*ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಿಂದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಣೆ*ಆರೋಗ್ಯಕ್ಕೆ ಮಹತ್ವದ ಕಾಣಿಕೆಯನ್ನು ನೀಡುತ್ತಿರುವ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಯತ್ನ* MyGov ಪೋರ್ಟಲ್‌ನಲ್ಲಿ ಈ ಆನ್‌ಲೈನ್ ಕ್ವಿಜ್ ಸ್ಪರ್ಧೆ ನಡೆಯಲಿದೆ, ಭಾಗವಹಿಸಿದವರಿಗೆ ಪ್ರಮಾಣ ಪತ್ರ ಸಿಗಲಿದೆ
ಉತ್ತಮ ಆರೋಗ್ಯದ ಜೀವನಕ್ಕೆ ಸಿರಿಧಾನ್ಯ (MILLETS)ಗಳ ಬಳಕೆ ಅತ್ಯವಶ್ಯಕ ಸಿರಿಧಾನ್ಯಗಳೆಂದರೆ ರಾಗಿ, ನವಣೆ, ಸಾಮೆ, ಆರ್ಕ, ಬರಗು, ಕೊರಲೆ, ಸಜ್ಜೆ ಮುಂತಾದವುಗಳು. ನಮ್ಮ ಪೂರ್ವಿಕರು ಆಹಾರದಲ್ಲಿ ಬಳಸುತ್ತಿದ್ದರು, ಇವುಗಳಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ರಾಸಾಯನಿಕಯುಕ್ತ ಆಹಾರ ಮತ್ತು ಜಂಕ್‍ಫುಡ್‍ಗಳ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಸ್ಥೂಲಕಾಯ, ಹೃದಯಸಂಬಂಧಿ ಕಾಯಿಲೆಗಳು ಸೇರಿದಂತೆ ಹಲವಾರು ಸಮಸ್ಯೆಗಳು ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಸುಧಾರಣೆಯಲ್ಲಿ ಕ್ರಾಂತಿಯಾಗಬೇಕೆಂದರೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗಬೇಕು ಎಂಬ ಮಾತುಗಳು ಕೇಳಿಬರ್ತಾನೆ ಇವೆ. ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡೋರು, ಸೆಲೆಬ್ರಿಟಿಗಳು ಮಿಲೆಟ್ಸ್ ಅಥವಾ ಸಿರಿಧಾನ್ಯಗಳ ಮೊರೆ ಹೋಗಿದ್ದಾರೆ. ಆರೋಗ್ಯ ರಕ್ಷಣೆ ಹಾಗೂ ತೂಕ ಇಳಿಕೆಗೆ ಮಿಲೆಟ್ಸ್ ಹೆಚ್ಚು ಸಹಕಾರಿ. ಅಗಾಧ ಪೋಷಕಾಂಶ ಹೊಂದಿರುವ ಸಿರಿಧಾನ್ಯಗಳನ್ನ ಶಾಲಾ ಹಂತದಿಂದಲೇ ಪರಿಚಯಿಸುವ ಪ್ರಯತ್ನಗಳು ನಡೀತಿವೆ. ಈ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಮಕ್ಕಳಿಗೆ ಮಿಲೆಟ್ಸ್ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಅದಕ್ಕಾಗಿ ‘ದಿ ಗುಡ್‌ನೆಸ್ ಆಫ್ ಮಿಲೆಟ್ಸ್ ಕ್ವಿಜ್ (The Goodness of Millets Quiz)’ ಎಂಬ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ. MyGov ಪೋರ್ಟಲ್‌ನಲ್ಲಿ ಈ ಆನ್‌ಲೈನ್ ಕ್ವಿಜ್ ಸ್ಪರ್ಧೆ ನಡೆಯಲಿದೆ. ಕುರಿತು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಸಿರಿಧಾನ್ಯಗಳ ಅರ್ಹತೆ ಮತ್ತು ಅವುಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಇದರಲ್ಲಿ ಪ್ರಶ್ನೆಗಳನ್ನು ಕೆಳಲಾಗುತ್ತದೆ.
ಮನೆಯಲ್ಲೇ ಕಲಿಸಲು ಮಕ್ಕಳಿಗೆ ವರವಾದ ಟಾಪ್ ಪೆರೇಂಟ್ App
ಸಿರಿಧಾನ್ಯ ಎಂದು ಕರೆಯಲ್ಪಡುವ ಒಂದು ವರ್ಗದ ಸಣ್ಣ ಧಾನ್ಯಗಳು ಇವಾಗಿದ್ದು, ಆಂಟಿಆಕ್ಸಿಡೆಂಟ್, ಪ್ರಮುಖ ಕೊಬ್ಬಿನಾಮ್ಲಗಳು, ಜೀವಸತ್ವಗಳು ಮತ್ತು ಖನಿಜವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಸಿರಿಧಾನ್ಯಗಳು ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ರೋಗಗಳ ನಿರ್ಮೂಲನೆಗೆ ಸಹಾಯ ಮಾಡುತ್ತದೆ. ಗುಡ್‌ನೆಸ್ ಆಫ್ ಮಿಲೆಟ್ಸ್ (The Goodness of Millets Quiz) ರಸಪ್ರಶ್ನೆಯು ಶಾಲೆಗಳಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅಕ್ಟೋಬರ್ 6 ರಂದು ಆನ್‌ಲೈನ್‌ನಲ್ಲಿ quiz.mygov.in ನಲ್ಲಿ ಪ್ರಾರಂಭವಾಗಿರೋ ಗುಡ್‌ನೆಸ್ ಆಫ್ ಮಿಲೆಟ್ಸ್ ಕ್ವಿಜ್ ಅಕ್ಟೋಬರ್ 31 ರವರೆಗೆ ನಡೆಯಲಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ (United Nations General Assembly) ನಿರ್ಣಯದಲ್ಲಿ ಅಂತಾರಾಷ್ಟ್ರೀಯ ಮಿಲೆಟ್ಸ್ (International Year of Millets) ವರ್ಷವನ್ನು ಘೋಷಿಸಲಾಗಿದೆ. ಮಿಲೆಟ್ಸ್ ಆರೋಗ್ಯ ಪ್ರಯೋಜನಗಳು ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲಿನ ಸಂದರ್ಭಗಳಲ್ಲಿ ಉತ್ಪಾದನೆಗೆ ಅವುಗಳ ಹೊಂದಾಣಿಕೆಯ ಬಗ್ಗೆ ಸಾರ್ವಜನಿಕ ಜ್ಞಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಸಿರಿ ಧಾನ್ಯಗಳು ಹೇಗೆ ಆರೋಗ್ಯಕ್ಕೆಅತ್ಯುಪಯುಕ್ತವಾಗಿವೆ ಎಂಬುದನ್ನು ಪ್ರಚುರಪಡಿಸಲು ಈ ಕ್ವಿಜ್ ಹೆಚ್ಚು ನೆರವಾಗಲಿದೆ. ಅದರಲ್ಲೂ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿಯನ್ನು ಉಂಟು ಮಾಡಿದರೆ, ಅವರು ತಮ್ಮ ಆರೋಗ್ಯಕ್ಕೆ ಸಿರಿಧಾನ್ಯಗಳ ನೀಡುವ ಕೊಡುಗೆಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಸರ್ಕಾರ ಕೈಗೊಂಡಿರುವ ಅತ್ಯುತ್ತಮ ಕಾರ್ಯಕ್ರಮ ಎಂದು ಹೇಳಬಹುದು.
ಪ್ರತಿಭಾವಂತ ವಿದ್ಯಾರ್ಥಿಗಳೇ... ಈ ಸ್ಕಾಲರ್‌ಶಿಪ್‌ಗಳನ್ನು ಗಮನಿಸಿ!
ಶಿಕ್ಷಣ ಸಚಿವಾಲಯದ ರಸಪ್ರಶ್ನೆಯಲ್ಲಿ ಭಾಗವಹಿಸಲು, ಅಭ್ಯರ್ಥಿಗಳು ತಮ್ಮ ಹೆಸರುಗಳು, ಹುಟ್ಟಿದ ದಿನಾಂಕಗಳು, ಪತ್ರವ್ಯವಹಾರದ ವಿಳಾಸ, ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ. ಗುಡ್‌ನೆಸ್ ಆಫ್ ಮಿಲೆಟ್ಸ್ ಕ್ವಿಜ್‌ನ (The Goodness of Millets Quiz) ಅವಧಿಯು ಐದು ನಿಮಿಷಗಳಾಗಿರುತ್ತದೆ. ಇದರಲ್ಲಿ ಗರಿಷ್ಠ 20 ಪ್ರಶ್ನೆಗಳಿಗೆ ಉತ್ತರಿಸಬಹುದು. ತಪ್ಪು ಉತ್ತರಕ್ಕೆ ಋಣಾತ್ಮಕ ಗುರುತು ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವವರು ರಸಪ್ರಶ್ನೆಯ ಕೊನೆಯ ದಿನಾಂಕದ ನಂತರ ತಮ್ಮ ಅಂಕಗಳನ್ನು ವೀಕ್ಷಿಸಬಹುದು. MyGov ಪೋರ್ಟಲ್ ಪ್ರಕಾರ, ಇದರಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
