ಬಿಸಿಯೂಟ ಅಲ್ಲ ಬಿಪಿ ಏರಿಸುವ ಊಟ: ಮಕ್ಕಳಿಗೆ ಸಾಂಬಾರು ಬದಲು ಉಪ್ಪು ಹಾಕಿ ಊಟ ವಿತರಿಸಿದ ಶಾಲೆ
ಸರ್ಕಾರಿ ಶಾಲಾ ಮಕ್ಕಳಿಗೆ ಸವಲತ್ತು ನೀಡುವುದಕ್ಕಾಗಿ ಸರ್ಕಾರ ಸರ್ವ ಶಿಕ್ಷಾ ಅಭಿಯಾನ, ಬಿಸಿ ಊಟ, ನಲಿಕಲಿ ಮುಂತಾದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಆದರೆ ಇದು ತಲುಪಬೇಕಾದಲ್ಲಿಗೆ ಮಾತ್ರ ತಲುಪುತ್ತಿಲ್ಲ. ಇದಕ್ಕೊಂದು ಉತ್ತಮ ನಿದರ್ಶನ ಉತ್ತರಪ್ರದೇಶದ ಅಯೋಧ್ಯೆಯ ಈ ಸರ್ಕಾರಿ ಶಾಲೆಯ ದುಸ್ಥಿತಿ.
ಅಯೋಧ್ಯಾ: ಸರ್ಕಾರಿ ಶಾಲಾ ಮಕ್ಕಳಿಗೆ ಸವಲತ್ತು ನೀಡುವುದಕ್ಕಾಗಿ ಸರ್ಕಾರ ಸರ್ವ ಶಿಕ್ಷಾ ಅಭಿಯಾನ, ಬಿಸಿ ಊಟ, ನಲಿಕಲಿ ಮುಂತಾದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಆದರೆ ಇದು ತಲುಪಬೇಕಾದಲ್ಲಿಗೆ ಮಾತ್ರ ತಲುಪುತ್ತಿಲ್ಲ. ಈ ಯೋಜನೆಗೆ ಬಿಡುಗಡೆಯಾಗುವ ಹಣವನ್ನು ಯಾರೂ ನುಂಗಿ ನೀರು ಕುಡಿಯುತ್ತಿದ್ದಾರೋ ದೇವರೇ ಬಲ್ಲ. ಇದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ. ಇದಕ್ಕೊಂದು ಉತ್ತಮ ನಿದರ್ಶನ ಉತ್ತರಪ್ರದೇಶದ ಅಯೋಧ್ಯೆಯ ಈ ಸರ್ಕಾರಿ ಶಾಲೆಯ ದುಸ್ಥಿತಿ.
ಮಧ್ಹಾಹ್ನದ ಬಿಸಿ ಊಟದ ಯೋಜನೆಯಡಿ ಈ ಶಾಲೆಯಲ್ಲಿ ಶಿಕ್ಷಕರು(Teacher) ವಿದ್ಯಾರ್ಥಿಗಳಿಗೆ (student) ಅನ್ನದ ಜೊತೆ ಉಪ್ಪು ನೀಡಿದ್ದಾರೆ. ಅನ್ನದ ಜೊತೆ ಕನಿಷ್ಟ ಸಾಂಬಾರು, ಪಲ್ಯ, ಉಪ್ಪಿನಕಾಯಿ ಮೊಸರು ಇವುಗಳಲ್ಲಿ ಏನಾದರು ಒಂದನ್ನಾದರೂ ನೀಡಬೇಕು. ಹಾಗಿದ್ದರೆ ಮಾತ್ರ ಅನ್ನವನ್ನು ತಿನ್ನಲು ಸಾಧ್ಯ. ಆದರೆ ಇಲ್ಲಿ ಊಟದ ಜೊತೆ ಶಿಕ್ಷಕರು ಉಪ್ಪು ನೀಡಿದ್ದಾರೆ. ಅಥವಾ ಉಪ್ಪು ಹಾಕಿ ಬೇಯಿಸಿದ ಅನ್ನ ನೀಡಿದ್ದಾರೆ. ಮಕ್ಕಳು ನೆಲದಲ್ಲಿ ಕುಳಿತುಕೊಂಡು ಇದನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋಮ್‌ವರ್ಕ್ ಮಾಡದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಬಡಿದು ಸಾಯಿಸಿದ ಶಿಕ್ಷಕ!
ಅಯೋಧ್ಯೆಯ (Ayodhya) ಚೌರೆ ಬಜಾರ್ ಪ್ರದೇಶದ ದಿವಾ ಪಾಂಡೆ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶರು ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೇ ಶಾಲೆಯ ಮುಖ್ಯೋಪಾಧ್ಯಾಯರ ಅಮಾನತಿಗೆ (suspend) ಆದೇಶ ನೀಡಿದ್ದಾರೆ. ಅಲ್ಲದೇ ಗ್ರಾಮದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸುವಂತೆ ಮಣ್ಣಿನ ನೆಲದಲ್ಲಿ ಕುಳಿತುಕೊಂಡು ಶಾಲಾ ಮಕ್ಕಳು, ಅನ್ನದ ಜೊತೆ ಉಪ್ಪನ್ನು ಕಲಸಿಕೊಂಡು ತಿನ್ನುತ್ತಿರುವುದು ಕಾಣಿಸುತ್ತಿದೆ. ಅಲ್ಲದೇ ನಿಜವಾಗಿಯೂ ಆ ದಿನದ ಮೆನುವಿನ ಪ್ರಕಾರ ಶಾಲಾ ಮಕ್ಕಳಿಗೆ (school children) ಅಂದು ಏನು ಕೊಡಬೇಕು ಹಾಗೂ ಏನು ಕೊಟ್ಟಿದ್ದಾರೆ ಎಂಬುದನ್ನು ಕೂಡ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಸ್ವತಃ ಪ್ರಕರಣ ದಾಖಲಿಸಿಕೊಂಡ ಅಯೋಧ್ಯೆಯ ಜಿಲ್ಲಾ ನ್ಯಾಯಾಧೀಶ ನಿತೀಶ್ ಕುಮಾರ್ (Nitish Kumar), ಶಾಲೆಯ ಮುಖ್ಯಸ್ಥ ಏಕ್ತಾ ಯಾದವ್ ಅವರ ಅಮಾನತಿಗೆ ಆದೇಶಿಸಿದ್ದಾರೆ.
ಶಾಲೆಗಳಲ್ಲಿ 'ಭಜನೆ', 'ಸೂರ್ಯ ನಮಸ್ಕಾರ' ನಿಲ್ಲಿಸುವಂತೆ Kashmir ಮುಸ್ಲಿಂ ಸಂಘಟನೆ ಮನವಿ
ಕೆಲ ಮೂಲಗಳ ಪ್ರಕಾರ ಈ ಶಾಲೆಯೂ ಗ್ರಾಮಕ್ಕೆ ಹತ್ತಿರವಾಗಿದ್ದು, ಅನೇಕ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು (midday meal programme) ತೆಗೆದುಕೊಂಡು ಭೋಜನ ವಿರಾಮದ ವೇಳೆ ಮನೆಗೆ ಓಡಿ ಬಿಡುತ್ತಾರೆ. ಹೀಗಾಗಿ ಈ ಉಪ್ಪನ್ನದ ವಿಚಾರ ಪೋಷಕರ ಗಮನಕ್ಕೆ ಬಂದಿದೆ. ಇದು ಎಲ್ಲರಿಗೂ ತಿಳಿಯುತ್ತಿದ್ದಂತೆ ಹಲವು ಪೋಷಕರು ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ಮಾಡಬೇಕು ಹಾಗೂ ಆಗಾಗ ಶಾಲೆಗಳಿಗೆ ಸರ್‌ಫ್ರೈಸ್ ಆಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಯೋಧ್ಯಾ ಜಿಲ್ಲಾ ನ್ಯಾಯಾಧೀಶರಾದ ನಿತೀಶ್ ಕುಮಾರ್, ವಿಡಿಯೋ ನೋಡಿ ನಾವು ಕೂಡಲೇ ತನಿಖೆಗೆ ಆದೇಶಿಸಿದ್ದೇವೆ. ಅಲ್ಲದೇ ಕೂಡಲೇ ಪ್ರಾಂಶುಪಾಲರನ್ನು ಸಸ್ಪೆಂಡ್ ಮಾಡುವಂತೆ ಆದೇಶಿಸಿದ್ದೇನೆ. ಅಲ್ಲದೇ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು. ಅಯೊಧ್ಯೆಯಲ್ಲಿ ದೇಗುಲ ನಿರ್ಮಾಣಕ್ಕೆ ಕೋಟಿ ಕೋಟಿ ರೂಪಾಯಿಯನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಆದರೆ ಶಾಲೆಯ ಸ್ಥಿತಿ ಹೀಗಿದೆ ಎಂದು ಅಶೋಕ್ ಸ್ವೈನ್ ಎಂಬುವವರು ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.