Asianet Suvarna News Asianet Suvarna News

ಸೊಪ್ಪು ಮಾರುವ ವಿದ್ಯಾರ್ಥಿನಿಗೆ ಟ್ಯಾಬ್‌ ಕೊಡಿಸಿದ ಸಿಎಂ

* ಹೊಸ ಟ್ಯಾಬ್‌ ಖರೀದಿಸಲು ಸೊಪ್ಪು ಮಾರುತ್ತಿದ್ದ ವಿದ್ಯಾರ್ಥಿನಿ
* ವಿದ್ಯಾರ್ಥಿನಿಗೆ ಟ್ಯಾಬ್‌ ಮತ್ತು ಆರ್ಥಿಕ ನೆರವು ನೀಡುವಂತೆ ಸೂಚಿಸಿದ್ದ ಸಿಎಂ 
* ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ ವಿದ್ಯಾರ್ಥಿನಿಯ ತಂದೆ
 

CM BS Yediyurappa Given Tab to Student in Mysuru grg
Author
Bengaluru, First Published Jul 4, 2021, 10:02 AM IST

ಮೈಸೂರು(ಜು.04): ಆನ್‌ಲೈನ್‌ ಕ್ಲಾಸಿಗಾಗಿ ಲ್ಯಾಪ್‌ಟಾಪ್‌ ಖರೀದಿಸಲು ಸೊಪ್ಪು ಮಾರುತ್ತಿದ್ದ ಬಡ ವಿದ್ಯಾರ್ಥಿನಿಯ ಆರ್ಥಿಕ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಂದಿಸಿದ್ದಾರೆ.

ಇಲ್ಲಿನ ನಿವಾಸಿ ಹನುಮಂತು ಎಂಬವರ ಪುತ್ರಿ 10ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ಆನ್‌ಲೈನ್‌ ಕ್ಲಾಸ್‌ಗೆ ಬಳಸುತ್ತಿದ್ದ ಮೊಬೈಲ್‌ ರಿಪೇರಿಗೆ ಒಳಗಾದ್ದರಿಂದ ಹೊಸ ಟ್ಯಾಬ್‌ ಖರೀದಿಸಲು ನಾಲ್ಕು ದಿನದಿಂದ ತ್ರಿವೇಣಿ ವೃತ್ತದಲ್ಲಿ ಸೊಪ್ಪು ಮಾರುತ್ತಿದ್ದಳು. 

ಗ್ರಾಮೀಣ ಮಕ್ಕಳಿಗೆ ಮೊಬೈಲ್ ಇಲ್ಲ; ಆನ್‌ಲೈನ್ ಶಿಕ್ಷಣವೂ ಸಿಗುತ್ತಿಲ್ಲ: ಸಮೀಕ್ಷಾ ವರದಿ!

ಈ ವಿಷಯ ತಿಳಿದ ಯಡಿಯೂರಪ್ಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ಅವರಿಗೆ ಟ್ಯಾಬ್‌ ಮತ್ತು ಆರ್ಥಿಕ ನೆರವು ನೀಡುವಂತೆ ಸೂಚಿಸಿದ್ದರು. ಅದರಂತೆ ವಿದ್ಯಾರ್ಥಿನಿ ಕೀರ್ತನಾಗೆ ನೆರವಾಗಿದ್ದಾರೆ. ಆಕೆಯ ತಂದೆ ಎಲೆಕ್ಟ್ರಿಕ್‌ ಕೆಲಸ ಮಾಡುತ್ತಾರೆ. ತಾಯಿ ನಿಂಗಮ್ಮ ಗೃಹಿಣಿ. ಲಾಕ್‌ಡೌನ್‌ನಿಂದಾಗಿ ತಂದೆಗೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದರಿಂದ ಅನಿವಾರ್ಯವಾಗಿ ಕೀರ್ತನ ಸೊಪ್ಪು ಮಾರಬೇಕಾಯಿತು.
 

Follow Us:
Download App:
  • android
  • ios