Shivamogga ಮಹಿಳಾ ಪಾಲಿಟೆಕ್ನಿಕ್ ಪ್ರಥಮ ಸೆಮಿಸ್ಟರ್ ಡಿಪ್ಲೊಮಾಕ್ಕೆ ನೇರ ಪ್ರವೇಶ
2022-23 ನೇ ಸಾಲಿನ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್, ಶಿವಮೊಗ್ಗ ಸಂಸ್ಥೆಯಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಸೀಟುಗಳನ್ನು ಭರ್ತಿ ಮಾಡಲು ಮೇ 12 ರಿಂದ ಜೂನ್ 11 ರವರೆಗೆ ನೇರವಾಗಿ ಪ್ರವೇಶ ನೀಡಲಾಗುತ್ತಿದೆ.
ಶಿವಮೊಗ್ಗ (ಮೇ.12): 2022-23 ನೇ ಸಾಲಿನ ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ (Government Residential Polytechnic For Women), ಶಿವಮೊಗ್ಗ (Shivamogga) ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಸೀಟುಗಳನ್ನು ಪ್ರಾಂಶುಪಾಲರ ಹಂತದಲ್ಲಿಯೇ (ಸ್ಪಾಟ್ ಅಡ್ಮಿಷನ್) ಭರ್ತಿ ಮಾಡಲು ಮೇ 12 ರಿಂದ ಜೂನ್ 11 ರವರೆಗೆ ನೇರವಾಗಿ ಪ್ರವೇಶ ನೀಡಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಕೋರ್ಸುಗಳ ವಿವರ ಈ ಕೆಳಗಿನಂತಿದೆ.
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್: 63 ಸೀಟುಗಳು
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್: 63 ಸೀಟುಗಳು
ಕಮರ್ಷಿಯಲ್ಟ್ರಾ ಕ್ವೀಸ್ (ಕನ್ನಡ): 32 ಸೀಟುಗಳು
ಕಮರ್ಷಿಯಲ್ಟ್ರಾ ಕ್ವೀಸ್ (ಆಂಗ್ಲ): 32 ಸೀಟುಗಳು
ಆಪರಲ್ ಡಿಸೈನ್ & ಫ್ಯಾಬ್ರಿಕೇಷನ್ ಟೆಕ್ನಾಲಜಿ:63 ಸೀಟುಗಳು
ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು
ಕೋರ್ಸ್ ಗೆ ಸೇರಲು ಇಚ್ಚಿಸುವ ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಶೇ.35 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪ್ರವೇಶ ವೇಳೆ ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ಎನ್‍ಓಸಿ, 05 ವರ್ಷದ ವ್ಯಾಸಂಗ ಪ್ರಮಾಣ ಪತ್ರ ಕ್ಷೇತ್ರ ಶಿಕ್ಷಣಾಧಿಕಾರಿಗಳವರ ದೃಢೀಕರಿಸಿದ ಸಹಿಯೊಂದಿಗೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, 04 ಭಾವಚಿತ್ರ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರವಿನಾಯ್ಕ.ಡಿ, ಪ್ರಾಂಶುಪಾಲರು, ಮೊ.ಸಂ: 9886610245, ರುದ್ರೇಶ್.ಡಿ.ಎನ್ ಪ್ರವೇಶ ಸಂಪರ್ಕಾಧಿಕಾರಿಗಳು ಮೊ.ಸಂ: 9686396494, 7975155925, 08182-295365 ನ್ನು ಸಂಪರ್ಕಿಸಬಹುದೆಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Bijapur Sainik School ಹೆಣ್ಮಕ್ಕಳಿಗೂ ಪ್ರವೇಶ ಅವಕಾಶ
Karnataka SSLC Result 2022 ಮೇ.19 ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಧ್ಯತೆ: ಮೇ 15ರ ವೇಳೆಗೆ ನಿರೀಕ್ಷಿಸಿದ್ದ ಎಸ್ಸೆಸ್ಸೆಲ್ಸಿ (SSLC) ಫಲಿತಾಂಶ ಮೌಲ್ಯಮಾಪನದಲ್ಲಿ ಸಣ್ಣಪುಟ್ಟದೋಷ ಸರಿಪಡಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ ಮೂರ್ನಾಲ್ಕು ದಿನ ತಡವಾಗಲಿದ್ದು, ಮೇ 19ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಪರಿಕ್ಷಾ ಫಲಿತಾಂಶವನ್ನು, ದಿನಾಂಕ ಸಮಯ ಎಲ್ಲಾ ಮಾಹಿತಿಯನ್ನು (Karnataka SSLC Result date time) https://sslc.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ ಚೆಕ್ ಮಾಡಬಹುದು.
ಮೌಲ್ಯಮಾಪನ ಕಾರ್ಯ ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಂಡಿದೆ. ಬಳಿಕ ಮೌಲ್ಯಮಾಪನದಲ್ಲಿ ಸಣ್ಣ ಪುಟ್ಟ ದೋಷಗಳು, ಕಣ್ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಇದಾದ ನಂತರ ಅಂಕಗಳ ದಾಖಲೀಕರಣ ಸೇರಿದಂತೆ ಫಲಿತಾಂಶ (Result) ಪ್ರಕಟಿಸಲು ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಇನ್ನೂ ಒಂದು ವಾರ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ ಮೇ 19ರ ಹೊತ್ತಿಗೆ ಫಲಿತಾಂಶ ನೀಡಲು ಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Uttara Kannada Anganwadi Recruitment 2022: ಒಟ್ಟು 76 ಹುದ್ದೆಗಳಿಗೆ ನೇಮಕಾತಿ
ಫಲಿತಾಂಶ ಪ್ರಕಟಿಸುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರೊಂದಿಗೆ ಚರ್ಚಿಸಿ ದಿನಾಂಕ ಪ್ರಕಟಿಸಲು ಮಂಡಳಿ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಕಳೆದ ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ SSLC ಪರೀಕ್ಷೆ ನಡೆದಿತ್ತು. ಈ ಬಾರಿ ರಾಜ್ಯದ (Karnataka) ಒಟ್ಟು 15,387 ಶಾಲೆಗಳ 8.73ಲಕ್ಷ ವಿದ್ಯಾರ್ಥಿಗಳು (Students) ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 3,446 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 234 ಕೇಂದ್ರಗಳಲ್ಲಿ ನಡೆದ ಮೌಲ್ಯಪಾಪನ ಪ್ರಕ್ರಿಯೆಯಲ್ಲಿ 63,796 ಶಿಕ್ಷಕರು ಭಾಗಿಯಾಗಿದ್ದಾರೆ.