Chikkaballapur: ಸರ್ಕಾರಿ ಬಿ.ಇಡಿ ಕಾಲೇಜಿಗೆ ಸುವರ್ಣ ಸಂಭ್ರಮ
70ರ ದಶಕದಲ್ಲಿಯೆ ಸ್ಥಾಪಿತವಾಗಿ ಸುಧೀರ್ಘ 50 ವಸಂತಗಳನ್ನು ಪೂರೈಸಿ ಕರ್ನಾಟಕ ಮಾತ್ರವಲ್ಲದೇ ನೆರೆಯ ಕೇರಳ, ಆಂಧ್ರ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡಿ ಶಿಕ್ಷಕರಾಗಿ ರೂಪಿಸಿದ ಹೆಗ್ಗಳಿಕೆ ಪಡೆದಿರುವ ಜಿಲ್ಲೆಯ ಚಿತ್ರಾವತಿ ಸಮೀಪ ಕಾರ್ಯನಿರ್ವಹಿಸುತ್ತಿರುವ ವಿಶ್ವ ವಿದ್ಯಾಲಯ ಶಿಕ್ಷಣ ಕಾಲೇಜಿಗೆ ಈಗ ಸುವರ್ಣ ಮಹೋತ್ಸವ ಸಂಭ್ರಮ.
ಚಿಕ್ಕಬಳ್ಳಾಪುರ (ಅ.07): 70ರ ದಶಕದಲ್ಲಿಯೆ ಸ್ಥಾಪಿತವಾಗಿ ಸುಧೀರ್ಘ 50 ವಸಂತಗಳನ್ನು ಪೂರೈಸಿ ಕರ್ನಾಟಕ ಮಾತ್ರವಲ್ಲದೇ ನೆರೆಯ ಕೇರಳ, ಆಂಧ್ರ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡಿ ಶಿಕ್ಷಕರಾಗಿ ರೂಪಿಸಿದ ಹೆಗ್ಗಳಿಕೆ ಪಡೆದಿರುವ ಜಿಲ್ಲೆಯ ಚಿತ್ರಾವತಿ ಸಮೀಪ ಕಾರ್ಯನಿರ್ವಹಿಸುತ್ತಿರುವ ವಿಶ್ವ ವಿದ್ಯಾಲಯ ಶಿಕ್ಷಣ ಕಾಲೇಜಿಗೆ ಈಗ ಸುವರ್ಣ ಮಹೋತ್ಸವ ಸಂಭ್ರಮ.
ಜಿಲ್ಲೆಯಲ್ಲಿ ಜನತೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಡತನ ಎದುರಿಸಿದರೂ ಬುದ್ದಿವಂತರಿಗೆ, ವಿದ್ಯಾವಂತರಿಗೆ ಕೊರತೆ ಇಲ್ಲ ಎನ್ನುವ ರೀತಿಯಲ್ಲಿ ಅಂದಿನ ಚಿಕ್ಕಬಳ್ಳಾಪುರ ಪುರಸಭೆ ಆಡಳಿತ ಮಂಡಳಿ ದೂರದೃಷ್ಟಿಇಟ್ಟುಕೊಂಡು 1972 ರಲ್ಲಿ ಸ್ಥಾಪಿಸಿದ ಪುರಸಭೆ ಬಿ.ಇಡಿ ಕಾಲೇಜ್ ಅಕ್ಷರದ ಹಸಿವು ಬಯಸಿ ಬಂದವರಿಗೆ ಜ್ಞಾನಧಾರೆ ಎರೆದು ಶಿಕ್ಷಕರಾಗಿ, ಉನ್ನತ ಅಧಿಕಾರಿಗಳಾಗಿ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಲೆಕ್ಕವಿಲ್ಲ.
ಅ.10ರಿಂದ ರಾಜಕಾಲುವೆ ಒತ್ತುವರಿ ತೆರವು ಕಾರ‍್ಯಕ್ಕೆ ಚುರುಕು: ಪಾಲಿಕೆ
ಬೆಂಗಳೂರು ವಿವಿ ವಿಭಜನೆಗೊಂಡು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಲೇಜುಗಳನ್ನು ಸೇರಿಸಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ಬಿ.ಇಡಿ ಕಾಲೇಜ್ ಬೆಂಗಳೂರು ಉತ್ತರ ವಿವಿಗೆ ಸೇರಿತು. ಗುಣಮಟ್ಟದ ಶಿಕ್ಷಣದ ಹಿನ್ನಲೆಯಲ್ಲಿ ಪ್ರತಿ ವರ್ಷ ದಾಖಲಾತಿಗೆ ಒತ್ತಡ ಇದ್ದೇ ಇದೆ. ಶೇ.100 ರಷ್ಟುಫಲಿತಾಂಶ ಪ್ರತಿ ವರ್ಷ ದಾಖಲಿಸುವ ಮೂಲಕ ಜಿಲ್ಲೆಯ ಸರ್ಕಾರಿ ಬಿ.ಇಡಿ ಕಾಲೇಜ್ ರಾಜ್ಯದ ಗಮನ ಸೆಳೆದಿದೆ. ಆರಂಭದಲ್ಲಿ ನಾಲ್ಕೈದು ಶೆಡ್‌ನಲ್ಲಿ ಆರಂಭಗೊಂಡರೂ ಇಂದು ಚಿತ್ರಾವತಿ ಬಳಿ ತನ್ನದೇ ಆದ ಸ್ವಂತ ಸುಸಜ್ಜಿತ ಕಟ್ಟಡ ಸೇರಿ ಮೂಲ ಸೌಕರ್ಯಗಳನ್ನು ಹೊಂದಿದೆ.
ಉತ್ತಮ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೊಂದಿರುವ ಕಾಲೇಜ್, ಇಲ್ಲಿಯವರೆಗೂ 5000 ಸಾವಿಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಅಧ್ಯಯನಕ್ಕೆ ವಿಫುಲವಾದ ಅವಕಾಶಗಳು ಇಲ್ಲಿದ್ದು ಒಂದು ಕಾಲಕ್ಕೆ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದ ನೂರಾರು ವಿದ್ಯಾರ್ಥಿಗಳು ಇಲ್ಲಿ ಓದಿ ಶಿಕ್ಷಕರಾಗಿ ಮಾತ್ರವಲ್ಲದೇ ಕೆಎಎಸ್, ಐಎಎಸ್ ಪರೀಕ್ಷೆಗಳಲ್ಲಿ ನಂತ ನಾಗರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.
ಕಾಲೇಜಿನಲ್ಲಿ ಹಾಸ್ಟಲ್ ಉಪನ್ಯಾಸಕರ ಕೊರತೆ ಇದೆ: ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಚಿತ್ರಾವತಿ ಐತಿಹಾಸಿಕ ಸರ್ಕಾರಿ ಬಿ.ಇಡಿ ಕಾಲೇಜಿಗೆ ಸುಸಜ್ಜಿತ ಕಟ್ಟಡ ಇದ್ದರೂ ಅಗತ್ಯಕ್ಕೆ ತಕ್ಕಂತೆ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಅತಿಥಿ ಉಪನ್ಯಾಸಕರು ಹೆಚ್ಚಾಗಿದ್ದು ಖಾಯಂ ಉಪನ್ಯಾಸಕರ ಕೊರತೆ ಇದೆ. ಜೊತೆಗೆ ಬಿ.ಇಡಿ ಓದುವ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ನಿಲಯ ಸೌಲಭ್ಯ ಸರ್ಕಾರ ಕಲ್ಪಿಸಬೇಕಿದೆ. ಹೆದ್ದಾರಿ ಪಕ್ಕದಲ್ಲಿರುವುದರಿಂದ ಕಾಲೇಜು ಬಳಿ ಮೇಲು ಸೇತುವೆ ನಿರ್ಮಿಸುವುದು ತುರ್ತಾ ಆಗಬೇಕಿದೆ ಎನ್ನುತ್ತಾರೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕಸಾಪ ಜಿಲ್ಲಾಧ್ಯಕ್ಷರಾಗಿರುವ ಡಾ.ಕೋಡಿರಂಗಪ್ಪ.
ಮಲ್ಲೇಶ್ವರದಲ್ಲಿ ಮಿನಿ ಜಯದೇವ ಆಸ್ಪತ್ರೆ ಶುರು
ಅ.10. 11ಕ್ಕೆ ಸುವರ್ಣ ಮಹೋತ್ಸವ ಕಾರ್ಯಕ್ರಮ: ಅ.10. 11 ರಂದು 2 ದಿನಗಳ ಕಾಲ ಚಿತ್ರಾವತಿ ವಿಶ್ವ ವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಮೊದಲ ದಿನ ಕಾರ್ಯಕ್ರಮವನ್ನು ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದು, ಉನ್ನತಶಿಕ್ಷಣ ಸಚಿವ ಅಶ್ವತ್ಥನಾರಾಯಣ್, ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಆರೋಗ್ಯ ಸಚಿವ ಸುಧಾಕರ್ ಸೇರಿ ಜಿಲ್ಲೆಯ ಚುನಾಯಿತ ಜನಪ್ರತಿನಿದಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅ.10 ರಂದು ಮಧ್ಯಾಹ್ನ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಭಾಗವಾಗಿ ಉನ್ನತ ಶಿಕ್ಷಣ ಕುರಿತು ಚರ್ಚೆ, ಸಂವಾದ, ವಿಚಾರ ಸಂಕಿರಣ ನಡೆಯಲಿದ್ದು, ಅ.11 ರಂದು ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಸಮಾರೋಪದಲ್ಲಿ ನಿಡುಮಾಮಿಡಿ ಶ್ರೀಗಳು, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಭರದ ತಯಾರಿ ನಡೆದಿದೆ.