UPSC ಪರೀಕ್ಷೆಯಲ್ಲಿ 178ನೇ ಸ್ಥಾನ ಪಡೆದ ಬ್ಯಾಡ್ಮಿಂಟನ್ 'ಗ್ಲಾಮರ್ ಗರ್ಲ್' ಖುಹೂ ಗಾರ್ಗ್!
UPSC CSE Result 2023: ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಇದರಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ, ಡಿಜಿಪಿಯವರ ಪುತ್ರಿ ಖುಹೂ ಗಾರ್ಗ್ 178ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಇದೀಗ 'ಗ್ಲಾಮರ್ ಗರ್ಲ್' ತಾವೊಬ್ಬ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ UPSC ಪರೀಕ್ಷೆ ಪಾಸ್ ಮಾಡಿದ್ದು ಹೇಗೆ ಎನ್ನುವ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ
ಉತ್ತರಖಂಡದ ಮಾಜಿ ಡಿಜಿಪಿ ಅಶೋಕ್ ಕುಮಾರ್ ಅವರ ಪುತ್ರಿ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿಯೂ ಆಗಿರುವ ಖುಹೂ ಗಾರ್ಗ್ 2023ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 178ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿದ ಸಾಧನೆ ಮಾಡಿರುವ ಖುಹೂ ಗಾರ್ಗ್, ಈಗಾಗಲೇ 56 ಆಲ್ ಇಂಡಿಯಾ ಮೆಡಲ್ ಹಾಗೂ 18ನೇ ಅಂತಾರಾಷ್ಟ್ರೀಯ ಮೆಡಲ್‌ಗಳಿಗೆ ಕೊರಳೊಡ್ಡಿದ್ದಾರೆ.
ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಖುಹೂ ಗಾರ್ಗ್ ಅವರ ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 34ನೇ ಶ್ರೇಯಾಂಕ ಪಡೆದಿದ್ದರೆ, ಭಾರತದ ಮಟ್ಟಿಗೆ ಮಿಶ್ರ ಡಬಲ್ಸ್‌ನಲ್ಲಿ ನಂ.1 ರ‍್ಯಾಂಕ್ ನಲ್ಲಿದ್ದಾರೆ.
ಇದೀಗ ಯುಪಿಎಸ್‌ಸಿಯಲ್ಲಿ ತಾವು ಯಶಸ್ಸು ಗಳಿಸಲು ಕಾರಣ ತಮ್ಮ ತಂದೆ ಐಪಿಎಲ್ ಅಧಿಕಾರಿ ಅಶೋಕ್ ಎಂದಿದ್ದಾರೆ. ಸ್ಪೋರ್ಟ್ಸ್‌ನಲ್ಲಿ ಗಾಯಗೊಂಡಾಗ ಮಾಡಿದ ಪರಿಶ್ರಮ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕಲಿತ ಶಿಸ್ತಿನಿಂದಾಗಿ ನಾನು ಈ ಹಂತಕ್ಕೆ ಬಂದಿದ್ದೇನೆ ಎಂದು ಖುಹೂ ಗಾರ್ಗ್ ಹೇಳಿದ್ದಾರೆ.
ಖುಹೂ ಗಾರ್ಗ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಡೆಹರಾಡೂನ್‌ನ ಸೇಂಟ್ ಜೋಸೆಫ್ ಶಾಲೆಯಲ್ಲಿ ಮುಗಿಸಿದರು. ಇದಾದ ಬಳಿಕ ದೆಹಲಿಯ ಎಸ್‌ಆರ್‌ಸಿಸಿ ಕಾಲೇಜ್‌ನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಇನ್ನು ಖುಹೂ ಗಾರ್ಗ್, UPSC ಪರೀಕ್ಷೆಗಾಗಿ ದಿನದಲ್ಲಿ 16 ಗಂಟೆಗಳ ಕಾಲ ಓದುತ್ತಿದ್ದರಂತೆ. ಕೆಲವರು ಕೇವಲ ದಿನದಲ್ಲಿ 8 ಗಂಟೆ ಓದಿಯೂ ಯುಪಿಎಸ್‌ಸಿ ಪರೀಕ್ಷೆ ಕ್ಲಿಯರ್ ಮಾಡಿದವರು ಇದ್ದಾರೆ.
ಯುಪಿಎಸ್‌ಸಿ ಸಂದರ್ಶನದ ವೇಳೆಯಲ್ಲಿ ಖುಹೂ ಗಾರ್ಗ್ ಅವರಿಗೆ ಕ್ರಿಕೆಟ್ ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಗಿತ್ತಂತೆ. ಅದಕ್ಕೆ ಸಮರ್ಪಕ ಉತ್ತರ ನೀಡುವಲ್ಲಿಯೂ ಈ ಬ್ಯಾಡ್ಮಿಂಟನ್ ತಾರೆ ಯಶಸ್ವಿಯಾಗಿದ್ದರು.
ಸಂದರ್ಶನದ ವೇಳೆ ಕ್ರಿಕೆಟ್‌ನಿಂದಾಗಿಯೇ ಉಳಿದ ಕ್ರೀಡೆಗಳು ಸೊರಗುತ್ತಿವೆ ಎಂದು ಅನಿಸುತ್ತಿದೆಯೇ? ಕ್ರಿಕೆಟ್ ಒಂದು ಉದ್ಯಮವಾಗಿದೆಯೇ? ಎಂದು ಪ್ರಶ್ನೆ ಕೇಳಿದ್ದರು.
ಆಗ ಖುಹೂ ಗಾರ್ಗ್, ಕ್ರಿಕೆಟ್ ಉಳಿದ ಯಾವ ಕ್ರೀಡೆಯ ಮೇಲೂ ಯಾವುದೇ ಋಣಾತ್ಮಕ ಪರಿಣಾಮ ಬೀರಿಲ್ಲ. ಭಾರತದಲ್ಲಿ ಕ್ರಿಕೆಟ್ ಚೆನ್ನಾಗಿ ಬೆಳೆಯುತ್ತಿದೆ. ಇನ್ನುಳಿದ ಕ್ರೀಡೆಗಳು ಇನ್ನೂ ಚೆನ್ನಾಗಿ ಬೆಳೆಯಬೇಕಾಗಿದೆ ಎಂದು ಹೇಳಿದ್ದರು.