ನೀಟ್‌ ಫಲಿತಾಂಶ: ಬೀದ​ರ್‌ನ ಶಾಹೀನ್‌ ವಿದ್ಯಾರ್ಥಿ ಕಲಬುರಗಿ ವಿಭಾಗಕ್ಕೆ ಟಾಪರ್‌..!

ಈ ಬಾರಿಯ ನೀಟ್‌ನಲ್ಲಿ ಶಾಹೀನ್‌ವಿದ್ಯಾರ್ಥಿ ಆದರ್ಶ ರಾಜಕುಮಾರ್‌ಕಲಬುರಗಿ ವಿಭಾಗಕ್ಕೆ ಮೊದಲಿಗರಾಗಿ ಗಮನ ಸೆಳೆದಿದ್ದಾರೆ. ಶಾಹೀನ್‌ಕಾಲೇ​ಜಿನ 35 ವಿದ್ಯಾರ್ಥಿಗಳು 650ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. 100 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 

Bidars Shaheen College Student Adarsh Topper in Kalaburagi Division grg

ಬೀದರ್‌(ಜೂ.15): ಇಲ್ಲಿನ ಶಾಹೀನ್‌ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದರ್ಶ ರಾಜ್‌ಕುಮಾರ್‌ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಯಲ್ಲಿ ಕಲಬುರಗಿ ವಿಭಾಗಕ್ಕೆ ಟಾಪರ್‌ಆಗಿ ಹೊರ ಹೊಮ್ಮಿದ್ದಾರೆ. 720 ಅಂಕಗಳ ಪೈಕಿ 696 ಅಂಕ ಪಡೆದಿರುವ ಆದರ್ಶ, ಅಖಿಲ ಭಾರತ ಮಟ್ಟದಲ್ಲಿ 368ನೇ ರ‍್ಯಾಂಕ್‌ ಗಳಿಸಿದ್ದಾರೆ.

ಈ ಬಾರಿಯ ನೀಟ್‌ನಲ್ಲಿ ಶಾಹೀನ್‌ ವಿದ್ಯಾರ್ಥಿ ಆದರ್ಶ ರಾಜಕುಮಾರ್‌ ಕಲಬುರಗಿ ವಿಭಾಗಕ್ಕೆ ಮೊದಲಿಗರಾಗಿ ಗಮನ ಸೆಳೆದಿದ್ದಾರೆ. ಶಾಹೀನ್‌ ಕಾಲೇ​ಜಿನ 35 ವಿದ್ಯಾರ್ಥಿಗಳು 650ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. 100 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಬೀದರ್‌ನ ಮುಖ್ಯ ಶಾಖೆ, ದೆಹಲಿ, ಮುಂಬೈ, ನಾಂದೇಡ್‌, ಔರಂಗಾಬಾದ್‌, ಮಾಳೆಗಾಂವ್‌, ಭೂಪಾಲ್‌, ಹುಬ್ಬಳ್ಳಿ, ಕಲಬುರಗಿ ಮೊದಲಾದ ಶಾಖೆಗಳಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ.
ಶಾಹೀನ್‌ಕಾಲೇಜಿನ ಶೀಮಾ ಫಿರದೋಸ್‌ 567ನೇ ರ‍್ಯಾಂಕ್‌(695 ಅಂಕ), ಆದಿತ್ಯ ನಾಮದೇವ ನಿಟ್ಟೂರೆ 942ನೇ ರ‍್ಯಾಂಕ್‌(687 ಅಂಕ), ಮಹಮ್ಮದ್‌ಓವೈಸ್‌1,193ನೇ ರ‍್ಯಾಂಕ್‌(685 ಅಂಕ), ಜಾಹೀದ್‌ಅಕ್ಮಲ್‌1,195ನೇ ರ‍್ಯಾಂಕ್‌(685 ಅಂಕ), ಅಭಿಷೇಕ್‌1,284ನೇ ರ‍್ಯಾಂಕ್‌(685 ಅಂಕ) ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಶಾಹೀನ್‌ಆಡ​ಳಿತ ಮಂಡ​ಳಿ ತಿಳಿಸಿ​ದೆ.

ಬೀದರ್‌ನ ಶಾಹೀನ್‌ ಶಾಲೆ ವಿರು​ದ್ಧದ ದೇಶ​ದ್ರೋಹ ಕೇಸು ಹೈಕೋರ್ಟಲ್ಲಿ ರದ್ದು

ಕಾಲೇಜಿನ 500 ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ದೊರೆಯುವ ನಿರೀಕ್ಷೆ ಇದೆ. ಇದು, ಕರ್ನಾಟಕದ ಒಟ್ಟು ವೈದ್ಯಕೀಯ ಸೀಟುಗಳ ಶೇ.15 ಹಾಗೂ ಭಾರತದ ಒಟ್ಟು ಸೀಟುಗಳ ಶೇ.0.8ರಷ್ಟಿದೆ. 2021ರಲ್ಲಿ ಶಾಹೀನ್‌ಕಾಲೇಜು ಸರ್ಕಾರಿ ಕೋಟಾದಡಿ 425 ಹಾಗೂ 2022ರಲ್ಲಿ 448 ವೈದ್ಯಕೀಯ ಸೀಟುಗಳನ್ನು ಗಿಟ್ಟಿಸಿತ್ತು. ಶಾಹೀನ್‌ನಲ್ಲಿ ಶಿಸ್ತು ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಶ್ರಮ ಹಾಗೂ ಪಾಲಕರ ಸಹಕಾರದಿಂದಾಗಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್‌ಖದೀರ್‌ತಿಳಿಸಿದ್ದಾರೆ.

ಸನ್ಮಾನ:

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

ಪಠ್ಯಪುಸ್ತಕ ಪರಿಷ್ಕರಣೆಗೆ ಬಿಜೆಪಿ ತೀವ್ರ ವಿರೋಧ

ಶಾಹೀನ್‌ ಜೊತೆ ನಾರಾಯಣ ಹೃದಯಾಲಯ ಒಪ್ಪಂದ

ಈ ಬಾರಿಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟುಗಳಿಸಲು ಸಾಧ್ಯವಾಗದ ಕಲ್ಯಾಣ ಕರ್ನಾಟಕದ ಕನ್ನಡ ಮಾಧ್ಯಮದ 40 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಟ್‌ ಮರು ತರಬೇತಿ ನೀಡಲು ಬೆಂಗಳೂರಿನ ನಾರಾಯಣ ಹೃದಯಾಲಯ ಶಾಹೀನ್‌ಪದವಿಪೂರ್ವ ವಿಜ್ಞಾನ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನೈತಿಕ ಹಾಗೂ ಮಾನವೀಯ ನೆಲೆಗಟ್ಟಿನ ವೈದ್ಯರನ್ನು ತಯಾರು ಮಾಡುವ ದಿಸೆಯಲ್ಲಿ ನಾರಾಯಣ ಹೃದಯಾಲಯ 40 ಬಡ ವಿದ್ಯಾರ್ಥಿಗಳ ನೀಟ್‌ ತರಬೇತಿ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆ ಬಂದಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೀದರ್‌ಹಾಗೂ ಕಲಬುರಗಿಯ ಶಾಹೀನ್‌ ಕ್ಯಾಂಪಸ್‌ನಲ್ಲಿ ನೀಟ್‌ ತರಬೇತಿ ನೀಡಲಾಗುವುದು, ನಾರಾಯಣ ಹೃದಯಾಲಯದ ಪ್ರಾಯೋಜಕತ್ವದಡಿ ತರಬೇತಿಗಾಗಿ ವಿದ್ಯಾರ್ಥಿಗಳು ಶಾಹೀನ್‌ನ ಬೀದರ್‌ಮುಖ್ಯ ಶಾಖೆ ಸಂಪರ್ಕಿಸಬಹುದು ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios