Asianet Suvarna News Asianet Suvarna News

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ: ಡಿಡಿಪಿಐಗೆ ಅಧಿಕಾರ

*  ಕನ್ನಡ ಮಾಧ್ಯಮಕ್ಕೆ ಧಕ್ಕೆ ಆಗಕೂಡದು
* ಆರ್ಥಿಕವಾಗಿ ಹೊರೆ ಆಗ ಕೂಡದು: 13 ಷರತ್ತು
*  ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗಕೂಡದು
 

DDPI Given authority to Grant Permission to start English Medium in Government Schools grg
Author
Bengaluru, First Published Aug 4, 2021, 7:15 AM IST

ಬೆಂಗಳೂರು(ಆ.04):  ರಾಜ್ಯದ ಸರ್ಕಾರಿ ಹಿರಿಯ ಅಥವಾ ಮಾದರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ವಿಭಾಗದ ಜತೆಗೆ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಅನುಮತಿ ನೀಡುವ ಅಧಿಕಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯಾ ಜಿಲ್ಲಾ ಉಪನಿರ್ದೇಶಕರಿಗೆ (ಡಿಡಿಪಿಐ) ನೀಡಿದೆ.

ಆದರೆ, ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗಕೂಡದು, ಜೊತೆಗೆ ಕನ್ನಡ ಮಾಧ್ಯಮ ವಿಭಾಗಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸಬೇಕೆಂಬುದು ಸೇರಿ 13 ಷರತ್ತುಗಳನ್ನು ವಿಧಿಸಿದೆ.

ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ತಾತ್ಕಾಲಿಕ ತಡೆ

2021-22ನೇ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ನೀಡುವಂತೆ ವಿವಿಧ ಜಿಲ್ಲಾ ಉಪನಿರ್ದೇಶಕರುಗಳಿಂದ ಶಿಫಾರಸು ಹಾಗೂ ಪ್ರಸ್ತಾವನೆ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಇದಕ್ಕೆ ಸಹಮತ ನೀಡಿ ಆಯಾ ಡಿಡಿಪಿಐಗಳಿಗೇ ಅಧಿಕಾರ ನೀಡಿದೆ.

ಪ್ರಮುಖ ಷರತ್ತುಗಳು:

ಸರ್ಕಾರಿ ಶಾಲೆಯಲ್ಲಿ 1ರಿಂದ 7 ಅಥವಾ 8ನೇ ತರಗತಿವರೆಗೆ ನಡೆಯುತ್ತಿರಬೇಕು. ಶಾಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳ ಸಂಖ್ಯೆಯು ಗಮನಾರ್ಹವಾಗಿರಬೇಕು. ಆಂಗ್ಲ ಮಾಧ್ಯಮ ಆರಂಭದಿಂದ ಕನ್ನಡ ಮಾಧ್ಯಮಕ್ಕೆ ಧಕ್ಕೆಯಾಗಬಾರದು. ಶಾಲೆಯಲ್ಲಿ ಹಾಲಿ ಇರುವ ತರಗತಿ ಕೊಠಡಿ, ಕಟ್ಟಡ ಮತ್ತು ಮೂಲಸೌಕರ್ಯದಲ್ಲೇ ಆಂಗ್ಲ ಮಾಧ್ಯಮದ ಹೆಚ್ಚುವರಿ ವಿಭಾಗ ನಡೆಸಬೇಕು. ಆ ವಿಭಾಗಕ್ಕೂ ಹಾಲಿ ಇರುವ ಶಿಕ್ಷಕರನ್ನೇ ಹೊಂದಾಣಿಕೆ ಮಾಡಬೇಕು. ಇದಕ್ಕೆ ಶಿಕ್ಷಕರು, ಪೋಷಕರು, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರ ಸಹಮತ ಇರಬೇಕು ಎಂಬುದು ಸೇರಿ ಹದಿಮೂರು ಷರತ್ತುಗಳನ್ನು ವಿಧಿಸಲಾಗಿದೆ.
 

Follow Us:
Download App:
  • android
  • ios