Asianet Suvarna News Asianet Suvarna News

Fashion Designer: ಫ್ಯಾಶನ್ ಡಿಸೈನ್ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗವಕಾಶಗಳು

*ಫ್ಯಾಶನ್ ಲೋಕದಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ, ವೃತ್ತಿಪರರಿಗೆ ಆದ್ಯತೆ
*ಅಗತ್ಯ ಶಿಕ್ಷಣವನ್ನು ಪಡೆದುಕೊಂಡು ಈ ಕ್ಷೇತ್ರದಲ್ಲಿ ಗುರಿ ಸಾಧಿಸಬಹುದು
*ಫ್ಯಾಶನ ಡಿಸೈನರ್ ಕೋರ್ಸ್ ಮಾಡಿದವರಿಗೆ ನಾನಾ ರೀತಿಯ ಉದ್ಯೋಗಗಳು

Fashion World has lot of job opportunities for fashion designers
Author
Bengaluru, First Published Apr 7, 2022, 1:04 PM IST

ನಿಮಗೆ ಫ್ಯಾಷನಿಸ್ಟ್ ಆಗಿ ಕಾಣಿಸಿಕೊಳ್ಳೋದು ಅಂದ್ರೆ ಇಷ್ಟನಾ? ವೆರೈಟಿ ವೆರೈಟಿ ಡ್ರೆಸ್ ಧರಿಸೋದು, ಅದಕ್ಕೆ ತಕ್ಕಂತೆ ಜ್ಯುವೆಲರೀಸ್, ಆಕ್ಸೆಸರೀಸ್, ಸ್ಲಿಪ್ಪರ್ಸ್ ಮ್ಯಾಚ್ ಮಾಡಿಕೊಳ್ಳುವುದು. ಕಾಲಕ್ಕೆ ತಕ್ಕಂತೆ ಟ್ರೆಂಡಿಯಾಗಿ ಕಾಣಿಸೋದು ಅಂದ್ರೆ ಇಷ್ಟನಾ? ಜೊತೆಗೆ ಅದೇ ಫ್ಯಾಷನ್ ಲೋಕವನ್ನು ಪ್ರೊಫೆಷನಲ್ ಮಾಡಿಕೊಳ್ಳುವ ಕನಸು ‌ನಿಮಗಿದ್ಯಾ?. ವಿಭಿನ್ನ ಶೈಲಿಗಳ ಪ್ರಯೋಗವನ್ನು  ಆನಂದಿಸುವ ಫ್ಯಾಷನಿಸ್ಟ್ ಆಗಿದ್ದರೆ, ಫ್ಯಾಷನ್ ವಿನ್ಯಾಸ (Fashion Design)ವನ್ನು ಕಲಿತುಕೊಳ್ಳುವುದು ಬಹಳ ಸುಲಭ.

ನಿಮ್ಮ ನೆಚ್ಚಿನ ವಿಷಯವನ್ನ ಕಲಿಯಲು, ವೃತ್ತಿಪರರಾಗಲು ಸಾಕಷ್ಟು ಕೋರ್ಸ್‌ಗಳಿವೆ. ಫ್ಯಾಷನ್ ವಿನ್ಯಾಸವು ವೈಯಕ್ತಿಕ ಶೈಲಿಗಳು, ಮನಸ್ಥಿತಿಗಳು ಮತ್ತು ಸೌಂದರ್ಯವನ್ನು ಅವಲಂಬಿಸಿದೆ. ಈ ಕ್ಷೇತ್ರದಲ್ಲಿನ ವೃತ್ತಿಜೀವನ (Profession life), ಗ್ಲಾಮರ್ ಪ್ರಪಂಚ (Glamour World)ವು ಹೇಗೆ ಕಾರ್ಯನಿರ್ವಹಿಸುತ್ತದೆ. ಈ ವಲಯದಲ್ಲಿ ಕೆಲಸ ಮಾಡಲು ಅಗತ್ಯವಾದ ವೃತ್ತಿಪರ ಗುಣಗಳ ಬಗ್ಗೆ ನಾವು ತಿಳಿಸಿಕೊಡುತ್ತೇವೆ.

ಫ್ಯಾಷನ್ ವಿನ್ಯಾಸವನ್ನು ಅಧ್ಯಯನ ಮಾಡಿದ ನಂತರ, ನೀವು ಪುರುಷರ ಅಥವಾ ಮಹಿಳೆಯರ ಉಡುಗೆಗಾಗಿ ಡಿಸೈನರ್, ಸ್ಟೈಲಿಸ್ಟ್, ಇಲ್ಲಸ್ಟ್ರೇಟರ್, ಆಂತರಿಕ ತಜ್ಞರು, ಶಿಕ್ಷಕ ಅಥವಾ ಪತ್ರಕರ್ತರಂತಹ ವಿವಿಧ ಪಾತ್ರಗಳಲ್ಲಿ ಕೆಲಸ ಮಾಡಬಹುದು. ಫ್ಯಾಷನ್ ಅನ್ನೇ ಬದುಕಾಗಿಸಿಕೊಳ್ಳಲು ಬಯಸುವವರಿಗೆ, ಈ ಬಗ್ಗೆ ಹೆಚ್ಚು ಒಲವು ಇರುವವರಿಗೆ  ಫ್ಯಾಷನ್ ವಿನ್ಯಾಸ ಅಧ್ಯಯನ ಮಾಡಲು ಸಾಕಷ್ಟು ಕೋರ್ಸ್ ಗಳು ನೆರವಾಗಲಿವೆ. 

Manipuri School Girl: 10 ವರ್ಷದ ವಿದ್ಯಾರ್ಥಿನಿ ಕಂಕುಳಲ್ಲಿ 2 ವರ್ಷದ ತಂಗಿ!

ಫ್ಯಾಶನ್ ಡಿಸೈನ್/ಲೆದರ್ ಡಿಸೈನ್/ಆಕ್ಸೆಸರಿ ಡಿಸೈನ್/ಟೆಕ್ಸ್‌ಟೈಲ್ ಡಿಸೈನ್/ನಿಟ್‌ವೇರ್ ಡಿಸೈನ್/ಫ್ಯಾಶನ್ ಕಮ್ಯುನಿಕೇಷನ್‌ನಲ್ಲಿ ಬ್ಯಾಚುಲರ್ ಆಫ್ ಡಿಸೈನ್ (ಬಿಡಿಎಸ್)- ಹೀಗೆ ಪಿಯುಸಿ ಹಾಗೂ ಪದವಿ ಪೂರೈಸಿದ ನಂತರ ವಿಭಿನ್ನವಾದ ಕೋರ್ಸ್ ಗಳನ್ನು ಮಾಡಬಹುದು.  ಆ ಮೂಲಕ ನಿಮ್ಮ ನೆಚ್ಚಿನ ವೃತ್ತಿಯಲ್ಲಿ ಮುಂದುವರಿಯಬಹುದಾಗಿದೆ.

ಫ್ಯಾಷನ್ ಡಿಸೈನರ್ (Fashion Designer) ಆಗಿ ತಮ್ಮ ಸ್ವಂತ ಲೇಬಲ್ ಅನ್ನು ಪ್ರಾರಂಭಿಸಬಹುದು. ಅಥವಾ ಬಟ್ಟೆಗಳನ್ನು ವಿನ್ಯಾಸಗೊಳಿಸುವ ಕಂಪನಿಯಲ್ಲಿ ಕೆಲಸ ಮಾಡಬಹುದು. ಹಾಗೆಯೇ ಫ್ಯಾಷನ್ ಸಲಹೆಗಾರರು ಅಥವಾ ವೈಯಕ್ತಿಕ ಸ್ಟೈಲಿಸ್ಟ್‌ಗಳಾಗಿ ಕೆಲಸ ಮಾಡಲು ಬಯಸುವ ಜನರು ಹೆಚ್ಚಾಗಿ ಸ್ವಯಂ ಉದ್ಯೋಗಿಗಳಾಗಿರುತ್ತಾರೆ. ಫ್ಯಾಷನ್ ಸಲಹೆಗಾರ/ವೈಯಕ್ತಿಕ ಸ್ಟೈಲಿಸ್ಟ್‌ನ ಶ್ರೇಷ್ಠ ಕೆಲಸವೆಂದರೆ ಜನರು ತಮ್ಮ ಸಾರ್ವಜನಿಕ ಇಮೇಜ್ ಅನ್ನು ಉತ್ತೇಜಿಸುವ ವಾರ್ಡ್‌ರೋಬ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುವುದು.

ಫ್ಯಾಶನ್ ಡಿಸೈನರ್ (Fashion Designer)  ಕೋರ್ಸು ಮುಗಿಸಿದವರು ತಾಂತ್ರಿಕ ವಿನ್ಯಾಸಕಾರರಾಗಿಯೂ ಕೆಲಸ ಮಾಡಬಹುದು. ಉಡುಪನ್ನು ಹೇಗೆ ಹೊಲಿಯಬೇಕು, ಹೇಗೆ ರೆಡಿ ಮಾಡಬೇಕು ಅಂತ ನಿರ್ಧರಿಸುವ ಜವಾಬ್ದಾರಿ ತಾಂತ್ರಿಕ ವಿನ್ಯಾಸಕನದ್ದು.  ಹೊಲಿಗೆ ವಿವರಗಳು, ಅಳತೆಯ ಅಂಶಗಳು, ವಾಶ್ ವಿವರಣೆ, ಲೇಬಲ್/ಹ್ಯಾಂಗ್ ಟ್ಯಾಗ್ ಪ್ಲೇಸ್‌ಮೆಂಟ್ ಮತ್ತು ಪ್ಯಾಕೇಜಿಂಗ್ ಸೂಚನೆಗಳು ಸಾಮಾನ್ಯವಾಗಿ ಈ ವೃತ್ತಿಪರರಿಗೆ ಅಗತ್ಯವಿರುತ್ತದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಗಳಿಗೆ ಅವಕಾಶವಿದೆ ಎಂಬುದನ್ನು ಮರೆಯಬಾರದು. ಆದರೆ, ಆಸಕ್ತಿಯುಳ್ಳವರಿಗೆ ಮಾತ್ರವೇ ಈ ಕ್ಷೇತ್ರ ಹೆಚ್ಚು ಅವಕಾಶಗಳನ್ನು ಸೃಷ್ಟಿಸಿಕೊಡುತ್ತದೆ ಕೂಡ.

Aditi Tiwari Facebook Job: ಫೇಸ್‌ಬುಕ್‌ನಿಂದ ಪಾಟ್ನಾ ವಿದ್ಯಾರ್ಥಿನಿಗೆ ₹1.6 ಕೋ ಆಫರ್

ಗಾರ್ಮೆಂಟ್ (Garment) ಉಡುಪುಗಳ ಗುಣಮಟ್ಟದ ಮಾನದಂಡಗಳನ್ನು ನಿರ್ಧರಿಸುವುದು ಗಾರ್ಮೆಂಟ್ ಗುಣಮಟ್ಟ ನಿಯಂತ್ರಕರ ಕೆಲಸವಾಗಿದೆ. ಉಡುಪು (Cloths) ಗಳ ಉತ್ಪಾದನೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಇಲಾಖೆಗೆ ಸೂಚನೆ ನೀಡುತ್ತಾರೆ. ಅವರು ಉತ್ಪಾದನಾ ಪ್ರಕ್ರಿಯೆಯ ಉದ್ದಕ್ಕೂ ಉತ್ಪನ್ನದ ಗುಣಮಟ್ಟವನ್ನು ಖಚಿತಪಡಿಸುತ್ತಾರೆ. ತಮ್ಮ ಗ್ರಾಹಕರ ಹಿಂದಿನ ಖರೀದಿ ಮಾದರಿಗಳನ್ನು ವಿಶ್ಲೇಷಿಸುವ ಮೂಲಕ ಬ್ರ್ಯಾಂಡ್‌ಗೆ ಯಾವ ಸರಕುಗಳನ್ನು ಸ್ಟಾಕ್ ಮಾಡಬೇಕೆಂದು ಫ್ಯಾಷನ್ ಮರ್ಚಂಡೈಸರ್ ನಿರ್ಧರಿಸುತ್ತಾರೆ. ಆದಾಯ-ಉತ್ಪಾದಿಸುವ ಉತ್ಪನ್ನಗಳ ಬಿಡುಗಡೆಯನ್ನು ಯೋಜಿಸಲು ಅವರು ಆಗಾಗ್ಗೆ ಮ್ಯಾನೇಜ್ ಮೆಂಟ್ ಜೊತೆ ಸಹಕರಿಸುತ್ತಾರೆ. ಫ್ಯಾಶನ್ ಡಿಸೈನರ್ ಎಂಬುದು ತುಂಬ ಸೃಜನಾತ್ಮಕವಾಗಿರುವಂಥ ಉದ್ಯೋಗ.  ಹಾಗಾಗಿ, ನಿಮ್ಮ ಆಸಕ್ತಿಯೇ ಈ ಕ್ಷೇತ್ರದಲ್ಲಿ ಎತ್ತರಕ್ಕೆ ಕೊಂಡೊಯ್ಯಬಲ್ಲದು.

Follow Us:
Download App:
  • android
  • ios