Asianet Suvarna News Asianet Suvarna News

ಮನೆಯಲ್ಲೇ ಕಲಿಸಲು ಮಕ್ಕಳಿಗೆ ವರವಾದ ಟಾಪ್ ಪೆರೇಂಟ್ App

*ಕೋವಿಡ್‌ ಸಾಂಕ್ರಾಮಿಕದಿಂದಾಗಿ ಲಕ್ಷಾಂತರ ಮಕ್ಕಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ
*ಮನೆಯಲ್ಲಿ ತಮ್ಮ ಮಕ್ಕಳಿಗೆ ಕಲಿಕೆಯನ್ನು ಸುಲಭವಾಗಿಸಲು ಪೋಷಕರಿಗೆ ಈ ಆಪ್‌ನಿಂದ ನೆರವು
*ಟಾಪ್ ಪೆರೇಂಟ್ ಕಲಿಕೆ ಮತ್ತು ಪೋಷಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ
 

Top Parent App is helps to children learn at home by their parents
Author
First Published Oct 13, 2022, 1:35 PM IST

ಎಲ್ಲರಿಗೂ ಶಿಕ್ಷಣ ಸಿಗಲೇಬೇಕು. ಶಿಕ್ಷಣ (Education) ಪಡೆಯೋದು ಪ್ರತಿಯೊಬ್ಬ ಮಗುವಿನ ಮೂಲಹಕ್ಕು. ಕೆಲವೊಮ್ಮೆ ಎದುರಾಗುವ ಅಡೆ- ತಡೆಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕೋವಿಡ್ (Covid-19) ಸಾಂಕ್ರಾಮಿಕ ಸಂದರ್ಭದಲ್ಲಿ ದೇಶದಲ್ಲಿ ಲಕ್ಷಾಂತರ ಮಂದಿ ಮಕ್ಕಳ ಮೇಲೆ ಕಲಿಕೆಯಿಂದ ದೂರ ಉಳಿದಿದ್ರು. ಇದರಿಂದ ಸಾಕಷ್ಟು ದುಷ್ಪಾರಿಣಾಮ ಆಗಿದೆ. ಕೊರೊನಾ ವೇಳೆ ಶಾಲೆ(Schools)ಗಳು ಮುಚ್ಚಿದ್ರಿಂದ ಭಾರತದಲ್ಲಿ ಸುಮಾರು 180 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿತ್ತು. ಇಂಥ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ತಂತ್ರಜ್ಞಾನ. ಟೆಕ್ನಾಲಜಿಯನ್ನ ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಗಳಾಯ್ತು. ಆ ಸಂದರ್ಭದಲ್ಲಿ ಪೋಷಕರನ್ನು ಗಮನದಲ್ಲಿಟ್ಟುಕೊಂಡು ಚಾಲ್ತಿಗೆ ಬಂದ ಟೆಕ್-ಚಾಲಿತ ಪ್ಲಾಟ್‌ಫಾರ್ಮ್  ಇವತ್ತು ಸಖತ್ ಫೇಮಸ್ ಆಗ್ಬಿಟ್ಟಿದೆ. ಅದುವೇ ಟಾಪ್ ಪೇರೆಂಟ್ (Top Parent) ಆ್ಯಪ್. ಮನೆಯಲ್ಲಿ ಮಕ್ಕಳಿಗೆ ಕಲಿಸಲು ಪೋಷಕರಿಗೆ ಅಧಿಕಾರ ನೀಡುವ ಆ್ಯಪ್ ಇದಾಗಿದೆ. 

2020 ರಲ್ಲಿ ಸ್ಥಾಪನೆಯಾದ ಟೆಕ್-ಚಾಲಿತ ಪ್ಲಾಟ್‌ಫಾರ್ಮ್ ಟಾಪ್ ಪೇರೆಂಟ್ ಆ್ಯಪ್, ಮಕ್ಕಳ ಸಮಸ್ಯೆಯನ್ನು ಪರಿಹರಿಸಲು ಅಸ್ತಿತ್ವಕ್ಕೆ ಬಂತು. ಅದು ಪೋಷಕರಿಗೆ ಮಕ್ಕಳೊಂದಿಗೆ ತೊಡಗಿಸಿಕೊಳ್ಳಲು ಅಧಿಕಾರ ನೀಡುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಮಕ್ಕಳು ಪ್ರಸಕ್ತ ವರ್ಷ ಪಠ್ಯಕ್ರಮದ ಕಲಿಕೆಯನ್ನು ಕಳೆದುಕೊಂಡಿದ್ದಾರೆ. 92 ಪ್ರತಿಶತ ಮಕ್ಕಳು ಗ್ರಹಿಕೆಯೊಂದಿಗೆ ಓದುವಂತಹ ಕನಿಷ್ಠ ಒಂದು ಮೂಲಭೂತ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. 82 ಪ್ರತಿಶತದಷ್ಟು ಮಕ್ಕಳು ಮೂಲ ಸಂಕಲನ ಮತ್ತು ಗುಣಾಕಾರವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕಳೆದುಕೊಂಡಿರುವುದರಿಂದ ಈ ಹಿಂಜರಿಕೆಯು ಆತಂಕಕಾರಿಯಾಗಿದೆ.

ಲೋರಿಯಲ್‌ನಿಂದ 2.5 ಲಕ್ಷ ರೂ. ಸ್ಕಾಲರ್‌ಶಿಪ್, ಅಪ್ಲೈ ಮಾಡಿ

ಈ ಸಮಸ್ಯೆಯನ್ನು ಎದುರಿಸಲು ಶಾಶ್ವತಿ ಬ್ಯಾನರ್ಜಿಯವರು 2020 ರಲ್ಲಿ ಟಾಪ್ ಪೇರೆಂಟ್ (Top Parent)  ಸ್ಥಾಪಿಸಿದರು. ಇದು ಮಕ್ಕಳೊಂದಿಗೆ ಗಾಢವಾಗಿ ಬೆರೆಯಲು ಮತ್ತು ಮನೆಯಲ್ಲಿ ಕಲಿಕೆಯನ್ನು ಹೆಚ್ಚಿಸಲು ಪೋಷಕರಿಗೆ ಅಧಿಕಾರ ನೀಡುವ ತಂತ್ರಜ್ಞಾನ ಆಗಿದೆ. ಇದನ್ನು ಹೋಮ್ ಲರ್ನಿಂಗ್ ಅಪ್ಲಿಕೇಶನ್ ಆಗಿ ಪರಿವರ್ತಿಸಲಾಗಿದೆ. ಬಳಸಲು ಸುಲಭವಾದ, ಪೋಷಕರನ್ನು ಎದುರಿಸುವ ಅಪ್ಲಿಕೇಶನ್ ಅನ್ನು ತಮ್ಮ ಮಕ್ಕಳಿಗೆ ಕಲಿಸಲು ಪೋಷಕರನ್ನು ಸಶಕ್ತಗೊಳಿಸಲು ಮತ್ತು ಸಜ್ಜುಗೊಳಿಸಲು ನೆರವಾಗುವಂತೆ ಈ ಆ್ಯಪ್ ಅನ್ನು ರೂಪಿಸಲಾಗಿದೆ. 

ಟಾಪ್ ಪೇರೆಂಟ್ ಆ್ಯಪ್, ಮಗುವಿನ ಕಲಿಕೆ ಮತ್ತು ಪೋಷಕರನ್ನು ತೊಡಗಿಸಿಕೊಳ್ಳುವ  ಪ್ರಕ್ರಿಯೆಯಲ್ಲಿ ಸೇತುವೆಯಾಗಿ ಕೆಲಸ ಡುತ್ತದೆ.  ಇದು ಉಚಿತ ಮೊಬೈಲ್ ಅಪ್ಲಿಕೇಶನ್ ಆಗಿರುವುದರಿಂದ, ಇದು ಕಡಿಮೆ-ಆದಾಯದ ಸಮುದಾಯಗಳ ಪೋಷಕರನ್ನು ಭಾಷೆ, ಸಂಪನ್ಮೂಲಗಳು ಮತ್ತು ತಂತ್ರಗಳೊಂದಿಗೆ ತಮ್ಮ ಚಿಕ್ಕ ಮಕ್ಕಳನ್ನು (3-8 ವರ್ಷಗಳು) ತಲುಪಲು ಸಾಧ್ಯವಾಗಿದೆ. ಕಲಿಕೆಯ ನಷ್ಟವನ್ನು ಸರಿದೂಗಿಸಲು ಹಾಗೂ ಶಾಲೆ ಮತ್ತು ಜೀವನಕ್ಕೆ ತಯಾರಾಗಲು ಸಜ್ಜುಗೊಳಿಸುತ್ತದೆ.

SBI ಬ್ಯಾಂಕಿನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಅಪ್ಲೈ ಮಾಡಿ

ಈ ಅಪ್ಲಿಕೇಶನ್ ಬಹು ಕಲಿಕಾ ವ್ಯವಸ್ಥೆಗಳನ್ನು ನಿಯೋಜಿಸುತ್ತದೆ.ಇದು ವೇಗವಾಗಿ, ಆಳವಾದ ಮತ್ತು ಹೆಚ್ಚು ಪರಿಣಾಮಕಾರಿ ಕಲಿಕೆಗೆ ಕಾರಣವಾಗುತ್ತದೆ. ಪಠ್ಯಕ್ರಮವು ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಗಾಗಿ ರಾಷ್ಟ್ರೀಯ ಮಂಡಳಿ (NCERT) ಚೌಕಟ್ಟನ್ನು ಬಳಸುತ್ತದೆ. ಇದು ಸಾಮರ್ಥ್ಯ-ಆಧಾರಿತವಾಗಿದೆ. ಅಂದರೆ ಪ್ರತಿಯೊಂದು ಸಾಮರ್ಥ್ಯವನ್ನು ಬೈಟ್-ಗಾತ್ರದ ಮಲ್ಟಿಮೀಡಿಯಾ ಸಂಪನ್ಮೂಲಗಳ ಮೂಲಕ ನೀಡಲಾಗುತ್ತದೆ. ವೀಡಿಯೊಗಳು, ವರ್ಕ್‌ಶೀಟ್‌ಗಳು ಮತ್ತು ನಿರಂತರ ಮೌಲ್ಯಮಾಪನಗಳನ್ನು ಈ ಟಾಪ್ ಪೇರೆಂಟ್ ಆ್ಯಪ್ ಒಳಗೊಂಡಿದೆ. ಇಲ್ಲಿಯವರೆಗೆ, ಟಾಪ್ ಪೇರೆಂಟ್ ಮೊಬೈಲ್ ಅಪ್ಲಿಕೇಶನ್ 2.8 ಲಕ್ಷ ಡೌನ್‌ಲೋಡ್‌ಗಳನ್ನು ದಾಟಿದೆ ಮತ್ತು 1.4 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಸರಾಸರಿ 26 ನಿಮಿಷ ಕಾಲ ಹೆಚ್ಚಿನ ಬಳಕೆದಾರರು ಸಕ್ರಿಯರಾಗಿ ಇರುತ್ತಾರೆ. ಇದರ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಹೆಚ್ಚಿನ ಪೋಷಕರು ಮತ್ತು ಮಕ್ಕಳು ತಮ್ಮ ಕಲಿಕೆಯ ಪ್ರಯಾಣದಲ್ಲಿ ಪ್ರಯೋಜನ ಪಡೆಯುವುದು ಈ ಆ್ಯಪ್ ನ ಗುರಿಯಾಗಿದೆ.

Follow Us:
Download App:
  • android
  • ios