NEET Examination: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ತಂದೆ ಹಿಗ್ಗಾಮುಗ್ಗಾ ಕೋಲಿನಲ್ಲಿ ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ(Maharashtra’s Sangli) ಜಿಲ್ಲೆಯಲ್ಲಿ ನಡೆದಿದೆ.

ಮುಂಬೈ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ತಂದೆ ಹಿಗ್ಗಾಮುಗ್ಗಾ ಕೋಲಿನಲ್ಲಿ ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ(Maharashtra’s Sangli) ಜಿಲ್ಲೆಯಲ್ಲಿ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ(12th-grade student) ನೀಟ್ ಪರೀಕ್ಷೆ ಬರೆದಿದ್ದು, ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಆಕೆಗೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ತಂದೆ ಆಕೆಗೆ ಕೋಲಿನಿಂದ ಸರಿಯಾಗಿ ಬಾರಿಸಿದ್ದಾರೆ.

ಕಳೆದ ಶನಿವಾರ ವಿಶ್ವ ಯೋಗ ದಿನದಂದು ಈ ಘಟನೆ ನಡೆದಿದೆ. ಈ ವಿದ್ಯಾರ್ಥಿನಿಯ ತಂದೆ ಧೊಂಡಿರಾಮ್ ಭೊಸಲೆ (Dhondiram Bhosale) ಶಾಲಾ ಪ್ರಾಂಶುಪಾಲರಾಗಿದ್ದು, ನೀಟ್‌ ಪರೀಕ್ಷೆಯಲ್ಲಿ(NEET examination) ಮಗಳ ಕಳಪೆ ಅಂಕಗಳನ್ನು ನೋಡಿ ಕುಪಿತಗೊಂಡಿದ್ದರು. ಹೀಗಾಗಿ ಸಿಟ್ಟಿನಲ್ಲಿದ್ದ ಅವರು ಕರುಣೆ ಇಲ್ಲದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದಾದ ನಂತರ ತಂದೆ ಶಾಲೆಯಲ್ಲಿ ವಿಶ್ವ ಯೋಗ ದಿನದಂದು (International Yoga Day) ಶಾಲೆಯಲ್ಲಿ ಯೋಗ ಕಾರ್ಯಕ್ರಮ ಆಯೋಜನೆಯಾಗಿದ್ದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಅವರು ಸೀದಾ ಶಾಲೆಗೆ ಹೋಗಿದ್ದಾರೆ.

ಇತ್ತ ಅಪ್ಪನ ಹೊಡೆತದಿಂದ ಮಗಳು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಶಾಲೆಯಿಂದ ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ವೇಳೆ ಅಪ್ಪನಿಗೆ ಈ ವಿಚಾರ ತಿಳಿದಿದ್ದು, ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು (Doctor) ಘೋಷಿಸಿದ್ದಾರೆ. ಘಟನೆಯ ಬಳಿಕ ವಿದ್ಯಾರ್ಥಿನಿಯ ತಂದೆ ಧೊಂಡಿರಾಮ್ ಭೋಸಲೆ ಅವರನ್ನು ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ.

ಒಟ್ಟಿನಲ್ಲಿ ಮಾರ್ಕ್‌ಗಾಗಿ ಮಗಳಿಗೆ ಹೊಡೆದ ಅಪ್ಪ ಈಗ ಮಗಳನ್ನು ಕಳೆದುಕೊಂಡು ರೋಧಿಸುವಂತಾಗಿದೆ. ಮಕ್ಕಳ ಅಂಕಗಳು ಭವಿಷ್ಯವನ್ನು ನಿರ್ಧರಿಸುವುದು ನಿಜವೇ ಆದರೂ ಅದೇ ಜೀವನ ಅಲ್ಲ, ಹೀಗಾಗಿ ಪೋಷಕರು ದುಡುಕುವ ಮುನ್ನ ಸ್ವಲ್ಪ ಯೋಚಿಸುವುದೊಳಿತು. ಇಲ್ಲದೇ ಹೋದರೆ ಕಷ್ಟಪಟ್ಟು ಸಾಕಿದ ಮಕ್ಕಳನ್ನು ಕಣ್ಣಮುಂದೆಯೇ ಕಳೆದುಕೊಂಡು ಜೀವನ ಪರ್ಯಂತ ಕೊರಗುವ ಸ್ಥಿತಿ ನಿರ್ಮಾಣವಾಗುತ್ತದೆ.

ಮಹಿಳಾ ಪೈಲಟ್‌ಗೆ (woman airline pilot)ಲೈಂಗಿಕ ಕಿರುಕುಳ:

28 ವರ್ಷದ ಮಹಿಳಾ ಪೈಲಟ್‌ಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಬರ್ ಕ್ಯಾಬ್ ಚಾಲಕ ಹಾಗೂ ಮತ್ತಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈನಲ್ಲಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಾತ್ರಿ 11.15ರ ಸುಮಾರಿಗೆ ಈ ಘಟನೆ ನಡೆದಿದೆ. ತನ್ನ ಕರ್ತವ್ಯ ಮುಗಿಸಿ ಮರಳಿ ಮನೆಯತ್ತ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳಾ ಪೈಲಟ್ ದಕ್ಷಿಣ ದೆಹಲಿಯ ಘಾಟ್‌ಕೊಪರ್‌ನಲ್ಲಿ ವಾಸ ಮಾಡುತ್ತಿದ್ದರು ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮಹಿಳೆ ಪತಿ ನೇವಿ ಅಧಿಕಾರಿಯಾಗಿದ್ದು, ಅವರಿಗೆ ಇನ್ನಷ್ಟೇ ಸರ್ಕಾರಿ ವಸತಿ ಸೌಲಭ್ಯ ಸಿಗಬೇಕಿತ್ತು. ಹೀಗಾಗಿ ಅವರ ಪತಿ ನೇವಿ ವಸತಿ ಸಂಕೀರ್ಣದಲ್ಲಿ ವಾಸ ಮಾಡುತ್ತಿದ್ದರೆ ಇವರು ದಕ್ಷಿಣ ಮುಂಬೈನ ಘಾಟ್‌ಕೊಪರ್‌ನಲ್ಲಿ ವಾಸ ಮಾಡುತ್ತಿದ್ದರು. ಗುರುವಾರ ರಾತ್ರಿ ದಕ್ಷಿಣ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ರಾತ್ರಿ ಊಟ ಮುಗಿಸಿದ ಅವರು ಪತಿ ಉಬರ್ ಕ್ಯಾಬ್ ಬುಕ್ ಮಾಡಿದ ನಂತರ ಅದರಲ್ಲಿ ತಮ್ಮ ಮನೆಗೆ ಸಂಚರಿಸುತ್ತಿದ್ದರು. ಈ ವೇಳೆ ಘಟನೆ ನಡೆದಿದೆ.

ದಾರಿ ಮಧ್ಯೆ ಮಾರ್ಗ ಬದಲಿಸಿದ ಕ್ಯಾಬ್ ಚಾಲಕ

ಮಹಿಳೆ ನೀಡಿದ ದೂರಿನ ಪ್ರಕಾರ ಕ್ಯಾಬ್ ಚಾಲಕ 25 ನಿಮಿಷ್ ನಂತರ ಮಾರ್ಗ ಬದಲಿಸಿದ್ದು, ದಾರಿಯಲ್ಲಿ ಮತ್ತಿಬ್ಬರನ್ನು ಕ್ಯಾಬ್‌ಗೆ ಹತ್ತಿಸಿಕೊಂಡಿದ್ದಾರೆ. ಈ ಇಬ್ಬರು ಕ್ಯಾಬ್‌ನ ಹಿಂಬದಿ ಸೀಟಿನಲ್ಲಿ ಮಹಿಳೆಯ ಪಕ್ಕದಲ್ಲೇ ಕುಳಿತಿದ್ದು, ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.