Asianet Suvarna News Asianet Suvarna News

IAS ಆಗೋ ಕನಸು ನನಸು, ಸೆರೆಬ್ರಲ್ ಪಾಲ್ಸಿಗೆ ತುತ್ತಾದ ಸಾರಿಕಾ ಯುಪಿಎಸ್‌ಸಿ ಪಾಸು

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಉದಯ್ ಕೃಷ್ಣರೆಡ್ಡಿ ಪೊಲೀಸ್ ಸೇವೆ ಸಲ್ಲಿಸುತ್ತಿದ್ದವರು. ಆದರೆ ಒಮ್ಮೆ ಅವರ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕ ದ್ವೇಷದ ಉದಯ್‌ರನ್ನು ಅವಮಾನಿಸಿದ್ದರಂತೆ. ಇದರಿಂದ ಬೇಸತ್ತು ಅಂದೇ ಹುದ್ದೆಗೆ ರಾಜೀನಾಮೆ ನೀಡಿದ್ದ ಉದಯ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಅವರ ಕ್ರಮ ಇದೀಗ ಫಲಕೊಟ್ಟಿದ್ದು 780 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.  

Constable Passed the UPSC Exam Who Resigned For Insult in Andhra Pradesh grg
Author
First Published Apr 18, 2024, 11:34 AM IST

ನವದೆಹಲಿ(ಏ.18):  ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ನಡೆಸಲಾಗಿದ್ದ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಹಲವರು ನಾನಾ ಕಾರಣಕ್ಕೆ ದೇಶದ ಗಮನ ಸೆಳೆದಿದ್ದಾರೆ. ಅಂಥವರ ಕೆಲ ಕಥೆಗಳು ಇಲ್ಲಿವೆ. 

ಮೇಲಧಿಕಾರಿ ಸೇಡಿನ ಮಾತಿಗೆ ನೊಂದು ಉದಯ್ ರಾಜೀನಾಮೆ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಉದಯ್ ಕೃಷ್ಣರೆಡ್ಡಿ ಪೊಲೀಸ್ ಸೇವೆ ಸಲ್ಲಿಸುತ್ತಿದ್ದವರು. ಆದರೆ ಒಮ್ಮೆ ಅವರ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕ ದ್ವೇಷದ ಉದಯ್‌ರನ್ನು ಅವಮಾನಿಸಿದ್ದರಂತೆ. ಇದರಿಂದ ಬೇಸತ್ತು ಅಂದೇ ಹುದ್ದೆಗೆ ರಾಜೀನಾಮೆ ನೀಡಿದ್ದ ಉದಯ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಅವರ ಕ್ರಮ ಇದೀಗ ಫಲಕೊಟ್ಟಿದ್ದು 780 ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ.  

UPSC ಪರೀಕ್ಷೆಯಲ್ಲಿ 178ನೇ ಸ್ಥಾನ ಪಡೆದ ಬ್ಯಾಡ್ಮಿಂಟನ್‌ 'ಗ್ಲಾಮರ್‌ ಗರ್ಲ್‌' ಖುಹೂ ಗಾರ್ಗ್‌!

ಬೀಡಿ ಕಟ್ಟುವ ಮಹಿಳೆ ಪುತ್ರ ಸಾಯಿಕಿರಣ್‌ 27ನೇ ರ‍್ಯಾಂಕ್

ಜ್ಯದ ಕರೀಂನಗರ ಜಿಲ್ಲೆಯ ನಂಗಾಲ ಸಾಯಿಕಿರಣ್ ರ‍್ಯಾಂಕ್ ಪಡೆದಿದ್ದಾರೆ. ಕೈ ಮಗ್ಗ ಕೆಲಸ 2016ರಲ್ಲಿ ಕ್ಯಾನರ್‌ಗೆ ತುತ್ತಾಗಿಸಾವನ್ನಪ್ಪಿದ ಲಕ್ಷ್ಮೀ ಬೀಡಿ ಕಟ್ಟುವ ನೋಡಿಕೊಂಡಿದ್ದರು. ತಾಯಿಯ ಈ ಕಷ್ಟ ನೋಡಲಾಗದೇ ಮತ್ತು ತಂಗಿಯ ಉನ್ನತ ಶಿಕ್ಷಣಕ್ಕೆ ನೆರವಾಗುವ ಸಲುವಾಗಿ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಕೊಟ್ಟಿಗೆಯಲ್ಲಿ ವಾಸದ ರೈತನ ಮಗನ ಯುಪಿಎಸ್‌ಸಿ ಸಾಹಸ

ಉತ್ತರ ಪ್ರದೇಶದ ಬುಲಂದ್‌ರ್ಹ ರೈತರ ಮಗ ಪವನ್ ಕುಮಾರ್‌ರದ್ದು ಬಡ ಕುಟುಂಬ. ವಾಸ ಮಾಡುವುದು ಕೊಟ್ಟಿಗೆ ರೀತಿಯ ಜಾಗದಲ್ಲಿ ಆದರೆ ವಿದ್ಯಾಭ್ಯಾಸಕ್ಕೆ ಇದು ಅಡ್ಡಿಯಾಗಿಲ್ಲ. ಮೂರನೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಪವನ್ ಇದೀಗೆ 239ನೇ ಬ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಇವರು ಯಾವುದೇ ತರಬೇತಿ ಪಡೆದಿಲ್ಲ.

ಯುಪಿಎಸ್ಸಿ ಕೋಚಿಂಗ್‌ ಪಡೆಯದೇ 440ನೇ ರ್‍ಯಾಂಕ್‌ ಪಡೆದ ವರ್ತಕನ ಪುತ್ರಿ ಕೃಪಾ ಜೈನ್‌!

12 ಪ್ರಯತ್ನ, 7 ಮೇನ್ಸ್, 5 ಬಾರಿ ಸಂದರ್ಶನ, ಆದರೂ ಆಯ್ಕೆ ಇಲ್ಲ!

ಕುನಾಲ್ ಎಂಬ ಹೋರಾಟಗಾರ ಜೀವನ ಸಂಘರ್ಷ ಈ ಬಾರಿಯ ಬಹುತೇಕ ಯುಪಿಎಸ್‌ಸಿ ಸಾಧಕರ ನಡುವೆಯೇ ಓರ್ವ ಹೋರಾಟಗಾರನ ಕಥೆ ಕೂಡಾ ಎಲ್ಲರ ಗಮನ ಸೆಳೆದಿದೆ. ಕುನಾಲ್ ಆರ್‌. ವಿರೂಲ್ಕರ್‌ ಎಂಬುವರು ಟ್ವಿಟ್ಟರ್‌ನಲ್ಲಿ 12 ಬಾರಿ ಪರೀಕ್ಷೆ ಯತ್ನ, 7 ಬಾರಿ ಮುಖ್ಯ ಪರೀಕ್ಷೆ, ಬಾರಿ ಸಂದರ್ಶನಕ್ಕೆ ಆಯ್ಕೆ ಆದರೂ ಆಯ್ಕೆ ಇಲ್ಲ, ಬಹುಹ ಜೀವನದ ಮತ್ತೊಂದು ಹೆಸರೇ ಸಂಘರ್ಷ ಎಂದು ಬರೆದುಕೊಂಡಿದ್ದಾರೆ. 

ಸೆರೆಬ್ರಲ್ ಪಾಲಿಗೆ ತುತ್ತಾದ ಸಾರಿಕಾ ಯುಪಿಎಸ್ಸಿ ಯಶಸ್ಸು

ಕೇರಳದ ಸಾಧತಿಗೆ 922ನೇ ರ‍್ಯಾಂಕ್ ಕೇರಳದ ಕೊಚ್ಚಿಯ ಸಾರಿಕಾಗೆ ಚಿಕ್ಕ ವಯಸ್ಸಿನಲ್ಲೇ ಸೆರೆಬ್ರಲ್ ಪಾಲ್ತಿ ಸಮಸ್ಯೆಗೆ ತುತ್ತಾಗಿದ್ದರು. ಆದರೂ ಅವರೀಗ ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ 977 ರ‍್ಯಾಂಕ್ ಪಡೆದು ಮಾದರಿಯಾಗಿ ಹೊರಹೊಮ್ಮಿದ್ದಾರೆ. ಆದರೆ ಈ ಬ್ಯಾಂಕ್ ಗೆ ತೃಪ್ತಿಗೊಳ್ಳದ ಸಾರಿಕಾ, ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ರ‍್ಯಾಂಕ್ ಉತ್ತಮವಡಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios