Asianet Suvarna News Asianet Suvarna News

ಯುಪಿಯಲ್ಲಿ ವಿದ್ಯಾರ್ಥಿನಿಯರಿಗೆ ರಾಣಿ ಲಕ್ಷ್ಮೀ ಬಾಯಿ ಸ್ವಯಂ ರಕ್ಷಣಾ ತರಬೇತಿ!

*ಮಿಷನ್ ಶಕ್ತಿ ನಾಲ್ಕನೇ ಹಂತದ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯ ತರಬೇತಿ
*ಉನ್ನತದ ಪ್ರಾಥಮಿಕ ಶಾಲಾ ಹೆಣ್ಣು ಮಕ್ಕಳಿಗೆ ಸ್ವಯಂ-ರಕ್ಷಣೆ ತರಬೇತಿ ನೀಡಲಾಗುವುದು
*ಬಾಲಕಿಯ ಹಿತರಕ್ಷಣೆಯ ದೃಷ್ಟಿಯಂದ ಜಾರಿಗೆ ತರಲಾದ ಯುಪಿ ಸರ್ಕಾರದ ಮಹತ್ವ ಕಾರ್ಯಕ್ರಮ

UP Government is providing self-protection training to School Girls
Author
First Published Dec 13, 2022, 12:38 PM IST

ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿ ನೀಡಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ (UP Government) ಮುಂದಾಗಿದೆ. ಮಿಷನ್ ಶಕ್ತಿ (Mission Shakti Phase Four) ನಾಲ್ಕನೇ ಹಂತದ ಅಡಿಯಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಮತ್ತು ಅವರ ದೈಹಿಕ ಮತ್ತು ಮಾನಸಿಕ ಸ್ವಾವಲಂಬನೆಯನ್ನು ಬಲಪಡಿಸುವ ಉದ್ದೇಶದಿಂದ ಈ ಹೊಸ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ. ಉನ್ನತ ಪ್ರಾಥಮಿಕ ಮತ್ತು ಸಂಯೋಜಿತ ಶಾಲೆಗಳಲ್ಲಿ ಹೆಣ್ಮಕ್ಕಳಿಗೆ ಸ್ವಯಂ ರಕ್ಷಣಾ ತರಬೇತಿಯನ್ನು ನೀಡಲು ಮುಂದಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರಂತರ ಪ್ರಯತ್ನಗಳಿಂದಾಗಿ ಕಳೆದ ಐದೂವರೆ ವರ್ಷಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ.  ಅಪರಾಧಿಗಳ ವಿರುದ್ಧ ಸಿಎಂ ಯೋಗಿಯ ಶೂನ್ಯ ಸಹಿಷ್ಣುತೆಯ ನೀತಿಯಿಂದಾಗಿ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಗಮನಾರ್ಹ ಇಳಿಕೆ ಆಗಿದೆ. ಹೆಣ್ಣು ಮಕ್ಕಳ ಬಗ್ಗೆ ಸರಿಯಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವಿದ್ಯಾರ್ಥಿನಿಯರಿಗೆ 'ರಾಣಿ ಲಕ್ಷ್ಮೀ ಬಾಯಿ' (Rani Laxmi Bai)  ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ.

ಶಾಲಾ ಶಿಕ್ಷಣದ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಅವರು, ಆತ್ಮರಕ್ಷಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಆತ್ಮರಕ್ಷಣೆಯ ತರಬೇತಿಯ ಮುಖ್ಯ ಉದ್ದೇಶವೆಂದರೆ ಹೆಣ್ಣುಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು. ಇದರಿಂದ ಅವರು ಯಾವುದೇ ವಿಚಿತ್ರ ಪರಿಸ್ಥಿತಿಯನ್ನು ಸಂಘರ್ಷವಿಲ್ಲದೆ ಎದುರಿಸಬಹುದು ಮತ್ತು ನಿಭಾಯಿಸಬಹುದು ಅಂತ ಅಭಿಪ್ರಾಯ ಪಟ್ಟಿದ್ದಾರೆ. 

ಸೈನಿಕರು, ಪೊಲೀಸರಿಗೆ ವಿಶೇಷ ಹೆಲ್ಮೆಟ್ ತಯಾರಿಸಿದ ಗೋರಖಪುರ ಐಟಿಎಂ ವಿದ್ಯಾರ್ಥಿಗಳು!

ಆತ್ಮ ರಕ್ಷಣೆಗೆ ದಾಳಿಯೇ ಸೂಕ್ತ ಅಸ್ತ್ರ ಎಂಬ ಮಂತ್ರವನ್ನು ಅನುಸರಿಸಿ ಬಾಲಕಿಯರ ತರಬೇತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈ ತರಬೇತಿಯು ಇದೇ ತಿಂಗಳು ಶುರುವಾಗಲಿದ್ದು, 2023ರ ಫೆಬ್ರವರಿವರೆಗೆ ನಡೆಯಲಿದೆ. ಆರೋಗ್ಯ ಮತ್ತು ದೈಹಿಕ ಶಿಕ್ಷಣ ಬೋಧಕರು ಮತ್ತು ಕೆಜಿಬಿವಿಯ ಕ್ರೀಡಾ ಶಿಕ್ಷಕರು ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಬಾಲಕಿಯರಿಗೆ ದೈಹಿಕ ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಗೀತಕ್ಕೆ ನಿಗದಿತ ಅವಧಿಯಲ್ಲಿ ತರಬೇತಿ ನೀಡುತ್ತಾರೆ.

ಅಂದ ಹಾಗೇ ಶಾಲೆಯ ಮುಖ್ಯೋಪಾಧ್ಯಾಯರ ಮೇಲ್ವಿಚಾರಣೆಯಲ್ಲಿ ತರಬೇತಿ ನಡೆಯಲಿದೆ. ಇದಲ್ಲದೆ, ತರಬೇತಿ ಸಮಯದಲ್ಲಿ ಶಾಲೆಗಳ ಶಿಕ್ಷಕರನ್ನು ಸಹ ಸೇರಿಸಿಕೊಳ್ಳಲಾಗುವುದು, ಅವರು ಹುಡುಗಿಯರಿಗೆ ತರಬೇತಿ ಅವಧಿಯಲ್ಲಿ ನಿರಂತರವಾಗಿ ಹಾಜರಿರುತ್ತಾರೆ. ಕಾರ್ಯಕ್ರಮದ ಮೊದಲ ವಾರದಲ್ಲಿ ಬಿಸಿಯೂಟದ ಚಟುವಟಿಕೆಗಳಲ್ಲಿ ಮಕ್ಕಳಿಗೆ ಸುರಕ್ಷತಾ ಕ್ರಮಗಳು, ಕಾನೂನುಗಳು ಮತ್ತು ಸಹಾಯವಾಣಿ ಸಂಖ್ಯೆಗಳು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವ ಅಣಕು ಡ್ರಿಲ್ ಅನ್ನು ನಡೆಸಲಾಗುವುದು. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಮುಖ ಕಾನೂನುಗಳ ಆಧಾರದ ಮೇಲೆ 1090 ಲಕ್ನೋದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಂಸ್ಥೆಯ ಪ್ರಧಾನ ಕಛೇರಿಯು ಅಭಿವೃದ್ಧಿಪಡಿಸಿದ ಕಿರುಪುಸ್ತಕವನ್ನು ಸಹ ಮಕ್ಕಳೊಂದಿಗೆ ವಿವರವಾಗಿ ಓದಲಾಗುತ್ತದೆ ಮತ್ತು ಚರ್ಚಿಸಲಾಗುತ್ತದೆ.

ಎಂಬಿಬಿಎಸ್‌ ಕಲಿಕೆಗೆ ಹಣ ಹೊಂದಿಸಲು ಹೊಲದಲ್ಲಿ ದುಡಿಯುತ್ತಿರುವ ಪ್ರತಿಭಾವಂತ!

ಪ್ರಸ್ತುತ, ಸಮಗ್ರ ಶಿಕ್ಷಾ ಅಡಿಯಲ್ಲಿ ಒಟ್ಟು 10,158 ಆರೋಗ್ಯ ಮತ್ತು ದೈಹಿಕ ಶಿಕ್ಷಣ ಬೋಧಕರು ಮತ್ತು 10,904 ಬೋಧಕರು ಮತ್ತು ಶಿಕ್ಷಕರು 746 ಕೆಜಿಬಿವಿಗಳಲ್ಲಿ ಉನ್ನತ ಪ್ರಾಥಮಿಕ ಶಾಲೆಗಳು ಮತ್ತು ಸಂಯೋಜಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಬೋಧಕರಿಗೆ ಮತ್ತು ಕೆಜಿಬಿವಿ ಕ್ರೀಡಾ ಶಿಕ್ಷಕರಿಗೆ ಆತ್ಮರಕ್ಷಣೆಯ ತರಬೇತಿಯನ್ನು ನೀಡಲಾಗಿದೆ. ಕಳೆದ ವರ್ಷವೂ ಇದೇ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಬೋಧಕರ ಮೂಲಕ ಶಾಲೆಗಳಲ್ಲಿ ಸ್ವಯಂ ರಕ್ಷಣಾ ತರಬೇತಿಯನ್ನು ಆಯೋಜಿಸಲಾಗಿತ್ತು. 2022-23ನೇ ಸಾಲಿನಲ್ಲಿ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಬೋಧಕರು ಮತ್ತು ಕ್ರೀಡಾ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿಯನ್ನು ನೀಡಲಿದ್ದಾರೆ.

Follow Us:
Download App:
  • android
  • ios