ಶಿಕ್ಷಕರ ನೇಮಕಾತಿಯಲ್ಲಿ ನಿಯಮ ಸಡಿಲಿಸಲು ಆಗ್ರಹ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಇರುವ ಷರತ್ತುಗಳಿಂದ ನೇಮಕಾತಿಯೇ ಆಗದಂತೆ ಆಗಿದ್ದು, ನಿಯಮಗಳನ್ನು ಸಡಿಲಿಕೆ ಮಾಡುವಂತೆ ಆಗ್ರಹ ಕೇಳಿಬಂದಿದೆ.
ಕೊಪ್ಪಳ (ನ.12): ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಇರುವ ಷರತ್ತುಗಳಿಂದ ನೇಮಕಾತಿಯೇ ಆಗದಂತೆ ಆಗಿದ್ದು, ನಿಯಮಗಳನ್ನು ಸಡಿಲಿಕೆ ಮಾಡುವಂತೆ ಅಭ್ಯರ್ಥಿ ಮೈಲಾರಪ್ಪ ಗುಡ್ಲಾನೂರು ಆಗ್ರಹಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ.ಕ. ಭಾಗದಲ್ಲಿ 227 ಗಣಿತ ಶಿಕ್ಷಕರ ಹುದ್ದೆಗಳು ಖಾಲಿ ಉಳಿಯಲಿವೆ. ಆದರೆ, ಸಿಇಟಿಯಲ್ಲಿ ಉತ್ತೀರ್ಣರಾಗಿ ಹುದ್ದೆಗೆ ಅರ್ಹತೆ ಪಡೆದಿರುವ 154 ಅಭ್ಯರ್ಥಿಗಳಿದ್ದು, ನಿಯಮ ಸಡಿಲಿಕೆ ಮಾಡಿ ನೇಮಕ ಮಾಡಿಕೊಳ್ಳಬೇಕೆಂದು ಎಂದು ಒತ್ತಾಯಿಸಿದರು.
ಆಯಾ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅನುಸಾರ ಶಿಕ್ಷರ ನೇಮಕಾತಿ ನಡೆಸಲಾಗುತ್ತಿದೆ. ಸದ್ಯ ನಾವು ಆಯ್ಕೆ ಮಾಡಿಕೊಂಡ ಜಿಲ್ಲೆಯಲ್ಲಿ ಮಾತ್ರ ನಮಗೆ ನೇಮಕಾತಿಗೆ ಅವಕಾಶವಿದೆ. ಕೊಪ್ಪಳದಲ್ಲಿ ಗಣಿತ ವಿಷಯದಲ್ಲಿ 329 ಹುದ್ದೆಗಳು ಖಾಲಿ ಇದ್ದ ಕಾರಣ ನಮ್ಮ ಜಿಲ್ಲೆ, ವಿಜಯ ನಗರ, ಬಳ್ಳಾರಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ಹೆಚ್ಚುವರಿಯಾಗಿ 123 ಜನರು ಹುದ್ದೆಗೆ ಅರ್ಹತೆ ಪಡೆದಿದ್ದೇವೆ. ಆದರೆ, ಖಾಲಿ ಹುದ್ದೆಗಳಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ಇತರ ಜಿಲ್ಲೆಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಅರ್ಹತೆ ಪಡೆದ ಅಭ್ಯರ್ಥಿಗಳಿಲ್ಲ. ಸರ್ಕಾರ ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಸುವುದಾಗಿ ತಿಳಿಸುತ್ತಿದೆ. ನಾವು ಅಹ ಪದವಿ ಹಾಗೂ ಟಿಇಟಿ, ಸಿಇಟಿ ಪರೀಕ್ಷೆ ಬರೆದು ಅರ್ಹತೆ ಪಡೆದಿದ್ದೇವೆ. ನಾವು ಕಕ ಭಾಗದ ಯಾವುದೇ ಜಿಲ್ಲೆಗೆ ಕಳಿಸಿದರೂ ಹೋಗಲು ಸಿದ್ಧರಿದ್ದೇವೆ. ಹೀಗಾಗಿ ಶಿಕ್ಷಣ ಇಲಾಖೆ ನಿಯಮ ಸಡಿಲಿಕೆ ಮಾಡಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸದ್ಯ ಯಾದಗಿರಿ ಜಿಲ್ಲೆಯಲ್ಲಿ 111, ಬಳ್ಳಾರಿ 59, ರಾಯಚೂರು 56 ಹಾಗೂ ಬೀದರ್‌ನಲ್ಲಿ 1ಗಣಿತ ಶಿಕ್ಷಕರ ಹುದ್ದೆ ಖಾಲಿ ಉಳಿದಿದೆ. ಕೊಪ್ಪಳದಲ್ಲಿ ಅರ್ಹತೆ ಹೊಂದಿದ 123, ವಿಜಯನಗರ 20 ಹಾಗೂ ಕಲಬುರಗಿಯಲ್ಲಿ 11 ಸೇರಿ 154 ಅಭ್ಯರ್ಥಿಗಳಿದ್ದೇವೆ. ಹೀಗಾಗಿ ಖಾಲಿ 227 ಹುದ್ದೆಗಳನ್ನು ನಮಗೆ ನೀಡಿದರೂ ಇನ್ನು ಹುದ್ದೆಗಳು ಉಳಿಯಲಿವೆ. ಕಕಗೆ ವಿಶೇಷ ಸ್ಥಾನಮಾನವಿದ್ದು, ಅದರಡಿ ಸಡಿಲಿಕೆ ನೀಡಬೇಕು. ಈ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಗಣಿತ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ನಮ್ಮ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದು, ಶಿಕ್ಷಣ ಸಚಿವರು ಆಸಕ್ತಿ ವಹಿಸಿ ನಮ್ಮ ಭವಿಷ್ಯಕ್ಕೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು. ಅಭ್ಯರ್ಥಿಗಳಾದ ಅಮರೇಶ ಶಶಿಮಠ, ರಘು ನಾಯಕ, ಮಲ್ಲಿಕಾರ್ಜುನ ಉಳ್ಳಾಗಡ್ಡಿ ಇತರರಿದ್ದರು.
ಶಿಕ್ಷಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸಭೆ ಆಯೋಜಿಸಿ
ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜು ಶಿಕ್ಷಕರು ಅನೇಕ ಜ್ವಲಂತ ಸಮಸ್ಯೆ ಎದುರಿಸುವ ಜತೆಗೆ ಯಾವುದೇ ಭದ್ರತೆ ಇಲ್ಲದೇ ಪಾಠ ಮಾಡುತ್ತಿದ್ದಾರೆ. ಶಿಕ್ಷಕರ ನೋವು-ನಲಿವುಗಳಿಗೆ ಸ್ಪಂದಿಸಲು ಕಾಳಜಿ ವಹಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸುವಂತೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಳೆದ 27 ವರ್ಷಗಳಿಂದ ಕನ್ನಡ ಮಾಧ್ಯಮ ಶಾಲಾ-ಕಾಲೇಜು ಶಿಕ್ಷಕರು ಸರ್ಕಾರದ ಯಾವುದೇ ಸಹಕಾರವಿಲ್ಲದೆ ಕನ್ನಡ ಶಾಲೆ ಹಾಗೂ ಭಾಷೆ ಉಳಿಸಲು ಸೇವೆ ಮಾಡುತ್ತಿದ್ದಾರೆ. ಅನುದಾನಕ್ಕಾಗಿ ಒತ್ತಾಯಿಸಿ ಎಲ್ಲ ಹಂತದ ಹೋರಾಟ ಮಾಡುವ ಮೂಲಕ ಬದುಕಿನ ಭರವಸೆ ಕಳೆದುಕೊಂಡು ದಿನ ದೂಡುತ್ತಿದ್ದಾರೆ. ಕೆಲ ಶಿಕ್ಷಕರು ಕೂಲಿ ಮಾಡುವುದಕ್ಕಾಗಿ ಶಿಕ್ಷಕ ವೃತ್ತಿಯನ್ನೇ ತೊರೆದಿದ್ದಾರೆ. ಅಳಿದುಳಿದ ಶಿಕ್ಷಕರು ಕನ್ನಡ ಶಾಲೆ ಉಳಿವಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಬದುಕಿಗೆ ಮಾನವೀಯತೆಯ ದೃಷ್ಟಿಯಿಂದ ಆಸರೆ ನೀಡುವುದು ಅತ್ಯವಶ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪದವಿಪೂರ್ವ ಕಾಲೇಜಿಗಾಗಿ 10 ಕಿಮೀ ಪಾದಯಾತ್ರೆ; ಮಂಜೂರಾಗದಿದ್ರೆ ಚುನಾವಣೆ
2006ರ ನಂತರ ನೇಮಕಗೊಂಡ ಅನುದಾನಿತ ಶಾಲಾ-ಕಾಲೇಜು ಶಿಕ್ಷಕರಿಗೆ ಯಾವುದೇ ಪಿಂಚಣಿ ಸೌಲಭ್ಯವಿಲ್ಲ. 30-35 ವರ್ಷಗಳಿಂದ ಸೇವೆ ಸಲ್ಲಿಸಿ ಬರಿಗೈಯಲ್ಲಿ ಮನೆಗೆ ಹೋಗುತ್ತಿದ್ದಾರೆ. ಬದುಕಿನ ಕಡೆಯ ದಿನವನ್ನು ಅತ್ಯಂತ ಕಷ್ಟದಿಂದ ಕಳೆಯುವಂತಹ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಖಾಸಗಿ ಶಾಲಾ-ಕಾಲೇಜು ಶಿಕ್ಷಕರಿಗೂ ಆರೋಗ್ಯದ ಹಿತದೃಷ್ಟಿಯಿಂದ ಜ್ಯೋತಿ ಸಂಜೀವಿನಿ ಜಾರಿಗೊಳಿಸುವುದು, ದೈಹಿಕ ಶಿಕ್ಷಣ ಶಿಕ್ಷಕರ, ಚಿತ್ರಕಲಾ ಶಿಕ್ಷಕರ, ವೃತ್ತಿ ಶಿಕ್ಷಕರ ಹಾಗೂ ಸಹಶಿಕ್ಷಕರ ಸಣ್ಣಪುಟ್ಟಸಮಸ್ಯೆ ಸರ್ಕಾರದ ಹಂತದಲ್ಲಿ ಸಮಸ್ಯೆಗಳಾಗಿಯೇ ಉಳಿದಿವೆ. ಇವುಗಳ ಪರಿಹಾರಕ್ಕೆ ಇಲಾಖೆ ಮಟ್ಟದಲ್ಲಿ ಸಾಕಷ್ಟುಸಭೆ ಆಗಿವೆ. ಆದರೂ ಯಾವ ಸಮಸ್ಯೆಗೂ ಆದೇಶ ರೂಪದ ಪರಿಹಾರವೂ ದೊರೆತಿಲ್ಲ ಎಂದು ಪತ್ರದಲ್ಲಿ ಹೊರಟ್ಟಿಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ತಪ್ಪು ಅಭ್ಯಾಸಗಳಿಂದಾಗಿಯೇ ಜೀವನದಲ್ಲಿ ಯಶಸ್ಸು ಸಿಗಲು ತೊಡಕಾಗುತ್ತೆ
7ನೇ ವೇತನ ಆಯೋಗ ರಚಿಸುವ ಮೂಲಕ ಲಕ್ಷಾಂತರ ನೌಕರರ ಹಿತಕಾಯಲು ತಾವು ಮುಂದಾಗಿರುವುದು ಸ್ವಾಗತಾರ್ಹ. ಖಾಸಗಿ ಶಾಲಾ ಕಾಲೇಜು ಶಿಕ್ಷಕರ ಬದುಕನ್ನು ಹಸನಗೊಳಿಸುವಲ್ಲಿ ವಿಶೇಷ ಕಾಳಜಿ ವಹಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.