Asianet Suvarna News Asianet Suvarna News

ಪದವಿ ವಿಳಂಬದ ಬಗ್ಗೆ ಸ್ಪಷ್ಟನೆ ಕೊಟ್ಟ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ

* ಪದವಿಯ ಮೊದಲ ಸೆಮಿಸ್ಟರ್  ಪರೀಕ್ಷೆಯನ್ನು ನಡೆಸಲು ವಿಳಂಬ
* ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಯಾವುದೇ ತೊಂದರೆ ಇಲ್ಲ
* ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಯಿಂದ ಸ್ಪಷ್ಟನೆ

Bellary krishnadevaraya University VC Reacts On Degree First Sem Exams delayed rbj
Author
Bengaluru, First Published Apr 28, 2022, 8:22 PM IST

ಬಳ್ಳಾರಿ, (ಏ.28) : ‌ಪದವಿಯ ಮೊದಲ ಸೆಮಿಸ್ಟರ್  ಪರೀಕ್ಷೆಯನ್ನು ನಡೆಸಲು ವಿಳಂಬ ಮಾಡ್ತಿರೋ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿಗಳ(Students) ಶೈಕ್ಷಣಿಕ ವರ್ಷ ಅತಂತ್ರವಾಗುವ ಆತಂಕ ಎದುರಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ(National Education Policy) ಕೆಲವೊಂದಿಷ್ಟು ಗೊಂದಲದ ಹಿನ್ನೆಲೆ ಪರೀಕ್ಷೆ ವಿಳಂಬವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್. ಕಾಂ ವರದಿ ಬಿತ್ತರಿಸಿದೆ. 

ಇದರ ಬೆನ್ನಲ್ಲೇ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಪಿ ಅಲಗೂರು ಅವರು ಸುವರ್ಣ ‌ನ್ಯೂಸ್ ಗೆ ಸ್ಪಷ್ಟನೆ ನೀಡಿದ್ದು, 
ಪದವಿ ಪರೀಕ್ಷೆ ವಿಳಂಬಕ್ಕೆ ಎನ್ಇಪಿ ಕಾರಣವಲ್ಲ ಶೀಘ್ರದಲ್ಲೇ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಗೊಂದಲದಿಂದ ಪದವಿ ಪರೀಕ್ಷೆ ವಿಳಂಬ: ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಪರೀಕ್ಷೆ ವಿಳಂಬ
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಕೆಲವೊಂದಿಷ್ಟು ಗೊಂದಲದ ಹಿನ್ನೆಲೆ‌ ರಾಜ್ಯದಲ್ಲಿರುವ ವಿಶ್ವ ವಿದ್ಯಾಲಯಗಳು ಪದವಿಯ ಮೊದಲ ಸೆಮಿಸ್ಟರ್  ಪರೀಕ್ಷೆಯನ್ನು ನಡೆಸಲು ವಿಳಂಬ ಮಾಡ್ತಿರೋ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಅತಂತ್ರವಾಗುವ ಆತಂಕ ಎದುರಾಗಿದೆ.. ಮಾರ್ಚ್ ತಿಂಗಳ ಅಂತ್ಯದ ವೇಳೆಗಾಗಲೇ ಪರೀಕ್ಷೆ ಮುಗಿಯಬೇಕಿತ್ತು. ಈಗ ಏಪ್ರಿಲ್ ಮುಗಿಯೋಕೆ ಬಂದ್ರೂ ಪದೇ ಪದೇ ಪರೀಕ್ಷೆ ದಿನಾಂಕ ಮುಂದೂಡ್ತ ಇರೋದಕ್ಕೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. 

ಹೀಗಾಗಿ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿವಿ‌ ವ್ಯಾಪ್ತಿಯ‌126 ಕಾಲೇಜಿನ 26 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯಾದ್ಯಂತ ಇರೋ ಮೂರು ಲಕ್ಷ ವಿದ್ಯಾರ್ಥಿಗಳು ಪದವಿ ಪರೀಕ್ಷೆ ಬರೆಯಲಾಗದೇ ಮುಂದಿನ ಶೈಕ್ಷಣಿಕ ಭವಿಷ್ಯದ ದೊಡ್ಡ ಚಿಂತೆಯಾಗಿದೆ..

ಪರೀಕ್ಷೆಗಾಗಿ ಕಾದು ಕುಳಿತ ವಿದ್ಯಾರ್ಥಿಗಳ ಆರೋಪ
ಪದವಿ ವಿದ್ಯಾರ್ಥಿಗಳ ಮೊದಲ ಸೆಮಿಸ್ಟರ್ ನ ಪಠಕ್ರಮದ ಬೋಧನೆ ಮುಕ್ತಾಯವಾಗಿದೆ. ಮೊದಲ ಸಮಿಸ್ಟರ್ ಅವಧಿ ಸಹ ಕೊನೆಯಾಗಿದೆ. ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ. ಆದ್ರೇ ಪರೀಕ್ಷೆ ನಡೆಸಬೇಕಾದ ವಿಶ್ವ ವಿದ್ಯಾಲಯಗಕು ಪದೇ ಪದೇ ಪರೀಕ್ಷೆ ಮುಂದೂಡುತ್ತಿದೆ. ಹೌದು. ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ವಿವಿಗಳು ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಸಲು ಮೀನಾಮೇಷ ಎಣಿಸುತ್ತಿದೆ. 

ವಿಎಸ್ ಕೆ ವಿವಿ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯ 126 ಕಾಲೇಜುಗಳ ಬರೋಬ್ಬರಿ 26 ಸಾವಿರ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೇ ಈ ವಿದ್ಯಾರ್ಥಿಗಳಿಗೆ ಏಪ್ರಿಲ್ ಮೂರನೇ ವಾರ ಮುಕ್ತಾಯವಾದ್ರು ಪ್ರಥಮ ಸೆಮಿಸ್ಟರ್ ಪರೀಕ್ಷೆಗೆ ಅಧಿಕೃತ ದಿನಾಂಕ ಘೋಷಣೆಯಾಗುತ್ತಿಲ್ಲ. ಫೆಬ್ರುವರಿ ತಿಂಗಳಿನಲ್ಲೆ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಎಪ್ರಿಲ್ ಅಂತ್ಯಕ್ಕೆ ಫಲಿತಾಂಶ ಪಡೆಯಬೇಕಾಗಿದ್ದ ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಸದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. 

Follow Us:
Download App:
  • android
  • ios