ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿದ ಕೇರಳದ ಈ ಕಾರ್ಮಿಕ ಎಲ್ಲರಿಗೂ ಸ್ಫೂರ್ತಿ!
*ಕೇರಳದ ರೇಲ್ವೆ ಸ್ಟೇಷನ್‌ನಲ್ಲಿ ಕೂಲಿ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ ಕೂಲಿ
*ರೈಲ್ವೆ ಸ್ಟೇಷನ್‌ನಲ್ಲಿ ದೊರೆಯುವ ಫ್ರೀ ವೈಫೈ ಬಳಸಿಕೊಂಡು ಆಡಿಯೋ, ವಿಡಿಯೋ ಡೌನ್‌ಲೋಡ್
* ಕೇರಳ ಸಾರ್ವಜನಿಕ ಸೇವಾ ಪರೀಕ್ಷೆ ಪಾಸ್ ಮಾಡಿರುವ ಶ್ರೀನಾಥ್ ಕೆ ಎಲ್ಲರಿಗೂ ಮಾದರಿ
ಭಾರತೀಯ ಆಡಳಿತಾತ್ಮಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಷ್ಟು ಸುಲಭವಲ್ಲ. ಐಎಎಸ್(IAS), ಐಪಿಎಸ್ (IPS) ಆಗಬೇಕೆಂದು ವರ್ಷಗಳಗಟ್ಟಲೇ ಶ್ರಮಪಡುವವರು ಸಾಕಷ್ಟು ಮಂದಿ ಇದ್ದಾರೆ. ಯುಪಿಎಸ್ಸಿ (UPSC) ಪರೀಕ್ಷೆಯ ಹಾದಿ ಬಹಳ ಕಠಿಣವಾದದ್ದು, ಆದ್ರೆ ಕಷ್ಟ ಪಟ್ಟರೆ ಖಂಡಿತ ಪರೀಕ್ಷೆಯನ್ನ ಬೇಧಿಸಬಹುದು ಅನ್ನೋದಕ್ಕೆ ಕೇರಳದ ಈ ಕೂಲಿ ಕಾರ್ಮಿಕನೇ ನಿದರ್ಶನ. ರೇಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶ್ರೀನಾಥ್ ಕೆ(Sreenath K), ಕೇರಳದ ಸಾರ್ವಜನಿಕ ಸೇವಾ ಪರೀಕ್ಷೆಯಲ್ಲಿ (KPSC) ಯಶಸ್ವಿ ಸಾಧನೆ ಮಾಡಿದ್ದಾರೆ. ಅಷ್ಟಕ್ಕೂ ಶ್ರೀನಾಥ್ ಅವರು, ಯಾವುದೋ ಕೋಚಿಂಗ್ ಹೋಗಿ ಅಥವಾ ಹಗಲಿರುಳು ಮನೆಯಲ್ಲೇ ಓದಿ ಈ ಸಾಧನೆ ಮಾಡಿದ್ದಲ್ಲ. ಅವರ ಸಾಧನೆಯ ಯಶೋಗಾಥೆ ಬಗ್ಗೆ ಕೇಳಿದ್ರೆ ನೀವು ಅಚ್ಚರಿಪಡೋದು ಗ್ಯಾರಂಟಿ. ಕೇರಳದ ಸಾರ್ವಜನಿಕ ಪರೀಕ್ಷೆ ಹಾಗೂ IAS ಪರೀಕ್ಷೆಯನ್ನ ಬೇಧಿಸಲು ಶ್ರೀನಾಥ್ ಆರಿಸಿಕೊಂಡ ಜಾಗ ಯಾವುದು ಗೊತ್ತಾ? ರೇಲ್ವೆ ನಿಲ್ದಾಣ(Railway Station). ರೈಲ್ವೆ ನಿಲ್ದಾಣದಲ್ಲಿ ಉಚಿತ ವೈ-ಫೈ (WiFi) ಇರುವ ಕಾರಣ ಕೆಪಿಎಸ್‌ಸಿ ಐಎಎಸ್ ಪರೀಕ್ಷೆಯಲ್ಲಿ ಶ್ರೀನಾಥ್ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಅಂದ್ರೆ ನಂಬ್ತೀರಾ. ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಸಹಾಯದಿಂದ ಕೆಪಿಎಸ್‌ಸಿ ಕೆಎಎಸ್ ಪರೀಕ್ಷೆಯಲ್ಲಿ ಶ್ರೀನಾಥ್ ತೇರ್ಗಡೆಯಾಗಿದ್ದಾರೆ.
ಮುನ್ನಾರ್ ಮೂಲದ ಶ್ರೀನಾಥ್ ಕೆ, ಕೊಚ್ಚಿನ್ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ತನಗೆ ಮತ್ತು ತನ್ನ ಕುಟುಂಬಕ್ಕೆ ಉತ್ತಮ ಜೀವನಕ್ಕಾಗಿ ಹಾತೊರೆಯುತ್ತಿದ್ದ ಶ್ರೀನಾಥ್, ಸರ್ಕಾರಿ ಉದ್ಯೋಗವನ್ನು ಪಡೆಯಲು ಅಧ್ಯಯನವನ್ನು ಪ್ರಾರಂಭಿಸಲು ನಿರ್ಧರಿಸಿದರು. ಆದ್ರೆ ಅವರ ಕೆಲಸದ ಸಮಯ ಮತ್ತು ಹೊರೆಯಿಂದಾಗಿ, ಅವರು ಆಗಾಗ್ಗೆ ಅಧ್ಯಯನ ಮಾಡಲು ಸಮಯ ಸಿಗುತ್ತಿರಲಿಲ್ಲ. ಹೀಗಾಗಿ ಅವರು ತಾವು ಕೆಲಸ ಮಾಡುವ ಸ್ಥಳ ಅಂದ್ರೆ ರೇಲ್ವೆ ನಿಲ್ದಾಣಗಳಲ್ಲಿ ಇರುವ ಉಚಿತ ವೈ-ಫೈ ನೆರವು ಪಡೆಯಲು ನಿರ್ಧರಿಸಿದ್ರು.
ಎಂಬಿಬಿಎಸ್ ಕಲಿಕೆಗೆ ಹಣ ಹೊಂದಿಸಲು ಹೊಲದಲ್ಲಿ ದುಡಿಯುತ್ತಿರುವ ಪ್ರತಿಭಾವಂತ!
2016 ರಲ್ಲಿ, ರೈಲ್‌ಟೆಲ್ ಮತ್ತು ಗೂಗಲ್ ಭಾರತದ ಹಲವಾರು ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಅನ್ನು ಲಾಂಚ್ ಮಾಡಿದೆ. ಉಚಿತ ವೈ-ಫೈ ಪ್ರಾರಂಭವಾದ ನಂತರ, ಶ್ರೀನಾಥ್ ಅವರು ಕೆಲಸ ಮಾಡುವಾಗ ಅಧ್ಯಯನ ಮಾಡಲು ಸಾಧ್ಯವಾಯಿತು. ಬಿಡುವಿನ ವೇಳೆಯಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದರು. ರೇಲ್ವೆ ನಿಲ್ದಾಣದಲ್ಲಿನ ವೈಫೈನಲ್ಲಿ ಶ್ರೀಧರ್ ಅವರು ಆಡಿಯೊಬುಕ್‌ಗಳು ಮತ್ತು ವೀಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು. ಕೆಲಸ ಮಾಡುವಾಗ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಕೋಚಿಂಗ್ ಮತ್ತು ಹೆಚ್ಚುವರಿ ತರಗತಿಗಳಿಗೆ ಅಭ್ಯರ್ಥಿಗಳು ಹಣವನ್ನು ಖರ್ಚು ಮಾಡುತ್ತಾರೆ. ಆದ್ರೆ ಶ್ರೀನಾಥ್ ತನ್ನ ಹಣವನ್ನು ಮೆಮೊರಿ ಕಾರ್ಡ್, ಫೋನ್ ಮತ್ತು ಒಂದು ಜೋಡಿ ಇಯರ್‌ಫೋನ್‌ಗಳಿಗೆ ಖರ್ಚು ಮಾಡಿದರು. ಪರೀಕ್ಷೆಗಳಿಗೆ ತಯಾರಿ ನಡೆಸಿದ ನಂತರ, ಅವರು ಗ್ರಾಮ ಸಹಾಯಕರ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ರು. ಈ ಪರೀಕ್ಷೆಯಲ್ಲಿ ಒಟ್ಟು 82 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾದರು.
ಯುಪಿಯಲ್ಲಿ ವಿದ್ಯಾರ್ಥಿನಿಯರಿಗೆ ರಾಣಿ ಲಕ್ಷ್ಮೀ ಬಾಯಿ ಸ್ವಯಂ ರಕ್ಷಣಾ ತರಬೇತಿ!
KPSC ಪರೀಕ್ಷೆಗಳಲ್ಲಿನ ಯಶಸ್ಸು UPSC ಪರೀಕ್ಷೆಯಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಲು ಶ್ರೀನಾಥ್ ಅವರನ್ನು ಪ್ರೇರೇಪಿಸಿತು ಮತ್ತು ಅವರು ಅದಕ್ಕಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದರು. ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೇಳಲಾಗುತ್ತಿರುವಂತೆ, ಶ್ರೀನಾಥ್ ಅವರ ಶ್ರಮವು ಸಹ ಫಲ ನೀಡಿತು. ಶ್ರೀನಾಥ್ ಅವರ ಈ ಸಾಧನೆಯನ್ನು ಗೂಗಲ್ ಇಂಡಿಯಾ ಹಂಚಿಕೊಂಡಾಗ, 2018ರಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮೂಲಕವೇ ಅಭಿನಂದಿಸಿದ್ದರು. ಶ್ರೀನಾಥ್ ಅವರು ನಿಜವಾಗಿಯೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ನಮ್ಮ ಸುತ್ತಲಿನ ಪರಿಸರದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ದಿನಗೂಲಿಯವನು ಉನ್ನತ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವುದು ಅಂದ್ರೆ ಸುಲಭದ ಮಾತಾ?