Zomato Instant ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್

ದೇಶದ ಅತ್ಯಂತ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ಗಳಲ್ಲಿ ಒಂದಾದ ಝೊಮಾಟೊ 10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ಘೋಷಿಸಿತು. ಸೇವೆಯನ್ನು ಘೋಷಿಸಿದ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೇಕೆಗೆ ಗುರಿಯಾಯ್ತು. 

Zomato faced massive backlash after announcing its 10 minutes food delivery service gow

ನವದೆಹಲಿ(ಮಾ.23): ದೇಶದ ಅತ್ಯಂತ ಜನಪ್ರಿಯ ಆಹಾರ ವಿತರಣಾ (Food Delivery) ಅಪ್ಲಿಕೇಶನ್‌ಗಳಲ್ಲಿ ಒಂದಾದ ಝೊಮಾಟೊ (Zomato) ಆಹಾರ ಪ್ರೇಮಿಗಳಿಗಾಗಿ  ಮಾರ್ಚ್ 21 ರಂದು  10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ಘೋಷಿಸಿತು. ಝೊಮಾಟೊ ಈ ಸೇವೆಯನ್ನು ಘೋಷಿಸಿದ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೇಕೆಗೆ ಗುರಿಯಾಯ್ತು. ಈ ಹೊಸ ಸೇವೆಯು ವಿತರಣಾ ಪಾಲುದಾರರನ್ನು ಕಠಿಣ ಪರಿಸ್ಥಿತಿಗೆ ದೂಡುತ್ತದೆ ಮತ್ತು ಅಸುರಕ್ಷಿತ ಕೆಲಸದ ವಾತಾವರಣ ನಿರ್ಮಾಣವಾಗುತ್ತದೆ ಎಂದು ನೆಟಿಜನ್‌ಗಳು ಕಮೆಂಟ್ ಮಾಡಿದ್ದರು.

 ಇದಕ್ಕೆ ಮಾ.22 ರಂದು ಸ್ಪಷ್ಟನೆ ನೀಡಿದ  ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು 10 ನಿಮಿಷಗಳ ವಿತರಣಾ ಸೇವೆಯು ಜನಪ್ರಿಯವಾದ, ಪ್ರಮಾಣಿತವಾಗಿರುವ ವಸ್ತುಗಳಿಗೆ ಮಾತ್ರ ಇರುತ್ತದೆ ಮತ್ತು ಆದ್ದರಿಂದ 2 ನಿಮಿಷಗಳಲ್ಲಿ ಕಳುಹಿಸಬಹುದು ಎಂದಿದ್ದಾರೆ.  ಜೊತೆಗೆ  10 ನಿಮಿಷಗಳಲ್ಲಿ ವಿತರಿಸಲಾಗುವ  ಆಹಾರ ಪದಾರ್ಥಗಳ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ. ಬ್ರೆಡ್ ಆಮ್ಲೆಟ್, ಪೋಹಾ, ಕಾಫಿ, ಚಾಯ್, ಬಿರಿಯಾನಿ, ಮೊಮೊಸ್, ಇತ್ಯಾದಿ ಆಹಾರ ಪದಾರ್ಥಗಳನ್ನು ತತ್‌ಕ್ಷಣದ ಸೇವೆಯ ಅಡಿಯಲ್ಲಿ 10 ನಿಮಿಷಗಳಲ್ಲಿ  ತಲುಪುವ ಬಗ್ಗೆ ಬಳಕೆದಾರರು ನಿರೀಕ್ಷಿಸಬಹುದು ಎಂದಿದ್ದಾರೆ.

 

ಗ್ರಾಹಕರು ನೂಡಲ್ಸ್, ಫ್ರೈಡ್ ರೈಸ್ ಅಥವಾ ಪಿಜ್ಜಾವನ್ನು ಆರ್ಡರ್ ಮಾಡಿದರೆ, ವಿತರಣಾ ಸಮಯವು ಸಾಮಾನ್ಯವಾಗಿ 30 ನಿಮಿಷಗಳು ಇರುತ್ತದೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು. ಕೆಲವೊಮ್ಮೆ ದೂರವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.

Belgaum Files ಟ್ವೀಟ್ ಮಾಡಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದ ಶಿವಸೇನೆಯ ಸಂಜಯ್

ವಿತರಣಾ ಪಾಲುದಾರರ ಸುರಕ್ಷತೆ (Safety of delivery partners): ಕಂಪನಿಯು ರಸ್ತೆ ಸುರಕ್ಷತೆಯ ಕುರಿತು ವಿತರಣಾ ಏಜೆಂಟ್‌ಗಳಿಗೆ ಶಿಕ್ಷಣ ನೀಡುವುದನ್ನು ಮುಂದುವರಿಸುತ್ತದೆ ಮತ್ತು ಅಪಘಾತ ಅಥವಾ ಜೀವ ವಿಮೆಯನ್ನು ಸಹ ನೀಡುತ್ತದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ. ಡೆಲಿವರಿ ಪಾಲುದಾರರಿಗೆ ಭರವಸೆಯ ವಿತರಣಾ ಸಮಯದ ಬಗ್ಗೆ ತಿಳಿಸಲಾಗುವುದಿಲ್ಲ. ಇದು ಡೆಲಿವರಿ ಏಜೆಂಟ್ ಮೇಲೆ ಯಾವುದೇ ಹೆಚ್ಚುವರಿ ಒತ್ತಡವನ್ನು ಹಾಕುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ.

10 ನಿಮಿಷ ಮತ್ತು 30 ನಿಮಿಷಗಳ ವಿತರಣೆ ನಡುವಿನ ಹೋಲಿಕೆ: ಟ್ವಿಟರ್ ನಲ್ಲಿ ಗೋಯಲ್ ಅವರು 10 ನಿಮಿಷ ಮತ್ತು 30 ನಿಮಿಷ ಗಳ  ಡೆಲಿವರಿ ಹೋಲಿಯನ್ನು ಉಲ್ಲೇಖಿಸಿ ಚಾರ್ಟ್ ಒಂದನ್ನು ಹಂಚಿಕೊಂಡಿದ್ದಾರೆ.  ಅದರಲ್ಲಿ ಅಡಿಗೆ ತಯಾರಿ ಸಮಯ, ಸರಾಸರಿ ಪ್ರಯಾಣದ ದೂರ ಮತ್ತು ಪ್ರಯಾಣಿಸಿದ ಸರಾಸರಿ ಸಮಯ. ಡೆಲಿವರಿಗಾಗಿ ಈ ಮೂರು ಪ್ರಮುಖ ಅಂಶಗಳನ್ನು ಟೇಬಲ್ ಉಲ್ಲೇಖಿಸುತ್ತದೆ.

Zomato Instant: ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಫುಢ್‌ ಡೆಲಿವರಿ!

ಗುರುಗ್ರಾಮ್‌ನಲ್ಲಿ  ಆರಂಭ:  ಈ ಸೇವೆಯ ಬಿಡುಗಡೆಗೆ ಸಂಬಂಧಿಸಿದಂತೆ, ಮುಂದಿನ ತಿಂಗಳಿನಿಂದ ಗುರುಗ್ರಾಮ್‌ನಲ್ಲಿ ಜೊಮಾಟೊ ಇನ್‌ಸ್ಟಂಟ್ ನಾಲ್ಕು ನಿಲ್ದಾಣಗಳೊಂದಿಗೆ ಪ್ರಾರಂಭವಾಗುತ್ತದೆ. ಕಂಪನಿಯು ಇನ್ನೂ ಭಾರತದಾದ್ಯಂತ ರೋಲ್‌ಔಟ್ ಟೈಮ್‌ಲೈನ್ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.

Zomato Instant ಯಶಸ್ವಿಯಾದರೆ, Swiggy ನಂತಹ ಪ್ರತಿಸ್ಪರ್ಧಿ ಆಹಾರ-ವಿತರಣಾ ಅಪ್ಲಿಕೇಶನ್‌ಗಳು ಸಹ ಮುಂದಿನ ದಿನಗಳಲ್ಲಿ ಇದೇ ರೀತಿಯ ತ್ವರಿತ ಆಹಾರ ವಿತರಣಾ ಸೇವೆಗಳನ್ನು ಬಿಡುಗಡೆ ಮಾಡಬಹುದು. 

ಕೆಲವು ತಿಂಗಳುಗಳ ಹಿಂದೆ ಸ್ವಿಗ್ಗಿ ಇನ್‌ಸ್ಟಾಮಾರ್ಟನ್ನು ಪ್ರಾರಂಭಿಸಿದ ನಂತರ, ಜೊಮಾಟೊ ಬ್ಲಿಂಕಿಟ್‌ನಲ್ಲಿ ಹೂಡಿಕೆ ಮಾಡಿತು (ಹಿಂದೆ ಇದನ್ನು ಗ್ರೋಫರ್ಸ್ ಎಂದು ಕರೆಯಲಾಗುತ್ತಿತ್ತು). Blinkit, ಮತ್ತೊಂದು 10-ನಿಮಿಷದ ದಿನಸಿ ವಿತರಣಾ ಸೇವೆಯಾಗಿದ್ದು, ಅದರ 10-ನಿಮಿಷದ ದಿನಸಿ ವಿತರಣಾ ಸೇವೆಗಾಗಿ ದೇಶಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಆದಾಗ್ಯೂ, ಇನ್‌ಸ್ಟಾಮಾರ್ಟಗೆ  ಭಿನ್ನವಾಗಿ, ಇದು ಕಾರ್ಟ್ ಬೆಲೆ ಮೇಲೆ ಪ್ರತಿ ಆರ್ಡರ್‌ಗೆ 9 ರೂಗಳ ಶುಲ್ಕವನ್ನು ವಿಧಿಸುತ್ತದೆ.

Latest Videos
Follow Us:
Download App:
  • android
  • ios