾರೆ. ಇದಾದ ನಂತರವೂ ಅವರು ಮತ್ತೆ ಅಭ್ಯಾಸ ಮಾಡಲು ಜೆಇಇ ಪ್ರವೇಶ ಪರೀಕ್ಷೆಯನ್ನು ಬರೆಯುವುದಾಗಿ ಹೇಳಿದ್ದಾರೆ. ಇದರಿಂದ ಸಮಯ ನಿರ್ವಹಣೆ ಸುಧಾರಿಸುತ್ತದೆ ಎನ್ನುವುದು ನವ್ಯಾ ಮಾತಾಗಿದೆ.

ನ್ಯೂಸ್ 18 ಪ್ರಕಾರ, ಜೆಇಇಯಿಂದ ತನಗೆ ಸಮಯ ನಿರ್ವಹಣೆ ಉಉತ್ತಮವಾಗಿ ಮಾಡಲು ತಿಳಿಯಿತು ಎಂದು ಟಾಪರ್ ಹೇಳಿದ್ದಾರೆ. ಮತ್ತೆ ಪರೀಕ್ಷೆ ನಿಡುವುದರಿಂದ ತಯಾರಿ ಎಷ್ಟು ಎಂದು ನಮಗೇ ತಿಳಿಯುತ್ತದೆ. ಇದರಿಂದ ಅಭ್ಯಾಸವೂ ಆಗುತ್ತದೆ. ಅಂದಹಾಗೆ, ಎರಡನೇ ಪ್ರಯತ್ನದಲ್ಲಿ ನವ್ಯಾಗೆ ಫುಲ್ ಮಾರ್ಕ್ಸ್ ಬರದಿದ್ದರೂ ಅವರಿಗೇನೂ ನಷ್ಟವಿಲ್ಲ. ಅವರ ಎರಡೂ ಪರೀಕ್ಷೆಗಳಲ್ಲಿ ಎರಡರಲ್ಲಿ ಉತ್ತಮವಾದ ಆಧಾರದ ಮೇಲೆ ಅಂಕಗಳನ್ನು ನಿರ್ಧರಿಸಲಾಗುತ್ತದೆ.

ನವ್ಯಾ ಹಿಸಾರಿಯಾ ಅವರ ತಂದೆ ರಾಕೇಶ್ ಚಂದ್ರ ಹಿಸಾರಿಯಾ ಉದ್ಯಮಿ ಮತ್ತು ತಾಯಿ ಪೂನಂ ಹಿಸಾರಿಯಾ ಗೃಹಿಣಿ. ನವ್ಯಾ 10ನೇ ತರಗತಿಯಲ್ಲಿ ಶೇ 97.40 ಅಂಕ ಪಡೆದಿದ್ದಳು. ಅಲ್ಲದೆ ಕಿಶೋರ್ ವೈಜ್ಞಾನಿಕ ಪ್ರೋತ್ಸಾಹ ಯೋಜನೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 13ನೇ ರ್ಯಾಂಕ್ ಪಡೆದಿದ್ದಾರೆ. ಇದಲ್ಲದೆ ರಾಷ್ಟ್ರೀಯ ಮಟ್ಟದ ಭೌತಶಾಸ್ತ್ರ ಒಲಿಂಪಿಯಾಡ್‌ಗೂ ಅರ್ಹತೆ ಪಡೆದಿದ್ದಾರೆ.

NEET UG 2022 ಹಾಲ್‌ ಟಿಕೆಟ್‌ neet.nta.nic.in ನಲ್ಲಿ ರಿಲೀಸ್‌, ಹೀಗೆ ಡೌನ್‌ಲೋಡ್ ಮಾಡಿ

 

ವೈದ್ಯಕೀಯ ಕಾಲೇಜು ದಾಖಲಾತಿಗಾಗಿ ಪ್ರವೇಶ ಪರೀಕ್ಷೆಯಾದ NEET UG 2022 ಹಾಲ್‌ ಟಿಕೆಟ್‌ ನೀಡಲಾಗಿದೆ. ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) neet.nta.nic.in ಮತ್ತು nta.ac.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಪ್ರವೇಶ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಪ್ರವೇಶ ಕಾರ್ಡ್ ಡೌನ್‌ಲೋಡ್ ಲಿಂಕ್‌ಗಳು ವೆಬ್‌ಸೈಟ್‌ನ ಮುಖಪುಟದಲ್ಲಿ ಲೈವ್ ಆಗಿವೆ. ಇದಕ್ಕಾಗಿ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಅಗತ್ಯವಿದೆ. ಜುಲೈ 17 ರಂದು ಪೆನ್-ಪೇಪರ್ ವಿಧಾನದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂಬುವುದು ಉಲ್ಲೇಖನೀಯ. ದೇಶದ 497 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ವರ್ಷ 18 ಲಕ್ಷದ 72 ಸಾವಿರದ 341 ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬುಡಕಟ್ಟು ವಿದ್ಯಾರ್ಥಿಗಳಿಗೆ ಉಚಿತ NEET, JEE ತರಬೇತಿ

NEET UG 2022 ಹಾಲ್‌ ಟಿಕೆಟ್‌ ಡೌನ್‌ಲೋಡ್ ಮಾಡುವುದು ಹೇಗೆ?

* ಮೊದಲು ಅಧಿಕೃತ ವೆಬ್‌ಸೈಟ್ neet.nta.nic.in ಗೆ ಹೋಗಿ
* ಮುಖಪುಟದಲ್ಲಿ NEET ಪ್ರವೇಶ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ
* ಇದರ ನಂತರ ಹೊಸ ಪುಟ ತೆರೆಯುತ್ತದೆ, ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ
* ಪ್ರವೇಶ ಕಾರ್ಡ್ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ
* ಈ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ

Latest Videos
Follow Us:
Download App:
  • android
  • ios