ಹೋಮ್‌ವರ್ಕ್‌ ಮಾಡದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಬಡಿದು ಸಾಯಿಸಿದ ಶಿಕ್ಷಕ!

ಹೋಮ್‌ವರ್ಕ್‌ ಮಾಡಿಲ್ಲ ಎನ್ನುವ ಕಾರಣಕ್ಕೆ ಮೂರನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನನ್ನು ಶಿಕ್ಷಕ ಭೀಕರವಾಗಿ ಥಳಿಸಿ, ಸಾಯಿಸಿದ ಘಟನೆ ನಡೆದಿದೆ. ಬಿಹಾರ ರಾಜ್ಯದ ಗಯಾದಲ್ಲಿ ಘಟನೆ ನಡೆದಿದ್ದು, ಇದರ ಬೆನ್ನಲ್ಲಿಯೇ ಸ್ಥಳೀಯರು ಶಾಲೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.
 

gaya in bihar Teacher beats 6 year old student for not doing homework death san

ಪಾಟ್ನಾ (ಸೆ. 29): ಹೋಮ್‌ವರ್ಕ್‌ ಮಾಡಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕನೊಬ್ಬ, ಪುಟ್ಟ ವಿದ್ಯಾರ್ಥಿಗೆ ಭೀಕರವಾಗಿ ಥಳಿಸಿ, ಸಾಯಿಸಿದ ಘಟನೆ ನಡೆದಿದೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದೆ. ಶಾಲೆಯ ಹಾಸ್ಟೆಲ್‌ನಲ್ಲಿಯೇ ತಂಗಿದ್ದ 6 ವರ್ಷದ ಹುಡುಗ ಮೂರನೇ ತರಗತಿಯಲ್ಲಿ ಓದುತ್ತಿದ್ದ. ಪೊಲೀಸರ ಮಾಹಿತಿಯ ಪ್ರಕಾರ, ಬುಧವಾರ ಶಾಲೆಯ ಘೇಟ್‌ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗು ಪತ್ತೆಯಾಗಿತ್ತು ಎಂದು ಹೇಳಿದ್ದಾರೆ. ಪೊಲೀಸರು ಮಗುವನ್ನು ನೋಡಿದ ವೇಳೆ, ಆತನ ಮುಖ ಸಂಪೂರ್ಣವಾಗಿ ಊದಿಕೊಂಡಿತ್ತು. ಆತನ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅಲ್ಲದೆ, ಶಾಲೆಯ ಸಮವಸ್ತ್ರ ಕೂಡ ಸಂಪೂರ್ಣವಾಗಿ ಹರಿದುಹೋಗಿತ್ತು. ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಸಾಗಿಸಿದರೂ, ಮಾರ್ಗಮಧ್ಯದಲ್ಲಿಯೇ ಹುಡುಗ ಸಾವು ಕಂಡಿದ್ದಾರೆ. 6 ವರ್ಷದ ಹುಡುಗ, ವಜೀರ್‌ಗಂಜ್-ಫತೇಪುರ್ ರಸ್ತೆಯಲ್ಲಿರುವ ಬಧಿ ಬಿಘಾ ಗ್ರಾಮದ ಬಳಿ ಇರುವ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದ. ಹುಡುಗನ ಮನೆ ಶಾಲೆಯಿಂದ ಮೂರು ಕಿಲೋಮೀಟರ್‌ ದೂರದಲ್ಲಿದ್ದ ಕಾರಣಕ್ಕೆ ಹುಡುಗನನ್ನು ಶಾಲೆಯ ಹಾಸ್ಟೆಲ್‌ನಲ್ಲಿಯೇ ಇರಿಸಿದ್ದರು. ಮಗು ಸಾವು ಕಂಡಿದ್ದು ತಿಳಿದ ಕೂಡಲೇ, ಹುಡುಗನ ಕುಟುಂಬದವರು ಶಾಲೆಯ ಎದುರು ಪ್ರತಿಭಟನೆಗೆ ಇಳಿದಿದ್ದಾರೆ.

ಪ್ರತಿಭಟನೆ ತೀವ್ರವಾದ ಬಳಿಕ ಪೊಲೀಸರು ಶಾಲಾ ನಿರ್ದೇಶಕ (School Director Vikas Singh) ವಿಕಾಸ್ ಸಿಂಗ್ ಅವರನ್ನು ಬುಧವಾರ ಸಂಜೆ ಬಂಧಿಸಿದ್ದಾರೆ. 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮಗುವಿನ (Bihar) ಸಾವಿನ ನಂತರ ಶಾಲೆಯನ್ನೂ ಮುಚ್ಚಲಾಗಿದೆ. ಹಾಸ್ಟೆಲ್‌ನಲ್ಲಿರುವ ಎಲ್ಲಾ ಮಕ್ಕಳನ್ನು ಮನೆಗೆ  (Gaya)ಕಳುಹಿಸಲಾಗಿದೆ.

ಈ ಹಿಂದೆಯೂ ಹಲ್ಲೆಗೆ ದೂರು ನೀಡಿದ್ದೆವು, ಈಗ ಶಿಕ್ಷಕ ಸರಿಯಾಗಿದ್ದಾನೆ ಎಂದುಕೊಂಡಿದ್ದೆವು: ನನ್ನ ಮೊಮ್ಮಗನನ್ನು ಶಾಲೆ ಹಾಗೂ ಆಡಳಿತ ಮಂಡಳಿಯೇ ಕೊಲೆ ಮಾಡಿದೆ ಎಂದು ಮಗುವಿನ ಅಜ್ಜ ರಾಮಬಾಲಕ್ ಪ್ರಸಾದ್ (Ram Balak Prasad) ಆರೋಪಿಸಿದ್ದಾರೆ. ಹಲ್ಲೆಯ ಬಗ್ಗೆ ಈ ಹಿಂದೆಯೂ ದೂರು ನೀಡಲಾಗಿತ್ತು, ಆದರೆ ಈಗ ಹಾಗಾಗುವುದಿಲ್ಲ ಎಂದು ಶಾಲೆಯವರು ಹೇಳಿದ್ದರು. ಅದರ ನಂತರ ಎಲ್ಲವೂ ಸರಿಯಾಗಿತ್ತು. ಅಜ್ಜ, ತನ್ನ ಮೊಮ್ಮಗ ವಿವೇಕ್ ಕುಮಾರ್‌ನನ್ನು (Vivek Kumar) ಶಿಕ್ಷಕ ವಿಕಾಸ್ ಕುಮಾರ್ ಸಿಂಗ್ (Vikas Kumar Singh) ಹೊಡೆದು ಶಾಲೆಯಿಂದ ಹೊರಹಾಕಿದ್ದ. ನಂತರ ಅವನು ಶಾಲೆಯ ಹೊರಗೆ ಸ್ವಲ್ಪ ದೂರದಲ್ಲಿ ಗಂಟೆಗಳ ಕಾಲ ಪ್ರಜ್ಞಾಹೀನನಾಗಿ ಬಿದ್ದಿದ್ದ ಎಂದಿದ್ದಾರೆ.

'ಈ ಮಧ್ಯೆ ನನ್ನ ಗ್ರಾಮದ ಉಖ್ದಾ ನಿವಾಸಿ ಬಂಟಿ ರಾಜವಂಶಿ ಅದೇ ಮಾರ್ಗದಲ್ಲಿ ಹಾದು ಹೋಗುತ್ತಿದ್ದರು. ರಸ್ತೆ ಬದಿಯಲ್ಲಿ ವಿವೇಕ್ ನನ್ನು ಕಂಡಾಗ ಆತನನ್ನು ಎತ್ತಿಕೊಂಡು ಮನೆಗೆ ಕರೆತಂದರು. ನಾವು ಅವನನ್ನು ಶಾಲೆಗೆ ಕರೆದೊಯ್ದು ನಂತರ ಪೊಲೀಸ್ ಠಾಣೆಗೆ ಕರೆದೊಯ್ದೆವು, ಆದರೆ ಪೊಲೀಸರು ಅವನಿಗೆ ಮೊದಲು ಚಿಕಿತ್ಸೆ ನೀಡುವಂತೆ ಹೇಳಿದ್ದರು. ನಂತರ ಅವನನ್ನು ಗಯಾಗೆ ಕಳುಹಿಸಲಾಗಿತ್ತು.  ಆದರೆ, ನನ್ನ ಮೊಮ್ಮಗ ಮಾರ್ಗಮಧ್ಯದಲ್ಲಿಯೇ ಸಾವು ಕಂಡಿದ್ದಾನೆ ಎಂದು ಗೋಗರೆದಿದ್ದಾರೆ.

ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ, ಫೋಟೊ ತೆಗೆದು ವಾಟ್ಸ್‌ಆಪ್‌ನಲ್ಲಿ ಹಂಚಿದ ಶಿಕ್ಷಕ

ವಜೀರಗಂಜ್ ಸಿಎಚ್ ಸಿಯ ಡಾ.ರವಿಶಂಕರ್ ಕುಮಾರ್, ವಿವೇಕ್ ಇಲ್ಲಿಗೆ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ದೇಹದ ಮೇಲ್ಭಾಗ ಸಂಪೂರ್ಣ ಊದಿಕೊಂಡಿತ್ತು ಹೊರಗಡೆಯೂ ಚಿಕಿತ್ಸೆ ಪಡೆಯುವ ಬಗ್ಗೆ ಮನೆಯವರಿಗೆ ತಿಳಿಸಿದ್ದೆ. ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಎಎನ್‌ಎಂಸಿಎಚ್‌ಗೆ ಕಳುಹಿಸಲಾಯಿತು. ವಿವೇಕ್‌ನ ಕುಟುಂಬ, ಮಗುವನ್ನು ಬರ್ಬರವಾಗಿ ಥಳಿಸಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಎಸ್‌ಎಚ್‌ಒ ರಾಮೇಕ್ಬಾಲ್ ಪ್ರಸಾದ್ ಯಾದವ್ ಹೇಳಿದ್ದಾರೆ.

Real Story: ಗಣಿತ ಶಿಕ್ಷಕರ ಪತ್ನಿ ಮೇಲೆ ಶುರುವಾಗಿತ್ತು ಪ್ರೀತಿ

ಗಯಾದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ ಥಳಿತದಿಂದ ವಿದ್ಯಾರ್ಥಿ ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಜಿಡಿ ಗೋಯೆಂಕಾ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ ಕೃಷ್ಣ ಪ್ರಕಾಶ್ ಕೂಡ ಸಾವನ್ನಪ್ಪಿದ್ದ. ಇದರ ತನಿಖೆ ಇನ್ನೂ ನಡೆಯುತ್ತಿದೆ.

Latest Videos
Follow Us:
Download App:
  • android
  • ios