ಶಾಲೆಗಳಲ್ಲಿ 'ಭಜನೆ', 'ಸೂರ್ಯ ನಮಸ್ಕಾರ' ನಿಲ್ಲಿಸುವಂತೆ Kashmir ಮುಸ್ಲಿಂ ಸಂಘಟನೆ ಮನವಿ

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ‘ರಘುಪತಿ ರಾಘವ ರಾಜಾ ರಾಮ್’ ಎಂದು ಹಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಕಾಶ್ಮೀರದ ಮುಸ್ಲಿಂ ಗುರುತನ್ನು ಹಾಳುಮಾಡುವ ಪ್ರಯತ್ನಗಳ ಬಗ್ಗೆ ಈ ಸಂಘಟನೆ ಗಂಭೀರ ಕಳವಳ ವ್ಯಕ್ತಪಡಿಸಿತು.

muslim body in kashmir urges government to stop bhajans surya namaskar in schools ash

ಶಾಲೆಗಳಲ್ಲಿ ಭಜನೆ (Bhajans) ಮತ್ತು ಸೂರ್ಯ ನಮಸ್ಕಾರಗಳಂತಹ (Surya Namaskar) ಅಭ್ಯಾಸಗಳನ್ನು ನಿಲ್ಲಿಸುವಂತೆ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಸಂಬಂಧಿಸಿದ ಸಂಸ್ಥೆಗಳನ್ನು ಮನವಿ ಮಾಡಿದೆ. ಇದರಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದೂ ಹೇಳಿದೆ. ಮುತ್ತಹಿದಾ ಮಜ್ಲಿಸ್-ಎ-ಉಲೇಮಾ (Muttahida Majlis e Ulema) (MMU) ಕಾಶ್ಮೀರದ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಮೂಹವಾಗಿದ್ದು, ಇದು ಸರ್ಕಾರಕ್ಕೆ ಈ ರೀತಿ ಮನವಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ‘ರಘುಪತಿ ರಾಘವ ರಾಜಾ ರಾಮ್’ (Raghupati Raghav Raja Ram) ಎಂದು ಹಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಈ ರೀತಿ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದೂ ಸ್ತೋತ್ರಗಳನ್ನು ಹಾಡಲು ಮತ್ತು 'ಸೂರ್ಯ ನಮಸ್ಕಾರ' ಮಾಡುವಂತೆ ಹೇಳುವ ಮೂಲಕ ಕಾಶ್ಮೀರದ ಮುಸ್ಲಿಂ ಗುರುತನ್ನು ಹಾಳುಮಾಡುವ ಪ್ರಯತ್ನಗಳ ಬಗ್ಗೆ ಈ ಸಂಘಟನೆ ಗಂಭೀರ ಕಳವಳ ವ್ಯಕ್ತಪಡಿಸಿತು.

“ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಂದೂ ಧಾರ್ಮಿಕ ಗೀತೆಗಳನ್ನು (Hindu Religious Songs) ಹಾಡಲು ಮತ್ತು ಸೂರ್ಯ ನಮಸ್ಕಾರ (Surya Namaskar) ಮಾಡುವಂತೆ ಹೇಳುವ ಮೂಲಕ ಕಾಶ್ಮೀರದ ಮುಸ್ಲಿಂ ಗುರುತನ್ನು ಹಾಳುಮಾಡಲು ದುರದೃಷ್ಟಕರ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುತ್ತಹಿದಾ ಮಜ್ಲಿಸ್-ಎ-ಉಲೇಮಾ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಜಾಮಾ ಮಸೀದಿಯಲ್ಲಿ ಸಭೆ ನಡೆಸಿದೆ. ಈ ಆದೇಶಗಳು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ ಮತ್ತು ಅವರಲ್ಲಿ ತಲ್ಲಣ ಉಂಟುಮಾಡುತ್ತವೆ ಎಂದು ಸಂಘಟನೆ ಹೇಳಿದೆ. ಸಭೆಯಲ್ಲಿ, ಮುಸ್ಲಿಂ ಗುರುತನ್ನು "ದುರ್ಬಲಗೊಳಿಸಲು" ಆಳವಾದ ಮತ್ತು ಗಂಭೀರ ಕಾಳಜಿಯನ್ನು ವ್ಯಕ್ತಪಡಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಇದನ್ನು ಓದಿ: ಭಜನೆ ಮಾಡಿದ ಕೂಡಲೇ ಹಿಂದೂಗಳಾಗುತ್ತಾರಾ: Mehbooba Mufti ಹೇಳಿಕೆಗೆ Farooq Abdullah ಆಕ್ರೋಶ

ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ಮತ್ತು ಬೆಳಗಿನ ಪ್ರಾರ್ಥನೆಯ ಹೆಸರಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಭಜನೆ ಮಾಡುವ ಮತ್ತು ಕೆಲವೊಮ್ಮೆ ಸೂರ್ಯ ನಮಸ್ಕಾರ ಮಾಡುವಂತೆ ಮಾಡುವ ಕಾಯ್ದೆಗಳ ವಿರುದ್ಧ ಸಭೆಯು ನಿರ್ಣಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ನಮ್ಮ ಧಾರ್ಮಿಕ ಆಚರಣೆಗಳ ಮೂಲಭೂತವಾದಕ್ಕೆ ವಿರುದ್ಧವಾಗಿದೆ ಎಂದೂ ಮುತ್ತಹಿದಾ ಮಜ್ಲಿಸ್-ಎ-ಉಲೇಮಾ ಸಂಘಟನೆ ಹೇಳಿಕೆ ನೀಡಿದೆ.

ಇಂತಹ ಚಟುವಟಿಕೆಗಳನ್ನು ಕಾಶ್ಮೀರದಲ್ಲಿ ಮುಸ್ಲಿಮರು ಸಹಿಸುವುದಿಲ್ಲ ಮತ್ತು ಇದು ಅವರ ಧಾರ್ಮಿಕ ಮತ್ತು ಇಸ್ಲಾಮಿಕ್ ನಂಬಿಕೆಗಳಿಗೆ ನೇರ ಸವಾಲು ಎಂದು  ಮುತ್ತಹಿದಾ ಮಜ್ಲಿಸ್-ಎ-ಉಲೇಮಾ ಹೇಳಿಕೆಯ ಮೂಲಕ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಸಂಬಂಧಿಸಿದ ಸಂಸ್ಥೆಗಳನ್ನು ಮನವಿ ಮಾಡಿದೆ. ಹಾಗಾಗಿ, ತನ್ನ ಆದೇಶಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸುವ ಮತ್ತು ಅವರಿಗೆ ದುಃಖವನ್ನುಂಟುಮಾಡುವ ಈ ಆಚರಣೆಗಳನ್ನು ನಿಲ್ಲಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತದೆ ಎಂದೂ ಈ ಸಂಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಹೇಳಿಕೆ ಮೂಲಕ ತಿಳಿಸಿದೆ.

ಇದನ್ನೂ ಓದಿ: 'ಈಶ್ವರ ಅಲ್ಲಾ ತೇರೇ ನಾಮ್‌..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!

Latest Videos
Follow Us:
Download App:
  • android
  • ios