ಬೆಂ.ನಗರ ವಿವಿಯಲ್ಲಿ ವಿದೇಶಿ ಭಾಷೆಯಲ್ಲಿ ಡಿಗ್ರಿ: ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಭಾಷೆ ಪರಿಚಯ

ಬೆಂಗಳೂರು ನಗರ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ತನ್ನ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳ ವ್ಯಾಸಂಗದಲ್ಲಿ ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಸೇರಿದಂತೆ ವಿವಿಧ ವಿದೇಶಿ ಭಾಷೆಗಳ ಅಧ್ಯಯನವನ್ನು ಪರಿಚಯಿಸಿದೆ. 

Degree in Foreign Language at Bangalore University Introduction to French German Spanish gvd

ಬೆಂಗಳೂರು (ಮೇ.28): ಬೆಂಗಳೂರು ನಗರ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ತನ್ನ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳ ವ್ಯಾಸಂಗದಲ್ಲಿ ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಸೇರಿದಂತೆ ವಿವಿಧ ವಿದೇಶಿ ಭಾಷೆಗಳ ಅಧ್ಯಯನವನ್ನು ಪರಿಚಯಿಸಿದೆ. ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆರಂಭವಾಗಿದ್ದ ಸೆಂಟ್ರಲ್‌ ಕಾಲೇಜು ಆವರಣದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರವು ಈಗ ಬೆಂಗಳೂರು ನಗರ ವಿವಿಯ ವ್ಯಾಪ್ತಿಗೆ ಒಳಪಟ್ಟಿದೆ. ಕಳೆದ 38 ವರ್ಷಗಳಿಂದ ಸುಮಾರು 14 ವಿದೇಶಿ ಭಾಷೆಗಳ ಅಧ್ಯಯನದಲ್ಲಿ ಸರ್ಟಿಫಿಕೇಟ್‌, ಡಿಪ್ಲೊಮಾ ಕೋರ್ಸುಗಳನ್ನು ನಡೆಸುತ್ತಿದ್ದ ಈ ಕೇಂದ್ರದ ಮೂಲಕ ಈಗ ಬೆಂಗಳೂರು ನಗರ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳನ್ನು ಒಂದು ವಿಷಯವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. 

ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುವಂತಾಗಲಿದೆ ಎನ್ನುತ್ತಾರೆ ವಿವಿಯ ಅಧಿಕಾರಿಗಳು. ವಿವಿಯಲ್ಲಿ ಈಗಾಗಲೇ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಓದಿದ ವಿದ್ಯಾರ್ಥಿಗಳು ತಮ್ಮ ಇಷ್ಟದ ವಿದೇಶಿ ಭಾಷೆ ಓದಲು ಕೆಲ ಸೀಮಿತ ಅವಧಿಯಲ್ಲಿ ಸರ್ಟಿಫಿಕೇಟ್‌, ಡಿಪ್ಲೊಮಾ ಕೋರ್ಸು, ವಿಶೇಷ ಕೋರ್ಸುಗಳ ಅಧ್ಯಯನಕ್ಕೆ ಹಲವು ವರ್ಷಗಳಿಂದ ಅವಕಾಶವಿದೆ. ಇದೀಗ ಇದರ ಜೊತೆಗೆ ಕಲಾ ನಿಖಾಯದಲ್ಲಿ (ಬ್ಯಾಚುಲರ್‌ ಆಫ್‌ ಆಟ್ಸ್‌ರ್‍) ಸೂಕ್ತ ಸಂಯೋಜನೆಯೊಂದಿಗೆ ವಿದೇಶಿ ಭಾಷೆಗಳ ಅಧ್ಯಯನಕ್ಕೆ 2023-24ನೇ ಸಾಲಿನಿಂದ ಅವಕಾಶ ಕಲ್ಪಿಸಲಾಗಿದೆ.

2 ಸಾವಿರ ನೋಟು ಸ್ವೀಕರಿಸಬೇಡಿ ಎಂದ ಬಿಎಂಟಿಸಿ: ಪ್ರಯಾಣಿಕರ ಆಕ್ರೋಶ

ಯಾವ್ಯಾವ ಕಾಂಬಿನೇಷನ್‌ ಲಭ್ಯ?: ವಿಶ್ವವಿದ್ಯಾಲಯ ನೀಡಿರುವ ಮಾಹಿತಿ ಪ್ರಕಾರ ಬಿಎ ಇಂಗ್ಲಿಷ್‌ ಮತ್ತು ಫ್ರೆಂಚ್‌, ಅರ್ಥಶಾಸ್ತ್ರ ಮತ್ತು ಫ್ರೆಂಚ್‌, ಇತಿಹಾಸ ಮತ್ತು ಫ್ರೆಂಚ್‌, ರಾಜಕೀಯ ವಿಜ್ಞಾನ ಮತ್ತು ಫ್ರೆಂಚ್‌ ಕಾಂಬಿನೇಷನ್‌ಗಳು ಲಭ್ಯವಿದೆ. ಅದೇ ರೀತಿ ಸ್ನಾತಕೋತ್ತರ ಪದವಿ ಮಾಸ್ಟರ್‌ ಆಫ್‌ ಆರ್ಟ್ಸ್‌ನಲ್ಲಿ ಫ್ರೆಂಚ್‌, ಜರ್ಮನ್‌, ಜಪಾನೀಸ್‌, ಸ್ಪಾ್ಯನಿಷ್‌ ಭಾಷೆಗಳಲ್ಲಿ ಎಂಎ ವ್ಯಾಸಂಗ ಮಾಡಬಹುದು. 

ಗುತ್ತಿಗೆದಾರರಿಗೆ ಪಾಲಿಕೆ ಹಣಕ್ಕೆ ಬ್ಯಾಂಕ್‌ ಕೊಕ್ಕೆ: ತುರ್ತು ಅಗತ್ಯ ಇರೋರಿಗೆ ಹಣಕ್ಕೆ ಓವಿಡಿಎಸ್‌ ಜಾರಿ!

ಪದವಿ, ಸ್ನಾತಕೋತ್ತರ ಪದವಿಯಲ್ಲಿ ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗಾಗಿ ಸಂಬಂಧಪಟ್ಟವಿದೇಶಿ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಆಯಾ ಭಾಷೆಗಳಲ್ಲಿ ನುರಿತ ಶಿಕ್ಷಕರನ್ನು ನಿಯೋಜಿಸಿಕೊಂಡಿದೆ. ಈಗಾಗಲೇ ಸ್ಪಾ್ಯನಿಷ್‌ ಶಿಕ್ಷಕರು ವಿವಿಯಲ್ಲಿ ಲಭ್ಯವಿದ್ದಾರೆ, ಜಪಾನೀಸ್‌ ಶಿಕ್ಷಕರು 2023ರ ಅಂತ್ಯದ ವೇಳೆಗೆ ಆಗಮಿಸಲಿದ್ದಾರೆ. ಇಟಾಲಿಯನ್‌ ಶಿಕ್ಷಕರು ಕೂಡ 2024ಕ್ಕೆ ಇಟಲಿಯಿಂದ ಕರೆಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳೊಂದಿಗೂ ಆಯಾ ದೇಶದ ಭಾಷೆಗಳ ಬೋಧಕರನ್ನು ಕಳುಹಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಲಿಂಗಾರಾಜ ಗಾಂಧಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios